Categories
News

ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ 5 ಸೋಂಕಿತರ ದುರ್ಮರಣ.. ಆಕ್ಸಿಜನ್ ಕೊರತೆಯೇ ಕಾರಣವಾಯ್ತಾ?

ಹುಬ್ಬಳ್ಳಿ: ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆಯಲ್ಲಿ 5 ಸೋಂಕಿತರು ಸಾವನ್ನಪ್ಪಿರುವ ಘಟನೆ ನಡೆದಿದೆ. ರೋಗಿಗಳ ಕುಟುಂಬಸ್ಥರು ಆಕ್ಸಿಜನ್ ಇಲ್ಲದೇ ಸೋಂಕಿತರು ಸಾವನ್ನಪ್ಪಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಡಿಹೆಚ್ಓ ಯಶವಂತ್ ಮದನಿಕರ ಸೇರಿದಂತೆ ಡಿಸಿಪಿ ರಾಮರಾಜನ್ ಭೇಟಿ ನೀಡಿದ್ದಾರೆ.

ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಡಿಹೆಚ್ ಓ ಯಶವಂತ್ ಮದಿನಕರ.. ಬಹಳ ಜನ ಆಕ್ಸಿಜನ್ ನಿಂದ ಸಾವಾಗಿದೆ ಎನ್ನುತ್ತಿದ್ದಾರೆ. ಆದ್ರೆ ಆಕ್ಸಿಜನ್ ಕೊರತೆಯಿಂದ ಸಾವಾಗಿಲ್ಲ. ಮಧ್ಯಾಹ್ನ 3 ರಿಂದ ಇಲ್ಲಿಯವರೆಗೆ 5 ಜನ ಮೃತಪಟ್ಟಿದ್ದಾರೆ. ಒಂದು ಎಕ್ಸಪರ್ಟ್ ಕಮಿಟಿ ಮಾಡ್ತೇವೆ‌ ತನಿಖೆ ಆದ ಮೇಲೆ ಹೇಳ್ತೇವೆ ಎಂದಿದ್ದಾರೆ.

ಮೃತರೆಲ್ಲರಿಗೂ ಕೊರೊನಾ ಪಾಸಿಟಿವ್ ಧೃಡಪಟ್ಟಿತ್ತು. ಐವರ ಆರೋಗ್ಯ ಸ್ಥಿತಿ ಗಂಭೀರ ಹಿನ್ನಲೆ.. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಏಕಾಎಕಿ ಐಸಿಯುನಲ್ಲಿ ಮೃತಪಟ್ಟಿದ್ದಾರೆ‌. ಹೀಗಾಗೇ ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ. ಆದ್ರೆ ಆಕ್ಸಿಜನ್ ಕೊರತೆಯಿಂದ ಸಾವಾಗಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಮೃತಪಟ್ಟವರ ವಿವರ..

  1. ವಾಣಿ ಜನ್ನು (51) ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿ
  2. ವಿನಯಾ ನಾಯಕ (47) ಶಿರಸಿ ನಿವಾಸಿ
  3. ಬಾಲಚಂದ್ರ ಡಿ‌. (61) ಹುಬ್ಬಳ್ಳಿಯ ನಿವಾಸಿ
  4. ದೇಸಾಯಿಗೌಡ ಪಾಟೀಲ (59)ಮಾಜಿ ಜಿಪಂ‌ ಹಾಗೂ ಪಾಲಿಕೆ ಸದಸ್ಯ
  5. ಸುಶಾಂತ ದ್ರೋಣಾವತ (39) ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿ

The post ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ 5 ಸೋಂಕಿತರ ದುರ್ಮರಣ.. ಆಕ್ಸಿಜನ್ ಕೊರತೆಯೇ ಕಾರಣವಾಯ್ತಾ? appeared first on News First Kannada.

Source: newsfirstlive.com

Source link

Leave a Reply