ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಮತ್ತೊಂದು ವಿಘ್ನ ಎದುರಾಗಿದೆ. ತರಾತುರಿಯಲ್ಲಿ ಮತದಾರರ ಕರುಡು ಪಟ್ಟಿ ತಯಾರಿಸಿದ ಪಾಲಿಕೆಗೆ ಹೈಕೋರ್ಟ್ ವಿಭಾಗೀಯ ಪೀಠ ನೋಟಿಸ್ ನೀಡಿ ಶಾಕ್​​ ನೀಡಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನೀಡಲಾದ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಬಸವ ಜನಶಕ್ತಿ ಸಂಘಟನೆಯ ಬಸವರಾಜ ತೇರದಾಳ ಅವರು ಹೈಕೋರ್ಟನಲ್ಲಿ ರಿಟ್​ ಸಲ್ಲಿಸಿದ್ದರು. ಪಾಲಿಕೆ ಪುನರ್​ ವಿಂಗಡಣೆಯಾದ ನಂತರ ಒಟ್ಟು 82 ವಾರ್ಡ್​ಗಳು ಅಸ್ತಿತ್ವಕ್ಕೆ ಬಂದಿದ್ದು, ಮೀಸಲಾತಿ ಅನ್ವಯ 18 ಸ್ಥಾನಗಳನ್ನು ನೀಡಬೇಕು, ಆದರೆ ಪ.ಜಾ ಶೇ.15 ಮತ್ತು ಪ.ಪಂ ಶೇ.3 ಸೇರಿದಂತೆ ಒಟ್ಟು 11 ಸ್ಥಾನಗಳು ಮಾತ್ರ ದೊರೆತಿದ್ದು ಸಂಪೂರ್ಣ ಮೀಸಲಾತಿಯ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿದ್ದಾರೆ. ಅರ್ಜಿಯನ್ನ ಪುರಸ್ಕರಿಸಿದ ವಿಭಾಗೀಯ ಪೀಠ ಪಾಲಿಕೆಗೆ ನೋಟಿಸ್​ ನೀಡಿದೆ. ಈ ಕುರಿತು ವಿವರಣೆ ನೀಡುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ, ರಾಜ್ಯ ಸರ್ಕಾರದ ಕಾರ್ಯದರ್ಶಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

The post ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಮತ್ತೊಂದು ವಿಘ್ನ appeared first on News First Kannada.

Source: newsfirstlive.com

Source link