ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡಿದ ​ಹು-ಧಾ ಪಾಲಿಕೆ – Hubli-Dharwad mayor gave permission to celebrate tipu jayanti in hubli Idgah Maidan


ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಸೇರಿ ಎಲ್ಲ ಜಯಂತಿಗೂ ಅವಕಾಶ ಮಾಡಿಕೊಡಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಮಾಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಹೇಳಿದ್ದಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡಿದ ​ಹು-ಧಾ ಪಾಲಿಕೆ

ಹುಬ್ಬಳ್ಳಿ ಈದ್ಗಾ ಮೈದಾನ

​ಧಾರವಾಡ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ (Hubli Iidga Maidan) ಟಿಪ್ಪು ಜಯಂತಿ (Tippu Jayanti) ಸೇರಿ ಎಲ್ಲ ಜಯಂತಿಗೂ ಅವಕಾಶ ಮಾಡಿಕೊಡಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಮಾಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಹೇಳಿದ್ದಾರೆ. ಇಂದು (ನ.9) ವಿರೋಧ ಪಕ್ಷದ ನಾಯಕರು, ಆಯುಕ್ತರೊಂದಿಗೆ ಮೇಯರ್ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು ಟಿಪ್ಪು , ಕನಕದಾಸ, ಒನಕೆ ಓಬವ್ವ ಜಯಂತಿ ಆಚರಣೆ ಸಂಘಟಕರು ಮನವಿ ಮಾಡಿದ್ದರು. ಹೀಗಾಗಿ ಎಲ್ಲ ಜಯಂತಿಗೂ ಅವಕಾಶ ಮಾಡಿಕೊಟ್ಟಿದ್ದೇವೆ ಎಂದ ತಿಳಿಸಿದ್ದಾರೆ.

ಮನವಿ ಪತ್ರಗಳ ಸುರಿಮಳೆಯೇ ಹರಿದು ಬಂದಿತ್ತು

ಹುಬ್ಬಳ್ಳಿ ಧಾರಾವಾಡ ಮಹಾನಗರ ಪಾಲಿಕೆಗೆ ದೊಡ್ಡ ಸಂಕಷ್ಟವೇ ಎದುರಾಗಿತ್ತು. ಗಣೇಶ ಹಬ್ಬದ ಸಮಯದಲ್ಲಿ ಗಣೇಶೋತ್ಸವಕ್ಕೆ ಹುಬ್ಬಳ್ಳಿ ಮೈದಾನದಲ್ಲಿ ಅವಕಾಶ ಕೊಟ್ಟ ಬೆನ್ನಲ್ಲೇ ಈಗ ಪ್ರತಿ ಆಚರಣೆಗಳಿಗೂ ಅವಕಾಶ ಕೇಳಿ ಅನೇಕ ಸಂಘಟನೆಗಳು ಮನವಿ ಪತ್ರ ಸಲ್ಲಿಸುತ್ತಿದ್ದರು. ಟಿಪ್ಪು ಜಯಂತಿ, ಕನಕ ಜಯಂತಿ ನಡುವೆ ಈಗ ಪಾಲಿಕೆಗೆ ಅನೇಕ ಬೇಡಿಕೆಗಳು ಬಂದಿದ್ದವು.

ಮುಂಬರುವ ಮಾರ್ಚ್ ನಲ್ಲಿ ರತಿ, ಮನ್ಮಥನ ಪ್ರತಿಷ್ಠಾಪನೆಗೆ ಅವಕಾಶ ಕೇಳಿ ಹುಬ್ಬಳ್ಳಿ ಧಾರಾವಾಡ ಮಹಾನಗರ ಪಾಲಿಕೆಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಗಜಾನನ ಮಹಾಮಂಡಳಿ ಹೋಳಿ ಆಚರಣೆಗೆ ಅವಕಾಶ ಕೇಳಿ ಮನವಿ ಸಲ್ಲಿಸಲಾಗಿತ್ತು. ಮತ್ತೊಂದೆಡೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ನವೆಂಬರ್ 11ರಂದು ಈದ್ಗಾ ಮೈದಾನದಲ್ಲಿ ಒನಕೆ ಓಬವ್ಬ ಜಯಂತಿಗೆ ಅವಕಾಶ ಕೇಳಿ ಮನವಿ‌‌ ಸಲ್ಲಿಸಿತ್ತು.

ಟಿಪ್ಪು ಜಯಂತಿಗೆ ಅವಕಾಶ ಕೇಳಿದ ಬೆನ್ನಲ್ಲೆ ವಿವಿಧ ಸಂಘಟಕರು ಈದ್ಗಾ ಮೈದಾನದಲ್ಲಿ ಅವಕಾಶ ಕೇಳಿ‌ ಮನವಿ ಸಲ್ಲಿಸಿದ್ದರು. ಗಣೇಶೋತ್ಸವ ಆಚರಣೆ ಬಳಿಕ ಟಿಪ್ಪು ಜಯಂತಿಗೂ ಅವಕಾಶ ಕೇಳಿ ಸಂಘಟನೆಗಳೂ ಮನವಿ ಮಾಡಿದ್ದವು. ಇದರ ನಡುವೆ ಈಗ ಪಾಲಿಕೆಗೆ ಮನವಿಗಳು ಹೆಚ್ಚಾಗಿದ್ದು ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಗೊಂದಲಕ್ಕೀಡಾಗಿತ್ತು. ಸದ್ಯ ಈ ಗೊಂದಲಗಳಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕ ತೆರೆ ಎಳೆದಿದೆ.

ಈದ್ಗಾ ಮೈದಾನಕ್ಕೆ ಕಿತ್ತೂರು ಚೆನ್ಮಮ್ಮ ಮೈದಾನ ಎಂದು ನಾಮಕರಣಕ್ಕೆ ಬೇಡಿಕೆ

ಇನ್ನು ಇದೆಲ್ಲದರ ನಡುವೆ ಈದ್ಗಾ ಮೈದಾನದಲ್ಲಿ ಭಗವಾ ಧ್ವಜ ಹಾರಾಟ ಮಾಡಲಾಗುತ್ತಿರುವ ರೀತಿಯ ಎಡಿಟೆಟ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ವಿಡಿಯೋ ಎಡಿಟ್ ಮಾಡಿ ಕಿತ್ತೂರ ಚೆನ್ನಮ್ಮ ಮೈದಾನ ಎಂದು ನಾಮಕರಣ ಮಾಡಿದ್ದಾರೆಂದು ಸಂದೇಶ ನೀಡುವ ವಿಡಿಯೋ ವೈರಲ್‌ ಆಗುತ್ತಿದೆ. ಸದ್ಯ ಟಿಪ್ಪು ಜಯಂತಿಗೆ ಅವಕಾಶಕ್ಕೆ ಮನವಿ ಮಾಡಿದ ಬೆನ್ನಲ್ಲೆ ಇಂತಹದೊಂದು ವಿಡಿಯೋ ವೈರಲ್ ಆಗುತ್ತಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.