ತುಮಕೂರು: ನಟಿ ಮಾಲಾಶ್ರೀ ಪತಿ, ನಿರ್ಮಾಪಕ ಕೋಟಿ ರಾಮು ಅವರು ಅಂತ್ಯ ಸಂಸ್ಕಾರ ಇಂದು ಅವರ ಹುಟ್ಟೂರು, ಕುಣಿಗಾಲ್​​ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಕೊರೊನಾ ಮಾರ್ಗ ಸೂಚಿ ಅನ್ವಯ ನಡೆಯಿತು.

ಕೊರೊನಾದಿಂದಾಗಿ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ನಿನ್ನೆ ರಾಮು ಅವರು ಕೊನೆಯುಸಿರೆಳೆದಿದ್ದರು. ಇಂದು ರಾಮು ಅವರ ಪಾರ್ಥೀವ ಶರೀರವನ್ನ ಹುಟ್ಟೂರಿನತ್ತ ಕೊಂಡೊಯ್ಯಲಾಗಿತ್ತು. ಕೊರೊನಾ ನಿಯಮಗಳ ಅನ್ವಯ ಪತ್ನಿ ಮಾಲಾಶ್ರೀ ಹಾಗೂ ಕುಟುಂಬದ ಕೆಲವರು ಮಾತ್ರ ಜೊತೆಯಲ್ಲಿ ತೆರಳಿದ್ದರು.

ವಾರದ ಹಿಂದೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ರಾಮು ಅವರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಇಹಲೋಕ ತ್ಯಜಿಸಿದ್ದರು.

 

The post ಹುಟ್ಟೂರಿನಲ್ಲಿ ನಿರ್ಮಾಪಕ ರಾಮು ಅಂತ್ಯ ಸಂಸ್ಕಾರ appeared first on News First Kannada.

Source: newsfirstlive.com

Source link