ಹುತಾತ್ಮ ಅರಣ್ಯ ಸಿಬ್ಬಂದಿ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ | Cm Basavaraj Bommai announces Rs 50 lakh ex gratia to families of martyred forest personnel


ಕಾಡಾನೆ ಹಾವಳಿ ತಡೆಯಲು ಹೊಸ ವಿಧಾನ ಬಳಕೆಗೆ ಅನುದಾನ. ರಾಜ್ಯ ಸರ್ಕಾರದಿಂದ 100 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಹುತಾತ್ಮ ಅರಣ್ಯ ಸಿಬ್ಬಂದಿ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬೊಮ್ಮಾಯಿ


ಬೆಂಗಳೂರು: ಹುತಾತ್ಮ ಅರಣ್ಯ ಸಿಬ್ಬಂದಿ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಅರಣ್ಯ ಹುತಾತ್ಮ‌ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುತಾತ್ಮ ಸಿಬ್ಬಂದಿಗೆ ಮೊದಲು 20 ಲಕ್ಷ ಪರಿಹಾರ ನೀಡ್ತಿದ್ರು. ಬಿ.ಎಸ್​.ಯಡಿಯೂರಪ್ಪನವರು 30 ಲಕ್ಷಕ್ಕೆ ಏರಿಕೆ ಮಾಡಿದ್ರು. ಇನ್ಮುಂದೆ 50 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ನೇಮಕಾತಿ ಸಂಬಂಧಿಸಿದ ಎಲ್ಲ ಕೆಲಸ ಸುಲಭವಾಗಿ ಮಾಡ್ತೇವೆ. ಅರಣ್ಯವನ್ನು ನೀವು ರಕ್ಷಣೆ ಮಾಡಿ, ನಾವು ನಿಮ್ಮನ್ನ ರಕ್ಷಿಸ್ತೇವೆ. ಎಕೋ ಸೆನ್ಸಿಟಿವ್ ವಲಯಗಳ ಹೆಚ್ಚಳಕ್ಕೆ ವಿಶೇಷ ಕಾರ್ಯಕ್ರಮ. ಹೊಸ ವಿಧಾನದಲ್ಲಿ ನೈಸರ್ಗಿಕ ಸಂಪತ್ತು ರಕ್ಷಿಸುವ ಕೆಲಸ ಆಗ್ತಿದೆ. ಇಚ್ಛಾಶಕ್ತಿ ತೋರಿದ್ರೆ ಅರಣ್ಯ ಭೂಮಿ ವಲಯ ಹೆಚ್ಚಿಸಬಹುದು ಎಂದು ಹೇಳಿದರು.

ಹೊಸ ವಿಧಾನದಲ್ಲಿ ನೈಸರ್ಗಿಕ ಸಂಪತ್ತು ರಕ್ಷಣೆ ಮಾಡುವ ಕೆಲಸ ಆಗುತ್ತಿದೆ. 21% ರಿಂದ 30% ಅರಣ್ಯ ವಲಯ ಹೆಚ್ಚಳ ಮಾಡಬೇಕು ಅಂತ ಗುರಿ ಇಟ್ಟುಕೊಳ್ಳಲಾಗಿದೆ. ಸ್ವಲ್ಪ ಇಚ್ಚಾಶಕ್ತಿ ಪ್ರದರ್ಶನ ಮಾಡಿದರೆ ಅರಣ್ಯ ಭೂಮಿ ವಲಯ ಹೆಚ್ಚಳ ಮಾಡಬಹುದು ಎಂದು ಹೇಳಿದರು. ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗಳ ತಡೆಗೆ ಕ್ರಮಕೊಳ್ಳಲಾಗುವುದು. ಕಾಡಾನೆಗಳ ಹಾವಳಿಯಿಂದ ಪ್ರಾಣಹಾನಿ, ಬೆಳೆ ನಷ್ಟ ಆಗಿದೆ. ಕಾಡಾನೆ ಹಾವಳಿ ತಡೆಯಲು ಹೊಸ ವಿಧಾನ ಬಳಕೆಗೆ ಅನುದಾನ. ರಾಜ್ಯ ಸರ್ಕಾರದಿಂದ 100 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಅರಣ್ಯ ಕೇವಲ ನಿಸರ್ಗದ ಭಾಗವಲ್ಲ, ನಮ್ಮ ಬದುಕಿನ ಒಂದು ಭಾಗ: ಸಿಎಂ ಬೊಮ್ಮಾಯಿ

