‘ಹುಡುಗರು’ ಚಿತ್ರದ ಶೂಟಿಂಗ್​ ವೇಳೆ ಪುನೀತ್​ ಹೇಗೆ ಇರ್ತಿದ್ರು? ಆ ದಿನಗಳ ಮೆಲುಕು ಹಾಕಿದ ಶ್ರೀನಗರ ಕಿಟ್ಟಿ | Srinagar Kitty recalls Hudugaru Kannada movie shooting days with Puneeth Rajkumar


ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಪ್ರತಿ ದಿನವೂ ಒಂದಿಲ್ಲೊಂದು ರೀತಿಯಲ್ಲಿ ಸ್ಮರಿಸಿಕೊಳ್ಳುತ್ತಾರೆ. ಅದರಲ್ಲೂ ಪುನೀತ್​ ಜೊತೆ ಕೆಲಸ ಮಾಡುವ ಅವಕಾಶ ಪಡೆದಿದ್ದವರಿಗೆ ಹೆಚ್ಚು ನೆನಪುಗಳು ಕಾಡುತ್ತವೆ. ನಟ ಶ್ರೀನಗರ ಕಿಟ್ಟಿ ಅವರು ‘ಹುಡುಗರು’ (Hudugaru Kannada Movie) ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​ ಜೊತೆ ತೆರೆ ಹಂಚಿಕೊಂಡಿದ್ದರು. ಆ ಸಿನಿಮಾದಲ್ಲಿ ಹೀರೋ ಸ್ನೇಹಿತರ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಮತ್ತು ಲೂಸ್​ ಮಾದ ಯೋಗಿ ಅಭಿನಯಿಸಿದ್ದರು. ಮೂರು ಮುಖ್ಯ ಪಾತ್ರಗಳ ಮೇಲೆ ಕಥೆ ಮೂಡಿಬಂದಿತ್ತು. ಹಾಗಾಗಿ ಪುನೀತ್​ ಜೊತೆ ಹೆಚ್ಚು ದಿನಗಳ ಕಾಲ ಶೂಟಿಂಗ್​ನಲ್ಲಿ ಭಾಗವಹಿಸಲು ಕಿಟ್ಟಿಗೆ ಅವಕಾಶ ಸಿಕ್ಕಿತ್ತು. ಆ ನೆನಪುಗಳನ್ನು ಅವರು ಈಗ ಪುನಃ ನೆನಪು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ‘ರಾಜಿ’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಶ್ರೀನಗರ ಕಿಟ್ಟಿ (Srinagar Kitty) ಗೆಸ್ಟ್​ ಆಗಿ ಆಗಮಿಸಿದ್ದರು. ಆ ವೇಳೆ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡರು.

TV9 Kannada


Leave a Reply

Your email address will not be published.