ಹುಬ್ಬಳ್ಳಿ ಗಲಭೆ: 48 ಸಿಸಿಟಿವಿಗಳ ಪೈಕಿ ಕೇವಲ 21 ಮಾತ್ರ ಕಾರ್ಯ ನಿರ್ವಹಿಸುತ್ತಿರುವುದು ತನಿಖೆಯನ್ನು ವಿಳಂಬಗೊಳಿಸುತ್ತಿದೆ! | Investigation into Hubballi violence hindered thanks to dysfunctional CCTVs in the area ARB


ಹುಬ್ಬಳ್ಳಿ: ಕೇವಲ ತನ್ನ ವ್ಯಾಪಾರ ಮತ್ತು ಲಾಭದ ಬಗ್ಗೆ ಮಾತ್ರ ಯೋಚಿಸುವ ಮತ್ತು ಸಾಮಾಜಿಕ ಹೊಣೆಗಾರಿಕೆಯ ಪ್ರಶ್ನೆ ಬಂದಾಗ ಅನಾಮತ್ತಾಗಿ ನುಣುಚಿಕೊಳ್ಳುವ ವರ್ಟಿಕ್ಸ್ (Vertex) ಹೆಸರಿನ ಕಂಪನಿಯ ಬೇಜವಾಬ್ದಾರಿಯಿಂದಾಗಿ ಹುಬ್ಬಳ್ಳಿಯಲ್ಲಿ ಶನಿವಾರ ಗಲಭೆ ನಡೆಸಿದ ಮತಾಂಧರನ್ನು ಹೆಡೆಮುರಿ ಕಟ್ಟಿ ಸೆರೆಮನೆಗೆ ತಳ್ಳಲು ಅಲ್ಲಿನ ಪೊಲೀಸರಿಗೆ ವಿಳಂಬವಾಗುತ್ತಿದೆ. ವಿಷಯವೇನೆಂದರೆ, ಶನಿವಾರ ರಾತ್ರಿ ಮತಾಂಧರ ಗುಪೊಂದು ದಾಂಧಲೆ (violence) ನಡೆಸಿದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ವರ್ಟಿಕ್ಸ್ ಸಂಸ್ಥೆಯು 48 ಸಿಸಿಟಿವಿ (CCTV) ಅಳವಡಿಸಿದೆ. ಆದರೆ ಆಘಾತ ಹುಟ್ಟಿಸುವ ಸಂಗತಿ ಏನು ಗೊತ್ತಾ? ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕೆಮೆರಾಗಳು ಒಂದೋ ಕಳುವಾಗಿವೆ ಇಲ್ಲವೇ ನಿಷ್ಕ್ರಿಯಗೊಂಡಿವೆ!

ನಿಮಗೆ ಸ್ಪಷ್ಟವಾದ ಚಿತ್ರಣ ನೀಡಬೇಕೆಂದರೆ, 48 ಕೆಮೆರಾಗಳ ಪೈಕಿ 20 ನಿಷ್ಕ್ರಿಯಗೊಂಡಿವೆ ಮತ್ತು 7 ನಾಪತ್ತೆಯಾಗಿವೆ. ಉಳಿದ 21 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕೆಮೆರಾಗಳ ನಿರ್ವಹಣೆ ಹೊತ್ತಿರುವ ವರ್ಟಿಕ್ಸ್ ಕಂಪನಿಯು ಅವುಗಳ ಕಾರ್ಯನಿರ್ವಹಣೆಯನ್ನು ಗಮನಿಸುತ್ತಿರಬೇಕು.

ವಿಪರ್ಯಾಸದ ಸಂಗತಿಯೆಂದರೆ, ಈ ಕೆಲಸವನ್ನು ಸದರಿ ಸಂಸ್ಥೆ ಮಾಡಿಲ್ಲ. ಹಾಗೆ ನೋಡಿದರೆ, ಕೇವಲ ವರ್ಟಿಕ್ಸ್ ಕಂಪನಿಯನ್ನು ದೂರುವುದರಲ್ಲಿ ಅರ್ಥವಿಲ್ಲ. ಪೊಲೀಸರು ಸಹ ಇದಕ್ಕೆ ಹೊಣೆಗಾರರಾಗಿದ್ದಾರೆ. 7 ಕೆಮೆರಾಗಳು ಎಷ್ಟು ದಿನಗಳಿಂದ ನಾಪತ್ತೆಯಾಗಿವೆಯೋ? ಅದು ಅವರ ಪೊಲೀಸರ ಗಮನಕ್ಕೆ ಬಂದಿಲ್ಲವೇ?

ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಸುಳಿವು ತಪ್ಪಿತಸ್ಥರ ಬಗ್ಗೆ ಸುಳಿವು ನೀಡೋದೇ ಈ ಕೆಮೆರಾಗಳು. ಹಾಗಾಗಿ ಅವು ಕಾರ್ಯನಿರ್ವಹಿಸುತ್ತಿವೆಯೋ ಅಂತ ಅವರು ಸಹ ಪರೀಕ್ಷಿಸುತ್ತಿರಬೇಕು. 20 ಕೆಮೆರಾಗಳು ನಿಷ್ಕ್ರಿಯಗೊಂಡಿದ್ದರೂ ಅವರ ಗಮನಕ್ಕೆ ಬಾರದಿರುವುದು ಆಶ್ಚರ್ಯ ಹುಟ್ಟಿಸುತ್ತದೆ ಮಾರಾಯ್ರೇ.

ಗಲಾಟೆ ಶುರುವಾಗುವ ಮೊದಲು ಒಬ್ಬ ಮೌಲ್ವಿ ಸ್ಥಳದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಪ್ರಚೋದನಕಾರಿ ಮಾತುಗಳನ್ನು ಆಡುತ್ತಿರುವ ಮೊಬೈಲ್ ಪುಟೇಜ್ ಪತ್ತೆಯಾಗಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಮೌಲ್ವಿ ನಾಪತ್ತೆಯಾಗಿದ್ದಾನೆ.

ಪೊಲೀಸರು ಲಭ್ಯವಿರುವ ಮಾಹಿತಿಯನ್ನು ಒಟ್ಟುಗೂಡಿಸಿ ತನಿಖೆ ಮುಂದುವರಿಸಿರುವುದು ನಿಜ, ಆದರೆ ಅವರ ಕೆಲಸ ಸರಿಯಾದ ಸಾಕ್ಷ್ಯಾಧಾರಗಳು ಸಿಗುತ್ತಿಲ್ಲವಾದ ಕಾರಣ ವಿಳಂಬಗೊಳ್ಳುತ್ತಿದೆ.

TV9 Kannada


Leave a Reply

Your email address will not be published.