ಅರಣ್ಯ ರಕ್ಷಣೆ ಮಾಡುತ್ತ ಹುತಾತ್ಮರಾದ ಎಲ್ಲರಿಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅರಣ್ಯ ಕೇವಲ ನಿಸರ್ಗದ ಭಾಗವಲ್ಲ, ನಮ್ಮ ಬದುಕಿನ ಒಂದು ಭಾಗ. ಅರಣ್ಯ ಮತ್ತು ನಾಗರೀಕತೆಗೆ ಸಂಬಂಧ ಇಲ್ಲ ಎನ್ನುವ ರೀತಿ ನಾವು ವರ್ತಿಸುತ್ತಿದ್ದೇವೆ. ನಮ್ಮೆಲ್ಲರ ಪುಣ್ಯ ಭಾಗ ನಮ್ಮ ದೇಶದಲ್ಲಿ ಅರಣ್ಯ ಇದೆ ಬೆಳೆಸುವುದಕ್ಕೆ ಅವಕಾಶವಿದೆ. ಪಶ್ಚಿಮ ಘಟ್ಟ ಇಲ್ಲದೆ ನಮ್ಮ ರಾಜ್ಯ ಊಹಿಸಲು ಸಾಧ್ಯವಿಲ್ಲ. ಪಶ್ಚಿಮ ಘಟ್ಟ ಇಲ್ಲದಿದ್ದರೆ ಸಮುದ್ರದ ನೀರು ಮಳೆಯಾಗಿ ನಮ್ಮನ್ನು ತಲುಪುತ್ತಿರಲಿಲ್ಲ. ರಾಜ್ಯದ ಉದ್ದಗಲಕ್ಕೂ ನೀರಿನ ಸಂಪತ್ತು ನೋಡುವುದಕ್ಕೆ ಪಶ್ಚಿಮ ಘಟ್ಟದಿಂದಲೇ ಸಾಧ್ಯವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.


ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡದಿದ್ರೆ ಮೋಸ:

ಮಳೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ವಾತಾವರಣ ಬದಲಾಗುತ್ತಿದೆ, ಪ್ರವಾಹಗಳು ಬರುತ್ತಿವೆ. ಮಳೆಯ ಸಮಯ ಪ್ರಮಾಣ ಬದಲಾಗಿದೆ. ಪರಿಸರದಲ್ಲಿನ ಅಸಮತೋಲನ ನಾವು ಸರಿ ಮಾಡಬೇಕಿದೆ. ಇದು ಅನಿವಾರ್ಯ, ಭವಿಷ್ಯದ ದೃಷ್ಟಿಯಿಂದ ಅಗತ್ಯ ಇದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡದಿದ್ರೆ ಮೋಸ ಮಾಡಿದಂತ್ತಾಗುತ್ತದೆ. ಮುಂದಿನ‌ ಪೀಳಿಗೆಯ ಹಕ್ಕನ್ನ ಕಸಿದುಕೊಂಡಂತಾಗುತ್ತದೆ. ಇಂಥ ಸಂದರ್ಭದಲ್ಲಿ ಅರಣ್ಯ ರಕ್ಷಕರು ಶೌರ್ಯ ತೋರಿದ್ದಾರೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

TV9 Kannada


Leave a Reply

Your email address will not be published.