ಹುಬ್ಬಳ್ಳಿ: 21 ವರ್ಷಗಳ ಬಳಿಕ ಕಳ್ಳತನ ಪ್ರಕರಣಕ್ಕೆ ತೆರೆ; ತಲೆಮರೆಸಿಕೊಂಡಿದ್ದ ಕಳ್ಳನನ್ನು ಬಂಧಿಸಿದ ಪೊಲೀಸರು | Police arrested man who theft 21 years back in hubli


ಹುಬ್ಬಳ್ಳಿ: 21 ವರ್ಷಗಳ ಬಳಿಕ ಕಳ್ಳತನ ಪ್ರಕರಣಕ್ಕೆ ತೆರೆ; ತಲೆಮರೆಸಿಕೊಂಡಿದ್ದ ಕಳ್ಳನನ್ನು ಬಂಧಿಸಿದ ಪೊಲೀಸರು

ಸಾಂಕೇತಿಕ ಚಿತ್ರ

ಹುಬ್ಬಳ್ಳಿ: 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ (arrest) ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಗಣೇಶಪೇಟೆಯ ಅಬ್ದುಲ್‌ ಬಂಧಿತ ಆರೋಪಿ. 21 ವರ್ಷಗಳ ಹಿಂದೆ ಕಳ್ಳತನ (Theft) ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಶಹರ ಠಾಣೆ ಇನ್ಸ್​ಪೆಕ್ಟರ್​ ಆನಂದ ಒಣಕುದರಿ ನೇತೃತ್ವದ ತಂಡ ಗೋವಾದಲ್ಲಿ ಬಂಧಿಸಿದೆ. ಹಳೆ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆದರೆ ನಿನ್ನೆ (ನವೆಂಬರ್ 21) ಕಳ್ಳತನ ಪ್ರಕರಣಕ್ಕೆ ತೆರೆಬಿದ್ದಿದ್ದು, ಆರೋಪಿ ಅಬ್ದುಲ್​ನನ್ನು ಪೊಲೀಸರು ನಿನ್ನೆ ರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತುಮಕೂರು: ಮಲ್ಲಸಂದ್ರ ಗ್ರಾಮದ 4 ಅಂಗಡಿಗಳಲ್ಲಿ ಸರಣಿ ಕಳ್ಳತನ
ತುಮಕೂರು ಗ್ರಾಮಾಂತರ ಭಾಗದ ಮಲ್ಲಸಂದ್ರ ಗ್ರಾಮದ 4 ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದೆ. ಬೇಕರಿ, ಹಾರ್ಡ್​ವೇರ್​ ಮತ್ತು ಟೀ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. 40 ಸಾವಿರ ಮೌಲ್ಯದ ದಿನಸಿ, 5 ಸಾವಿರ ರೂ. ನಗದು ಕಳವು ಮಾಡಲಾಗಿದ್ದು, ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

TV9 Kannada


Leave a Reply

Your email address will not be published. Required fields are marked *