ಇಂಡೋ- ನ್ಯೂಜಿಲೆಂಡ್​ ನಡುವಿನ ಪ್ರತಿಷ್ಠಿತ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಕದನಕ್ಕೆ 2 ದಿನಗಳು ಮಾತ್ರ ಬಾಕಿ ಇವೆ. ಚೊಚ್ಚಲ ಕಪ್​ ಗೆಲ್ಲೋ ಉತ್ಸಾಹದಲ್ಲಿರೋ ಎರಡು ತಂಡಗಳು ಮಹತ್ವದ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸಿದೆ. ಟೀಮ್​ ಇಂಡಿಯಾ ಇನ್​ಟ್ರಾ ಸ್ಕ್ವಾಡ್​ ಪಂದ್ಯದೊಂದಿಗೆ ಅಭ್ಯಾಸ ನಡೆಸ್ತಾ ಇದ್ರೆ, ಇಂಗ್ಲೆಂಡ್​ ವಿರುದ್ಧ 2 ಪಂದ್ಯಗಳ ಸರಣಿಯನ್ನೇ ಆಡಿ ನ್ಯೂಜಿಲೆಂಡ್​ ತಾಲೀಮು ನಡೆಸಿದೆ, ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.

ಫೈನಲ್​ ಫೈಟ್​ಗೆ 15 ಜನರ ತಂಡ ಪ್ರಕಟಿಸಿದ ಕಿವೀಸ್​..!
ಈಗಾಗಲೇ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಗೆದ್ದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕಿವೀಸ್​ ಪಡೆ ಇದೀಗ ಮಹತ್ವದ ಪಂದ್ಯಕ್ಕೆ ಹುರಿಯಾಳುಗಳ ಪಟ್ಟಿಯನ್ನೂ ಪ್ರಕಟಿಸಿದೆ. ಇಂಗ್ಲೆಂಡ್​ ವಿರುದ್ಧದ ಸರಣಿ ಬೆನ್ನಲ್ಲೇ 15 ಆಟಗಾರರ ತಂಡವನ್ನ ಪ್ರಕಟಿಸಿದೆ. ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​​ನಿಂದ ಹೊರಗಿದ್ದ ಕೆಲ ಆಟಗಾರರು ತಂಡವನ್ನ ಸೇರಿಕೊಂಡಿದ್ರೆ, ಹಲವರಿಗೆ ಕೊಕ್​ ನೀಡಲಾಗಿದೆ.

GFX: ಫೈನಲ್​ ಫೈಟ್​ಗೆ ಕಿವೀಸ್​ ಟೀಮ್​
ವಿಲಿಯಮ್​ಸನ್​                          ಡಿವೋನ್​ ಕಾನ್ವೆ                   ಟಾಮ್​ ಲಾಥಮ್​                    ರಾಸ್​ ಟೇಲರ್​
ವಿಲ್​ ಯಂಗ್​                              ನಿಕೋಲಸ್​​                           ವಾಟ್ಲಿಂಗ್​                            ಟಾಮ್​ ಬ್ಲಂಡೆಲ್
ಗ್ರಾಂಡ್​ಹೋಮ್                         ಕೈಲ್​ ಜೆಮಿಸನ್​                      ಟಿಮ್​ ಸೌಥಿ                        ನೇಲ್​ ವ್ಯಾಗ್ನರ್​
ಬೋಲ್ಟ್​​                                  ಮ್ಯಾಟ್​ ಹೆನ್ರಿ                     ಅಜಾಜ್​ ಪಟೇಲ್​

ಕೇನ್​ ವಿಲಿಯಮ್​ಸನ್​ ಸಾರಥ್ಯದ ತಂಡದಲ್ಲಿ ಡಿವೋನ್​ ಕಾನ್ವೆ, ಟಾಮ್​ ಲಾಥಮ್​ ಆರಂಭಿಕರಾಗಿ ಸ್ಥಾನ ಪಡೆದಿದ್ದಾರೆ. ರಾಸ್​ ಟೇಲರ್​​, ವಿಲ್​ ಯಂಗ್​, ಹೆನ್ರಿ ನಿಕೋಲಸ್​ ಮಿಡಲ್​ ಆರ್ಡರ್​​ ಬ್ಯಾಟಿಂಗ್​ ಶಕ್ತಿಯಾಗಿದ್ದಾರೆ. ವಿಕೆಟ್​ ಕೀಪರ್​ ಕೋಟಾದಲ್ಲಿ ಬಿಜೆ ವಾಟ್ಲಿಂಗ್​, ಟಾಮ್​ ಬ್ಲಂಡಲ್​​ಗೆ ಮಣೆ ಹಾಕಿದ್ರೆ, ಆಲ್​ರೌಂಡರ್​ಗಳಾಗಿ ಗ್ರಾಂಡ್​ಹೋಮ್​, ಕೈಲ್​ ಜೆಮಿಸನ್​ ತಂಡದಲ್ಲಿದ್ದಾರೆ. ಟಿಮ್​ ಸೌಥಿ, ನೇಲ್​ ವ್ಯಾಗ್ನರ್​, ಟ್ರೆಂಟ್​ ಬೋಲ್ಟ್​​ ಹಾಗೂ ಮ್ಯಾಟ್​ ಹೆನ್ರಿ ವೇಗದ ವಿಭಾಗದಲ್ಲಿದ್ರೆ, ಎಜಾಝ್​​ ಪಟೇಲ್​ ತಂಡದಲ್ಲಿರುವ ಏಕೈಕ ಫುಲ್​ ಟೈಮ್​ ಸ್ಪಿನ್ನರ್​..!

