‘ಹುಡುಗರು ಶರ್ಟ್​ಲೆಸ್​ ಆಗಿದ್ರೆ ನಂಗೆ ಇಷ್ಟ ಆಗಲ್ಲ’; ಡೇಟಿಂಗ್​ ಬಗ್ಗೆ ನೇರವಾಗಿ ಮಾತಾಡಿದ ರಶ್ಮಿಕಾ | Rashmika Mandanna shares her opinion about boys profile picture on dating Apps


‘ಹುಡುಗರು ಶರ್ಟ್​ಲೆಸ್​ ಆಗಿದ್ರೆ ನಂಗೆ ಇಷ್ಟ ಆಗಲ್ಲ’; ಡೇಟಿಂಗ್​ ಬಗ್ಗೆ ನೇರವಾಗಿ ಮಾತಾಡಿದ ರಶ್ಮಿಕಾ

ರಶ್ಮಿಕಾ ಮಂದಣ್ಣ

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಬಹುಭಾಷೆಯಲ್ಲಿ ಮಿಂಚುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೇ ಅನೇಕ ಜಾಹೀರಾತುಗಳಲ್ಲೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರ ರೂಪದರ್ಶಿ ಆಗಿದ್ದಾರೆ. ಅವುಗಳ ಪ್ರಮೋಷನ್​ ಸಲುವಾಗಿ ಅವರು ಅನೇಕ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಾರೆ. ಇತ್ತೀಚೆಗೆ ರಶ್ಮಿಕಾ ಒಂದು ಡೇಟಿಂಗ್​ ಆ್ಯಪ್​ (Dating App) ಸಂಬಂಧಿಸಿದ ಟಾಕ್​ ಶೋನಲ್ಲಿ ಭಾಗಿ ಆಗಿದ್ದರು. ಆ ವೇಳೆ ಅವರಿಗೆ ಡೇಟಿಂಗ್​ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಅವುಗಳಿಗೆ ‘ಕಿರಿಕ್​ ಬ್ಯೂಟಿ’ ನೇರವಾಗಿ ಉತ್ತರ ನೀಡಿದ್ದಾರೆ. ಡೇಟಿಂಗ್​ ಆ್ಯಪ್​ನಲ್ಲಿ ಹುಡುಗರ ಪ್ರೊಫೈಲ್​ ಫೋಟೋ ಹೇಗಿರಬೇಕು? ಯುವಕರ ಬಾಡಿ ಹೇಗೆ ಫಿಟ್​ ಆಗಿರಬೇಕು? ಡೇಟಿಂಗ್​ ಮಾಡಲು ವಯಸ್ಸು ಮುಖ್ಯವೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.

