ಹುಬ್ಬಳ್ಳಿ: ಮದುವೆ ಆಗುವುದಾಗಿ ನಂಬಿಸಿ ಯುವತಿಯ ನಗ್ನ ಫೋಟೊ ಹರಿಬಿಟ್ಟು ಯುವಕನ ವಿಕೃತಿ; ಕೇಸ್ ದಾಖಲು | Hubli Crime News Bengaluru 10 criminals arrested Karnataka Police


ಹುಬ್ಬಳ್ಳಿ: ಮದುವೆ ಆಗುವುದಾಗಿ ನಂಬಿಸಿ ಯುವತಿಯ ನಗ್ನ ಫೋಟೊ ಹರಿಬಿಟ್ಟು ಯುವಕನ ವಿಕೃತಿ; ಕೇಸ್ ದಾಖಲು

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯ ನಗ್ನ ಫೋಟೋ ಹರಿಬಿಟ್ಟು ಯುವಕನೊಬ್ಬ ವಿಕೃತಿ ಮೆರೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಯುವಕ ತನ್ನ ವಾಟ್ಸಫ್ ಸ್ಟೇಟಸ್‌ಗೆ ಯುವತಿಯ ನಗ್ನ ಫೋಟೋ ಹಾಕಿ ವಿಕೃತಿ ಮೆರೆದಿದ್ದಾನೆ. ಮನನೊಂದ ಯವತಿಯಿಂದ ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಸಲುಗೆ ಬೆಳೆಸಿದ್ದ ಯುವಕ ಬಳಿಕ ಹೀಗೆ ಮಾಡಿದ್ದಾನೆ.

ಯುವಕ ವಾಟ್ಸಪ್​ನಲ್ಲಿ ಯುವತಿ ನಗ್ನ ವಿಡಿಯೋ ಸ್ಕ್ರೀನ್ ರೇರ್ಕಾಂಡಿಗ್ ಮಾಡಿದ್ದ. ನಂತರ, ಫೋಟೋ ಎಡಿಟ್ ಮಾಡಿ ವಾಟ್ಸಪ್ ಸ್ಟೇಟಸ್‌ಗೆ ಹಾಕಿ ವಿಕೃತಿ ಮೆರೆದಿದ್ದಾನೆ. ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಪೂರ್ವ ವಿಭಾಗದಲ್ಲಿ 10 ರೌಡಿಗಳ ಅರೆಸ್ಟ್
ಬೆಂಗಳೂರು ಪೂರ್ವ ವಿಭಾಗದಲ್ಲಿ 10 ರೌಡಿಗಳ ಅರೆಸ್ಟ್ ಮಾಡಲಾಗಿದೆ. ಅಮೀನುದ್ದೀನ್ ನಯೀಮ್ ಸೇರಿ 10 ರೌಡಿಗಳ ಸೆರೆ ಆಗಿದೆ. ಅಮೀನುದ್ದೀನ್ ಶಿವಾಜಿನಗರ ಠಾಣೆ ರೌಡಿಶೀಟರ್ ಬಂಧಿಸಲಾಗಿದೆ. ಪದೇಪದೆ ಅಪರಾಧ ಕೃತ್ಯಗಳಲ್ಲಿ ಭಾಗಿ ಹಿನ್ನೆಲೆ ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ಡಿ ಗ್ರೂಪ್​ ನೌಕರರ ಸಂಘದ ಅಧ್ಯಕ್ಷನಿಂದ ಸೈಟ್​ ವಂಚನೆ; ಒಂದೇ ನಿವೇಶನ ಹಲವರಿಗೆ ಮಾರಾಟ!

ಇದನ್ನೂ ಓದಿ: ಕಳ್ಳತನವಾಗಿದ್ದ ಸ್ಕೂಟಿ ವಾಟ್ಸಾಪ್​ ಗ್ರೂಪ್​ನಿಂದ ಪತ್ತೆ; ಸ್ಕೂಟಿ ಸಹಿತ ಆರೋಪಿ‌ ಬಂಧನ

TV9 Kannada


Leave a Reply

Your email address will not be published. Required fields are marked *