ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನೋಡುತ್ತಾ ನಿಂತಿದ್ದ ಪೊಲೀಸರು ಕಾರ್ಯೋನ್ಮುಖರಾಗಲು ಮೇಲಿನ ಆದೇಶಕ್ಕೆ ಕಾಯುತ್ತಿದ್ದರೆ? | When protesters were raising slogans, police kept watching them, were they waiting orders from superiors? ARB


ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ಏನು ನಡೆಯಿತು ಅಂತ ರಾಜ್ಯದ ಜನತೆಗೆ ಗೊತ್ತಾಗಿದೆ. ಶಾಂತವಾಗಿದ್ದ ರಾಜ್ಯದ ವಾಣಿಜ್ಯ ನಗರಿ (commercial city) ಕೆಲ ದಿನಗಳಿಂದ ಕೋಮು ದಳ್ಳುರಿಯಲ್ಲಿ ಕುದಿಯುತ್ತಿದೆ. ನಗರದಲ್ಲಿ ಈಗಲೂ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಧಾರವಾಡ ಜಿಲ್ಲಾಡಳಿತ (district administration) ಬುಧವಾರದವರೆಗೆ ನಿಷೇಧಾಜ್ಞೆ (prohibitory orders) ಹೇರಿದೆ. ಶನಿವಾರದ ಬಳಿಕ ಯಾವುದೇ ಅಹಿತಕರ ಘಟನೆ ಜರುಗಿಲ್ಲವಾದರೂ, ರಾಜಕೀಯ ಧುರೀಣರು-ಅವರು ಯಾವುದೇ ಪಕ್ಷದವರಾಗಿರಲಿ, ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ನೋಡುತ್ತಾರೆ. ಅವರು ತೆಪ್ಪಗಿದ್ದರೆ ಎಲ್ಲೆಡೆ ತಾನಾಗೇ ಶಾಂತಿ ನೆಲಸುತ್ತದೆ. ಆದರೆ ಜನರು ನೆಮ್ಮದಿಯಿಂದ ಬದುಕುವುದು ಅವರಿಗೆ ಬೇಕಿಲ್ಲ. ಹಾಗಾಗೇ ಬಯಾನ್ ಬಾಜಿ ಜಾರಿಯಲ್ಲಿದೆ. ಶನಿವಾರ ನಡೆದ ಘಟನೆಯ ಬಗ್ಗೆ ಮತ್ತಷ್ಟು ವಿಡಿಯೋಗಳು ಪೊಲೀಸರಿಗೆ ಲಭ್ಯವಾಗಿವೆ. ಅವುಗಳಲ್ಲೊಂದನ್ನು ನೀವು ಇಲ್ಲಿ ನೋಡಬಹುದು.

ಮುಸ್ಲಿಂ ಸಮುದಾಯದ ಸಾವಿರಾರು ಜನ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಆರ್ ಎಸ್ ಎಸ್ ಮುರ್ದಾಬಾದ್ ಅಂತ ಅವರು ಕೂಗುತ್ತಿರುವುದು ಕೇಳಿಸುತ್ತದೆ. ಪ್ರತಿಭಟನಾಕಾರರ ಸುತ್ತ ಜನರಿದ್ದಾರೆ ಮತ್ತು ಪೊಲೀಸರೂ ಇದ್ದಾರೆ. ಸಮವಸ್ತ್ರದಲ್ಲಿರುವ ಪೊಲೀಸರು ಮೂಕ ಪ್ರೇಕ್ಷಕರಂತೆ ಪ್ರತಿಭಟನೆಯನ್ನು ವೀಕ್ಷಿಸುತ್ತಿದ್ದಾರೆ. ಅವರು ಚದುರಿಸುವ ಪ್ರಯತ್ನ ಮಾಡಿದ್ದರೆ ಪ್ರಾಯಶಃ ಹಿಂಸಾಚಾರ, ದಾಂಧಲೆ ನಡೆಯುತ್ತಿರಲಿಲ್ಲವೆನೋ?

ಅದರೆ, ಪೊಲೀಸರ ಸಮಸ್ಯೆ ಏನು ಗೊತ್ತಾ? ಅವರು ಏನೇ ಮಾಡಬೇಕಾದರೂ ಮೇಲಿಂದ ಆದೇಶ ಬರಬೇಕು. ಅವರ ಮೇಲಿನವರು ತಮ್ಮ ಮೇಲಿನವರ ಸೂಚನೆಗಾಗಿ ಪ್ರತೀಕ್ಷೆ ಮಾಡಬೇಕು. ಇದೆಲ್ಲ ಆಗುವಷ್ಟರಲ್ಲಿ ಗಲಾಟೆಗಳು ಸಂಭವಿಸಿ ಬಿಡುತ್ತವೆ.

TV9 Kannada


Leave a Reply

Your email address will not be published.