ಆಧುನಿಕ ಜಗತ್ತಿನಲ್ಲಿ ಡೇಟಿಂಗ್​ ಟ್ರೆಂಡ್​ ಹೆಚ್ಚುತ್ತಿದೆ. ಅದಕ್ಕಾಗಿಯೇ ಅನೇಕ ಆ್ಯಪ್​ಗಳು ಕೂಡ ಇವೆ. ಆ ಪೈಕಿ ಟಿಂಡರ್​ ಹೆಚ್ಚು ಫೇಮಸ್​ ಆಗಿದೆ. ಅದರ ಟಾಕ್​ ಶೋನಲ್ಲಿ ರಶ್ಮಿಕಾ ಮನಬಿಚ್ಚಿ ಮಾತನಾಡಿದ್ದಾರೆ. ‘ನಾನು ಓದಿದ್ದು ಬೋರ್ಡಿಂಗ್​ ಶಾಲೆಯಲ್ಲಿ. ಆ ಸ್ಕೂಲ್​ನಲ್ಲಿ ಒಬ್ಬ ಹುಡುಗನನ್ನು ಕಣ್ಣಿಟ್ಟು ನೋಡಿದರೆ ಸಾಕು, ಅದನ್ನೇ ಡೇಟಿಂಗ್​ ಎನ್ನಲಾಗುತ್ತಿತ್ತು’ ಎಂದು ರಶ್ಮಿಕಾ ನಗೆ ಚಟಾಕಿ ಹಾರಿಸಿದ್ದಾರೆ. ನಂತರ ಅವರು ಡೇಟಿಂಗ್​ ಆ್ಯಪ್​ಗಳಲ್ಲಿ ಶರ್ಟ್​ಲೆಸ್​ ಫೋಟೋ ಹಾಕುವ ಹುಡುಗರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ಚೆನ್ನಾಗಿ ವರ್ಕೌಟ್​ ಮಾಡಿ, ದೇಹವನ್ನು ಫಿಟ್​ ಆಗಿರಿಸಿಕೊಳ್ಳುವ ಹುಡುಗರನ್ನು ನಾನು ಹೊಗಳುತ್ತೇನೆ. ಅದು ಅವರ ಬದ್ಧತೆಯನ್ನು ತೋರಿಸುತ್ತದೆ. ಆದರೂ ಕೂಡ ಅವರು ಶರ್ಟ್​ ಲೆಸ್​ ಫೋಟೋವನ್ನು ಯಾಕೆ ತಮ್ಮ ಪ್ರೊಫೈಲ್​ಗೆ ಹಾಕಬೇಕು? ನನಗೆ ಇದು ಅರ್ಥವಾಗುವುದೇ ಇಲ್ಲ. ಈ ವಿಚಾರದಲ್ಲಿ ನಾನು ಸ್ವಲ್ಪ ಹಳೇ ಕಾಲದ ಆಲೋಚನೆ ಹೊಂದಿದ್ದೇನೆ’ ಎಂದು ರಶ್ಮಿಕಾ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಅವರಿಗೆ 25 ವರ್ಷ ವಯಸ್ಸು. ತಮಗಿಂತ ಚಿಕ್ಕ ವಯಸ್ಸಿನ ಹುಡುಗನ ಜೊತೆ ಡೇಟಿಂಗ್​ ಮಾಡುವ ಬಗ್ಗೆ ಅವರ ಅಭಿಪ್ರಾಯ ಏನು ಎಂದು ಪ್ರಶ್ನಿಸಲಾಯಿತು. ಅದಕ್ಕೆ ತುಂಬ ಬುದ್ಧಿವಂತಿಕೆಯಿಂದ ಅವರು ಉತ್ತರ ನೀಡಿದ್ದಾರೆ. ‘ವಯಸ್ಸು ಮುಖ್ಯವಾಗುವುದಿಲ್ಲ. ವ್ಯಕ್ತಿ ಮುಖ್ಯವಾಗುತ್ತಾರೆ’ ಎಂದು ರಶ್ಮಿಕಾ ಹೇಳಿದ್ದಾರೆ.

ಸಿನಿಮಾ ವಿಚಾರಕ್ಕೆ ಬರೋದಾದ್ರೆ ರಶ್ಮಿಕಾ ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಎಲ್ಲ ಭಾಷೆಯ ಚಿತ್ರರಂಗದಲ್ಲೂ ಸ್ಟಾರ್​ ನಟರ ಸಿನಿಮಾಗಳಿಗೆ ಅವರೇ ನಾಯಕಿ ಆಗಬೇಕು ಎಂದು ನಿರ್ಮಾಪಕರು ಬೇಡಿಕೆ ಇಡುತ್ತಿದ್ದಾರೆ. ತೆಲುಗು, ತಮಿಳು ಮಾತ್ರವಲ್ಲದೇ ಹಿಂದಿಯಲ್ಲೂ ಅವರ ಹವಾ ಹೆಚ್ಚಿದೆ. ಅಮಿತಾಭ್​ ಬಚ್ಚನ್​, ಸಿದ್ದಾರ್ಥ್​ ಮಲ್ಹೋತ್ರಾ ಅವರಂತಹ ಸ್ಟಾರ್​ ಕಲಾವಿದರ ಜೊತೆ ತೆರೆಹಂಚಿಕೊಳ್ಳುವ ಚಾನ್ಸ್​ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ.

ಇದನ್ನೂ ಓದಿ:

‘ಪುಷ್ಪ’ ಚಿತ್ರದಲ್ಲಿ ಸಮಂತಾ ಐಟಂ ಡ್ಯಾನ್ಸ್​? ರಶ್ಮಿಕಾ, ಅಲ್ಲು ಅರ್ಜುನ್​ ಸಿನಿಮಾ ಬಗ್ಗೆ ಹೊಸ ಗುಸುಗುಸು

ರಶ್ಮಿಕಾ ಕೈ ಚರ್ಮದ ಬಣ್ಣ ಚೇಂಜ್​ ಆಗಿದ್ದೇಕೆ? ಪರದೆ ಹಿಂದಿನ ಕಹಾನಿ ಬಿಚ್ಚಿಟ್ಟ ಒಂದು ಫೋಟೋ

TV9 Kannada


Leave a Reply

Your email address will not be published. Required fields are marked *