ಹೇಗಿದೆ ನ್ಯೂಜಿಲೆಂಡ್​ ಟೀಮ್​ ಬ್ಯಾಲೆನ್ಸ್​..?
ಮಹತ್ವದ ಪಂದ್ಯಕ್ಕೆ ಒಬ್ಬ ಸ್ಪಿನ್ನರ್​​ ಸಾಕಾ.?
ಮಹತ್ವದ ಪಂದ್ಯಕ್ಕೆ ಕೋಚ್​ ಗ್ಯಾರಿ ಸ್ಟೆಡ್​​ ತಂಡವನ್ನ ಪ್ರಕಟಿಸಿದ ಬೆನ್ನಲ್ಲೇ, ಟೀಮ್​ ಬ್ಯಾಲೆನ್ಸ್​ ಬಗೆಗಿನ ಚರ್ಚೆಗಳು ಗರಿಗೆದರಿವೆ. ಅದರಲ್ಲೂ ಎಕೈಕ ಸ್ಪಿನ್ನರ್​ಗೆ ಮಣೆ ಹಾಕಿರೋದು ಚರ್ಚೆಯ ಕೇಂದ್ರ ಬಿಂದುವಾಗಿದೆ. ಮಿಚೆಲ್​ ಸ್ಯಾಂಟ್ನರ್​ ಅಲಭ್ಯತೆಯಲ್ಲಿ ಕೇವಲ 9 ಟೆಸ್ಟ್​ ಪಂದ್ಯಗಳನ್ನಾಡಿದ ಅನುಭವವಿರುವ ಎಜಾಝ್​ ಪಟೇಲ್​ಗೆ ಅವಕಾಶ ನೀಡಲಾಗಿದೆ. ಆಡಿದ 9 ಟೆಸ್ಟ್​ ಪಂದ್ಯಗಳಲ್ಲಿ 26 ವಿಕೆಟ್​​ ಕಬಳಿಸಿದ ಸಾಧನೆಯ ಹೊರತಾಗಿಯೂ, ಮಹತ್ವದ ಪಂದ್ಯಕ್ಕೆ ಎಜಾಝ್​ ಆಯ್ಕೆ ಹಿನ್ನಡೆ ಎಂದೇ ಹೇಳಲಾಗ್ತಿದೆ.

ಹೆಚ್ಚಿದ ಆತ್ಮವಿಶ್ವಾಸ, ಯಂಗ್​ಸ್ಟರ್​​ಗಳಿಗೆ ಮಣೆ..!
ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡ ಬರೋಬ್ಬರಿ 6 ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ಯುವ ಆಟಗಾರರಿಗೆ ಮಣೆ ಹಾಕಿದ್ದ ಬ್ಲ್ಯಾಕ್​​ಕ್ಯಾಪ್ಸ್​​​ ಪಡೆ ಯಶಸ್ಸು ಕಂಡಿತ್ತು. ಇದು ತಂಡದ ಕಾನ್ಫಿಡೆನ್ಸ್ ಲೆವೆಲ್​ ಹೆಚ್ಚಿಸಿದೆ. ಹೀಗಾಗಿಯೇ ಟಾಮ್​ ಬ್ಲಂಡಲ್​, ವಿಲ್​ ಯಂಗ್​, ಡಿವೋನ್​ ಕಾನ್ವೆಯಂತಹ ಅತಿ ಕಡಿಮೆ ಪಂದ್ಯಗಳನ್ನಾಡಿದ ಆಟಗಾರರಿಗೂ ಮ್ಯಾನೇಜ್​ಮೆಂಟ್​​​ ಮಣೆ ಹಾಕಿದೆ. ಈ ಓವರ್​ ಕಾನ್ಫಿಡೆನ್ಸ್​​​ ತಂಡಕ್ಕೆ ಹಿನ್ನಡೆಯಾಗಲೂಬಹುದು ಎನ್ನಲಾಗ್ತಿದೆ.

ಅನುಭವಿ ಟೇಲರ್​, ವಿಲಿಯಮ್​ಸನ್​ ಇಬ್ಬರೇ ತಂಡಕ್ಕೆ ಆಧಾರ..!
ಯುವ ಆಟಗಾರರಿಗೆ ಅವಕಾಶ ನೀಡಿರುವ ಮ್ಯಾನೇಜ್​ಮೆಂಟ್​​ನ ನಿರ್ಧಾರ ತಂಡಕ್ಕೆ ಹಿನ್ನಡೆಯಾಗೋ ಸಾಧ್ಯತೆಯಿದೆ. ಸದ್ಯ ಉತ್ತಮ ಫಾರ್ಮ್​​ನಲ್ಲಿರೋ ಅನಾನುಭವಿ ಆಟಗಾರರು ಕನ್ಸಿಸ್ಟೆನ್ಸಿ ಕ್ಯಾರೀ ಮಾಡ್ತಾರಾ ಅನ್ನೋದು ಕುತೂಹಲ ಮೂಡಿಸಿದೆ. ಹೀಗಾಗಿ ಅನುಭವಿಗಳಾದ ರಾಸ್​ ಟೇಲರ್​​, ಕೇನ್​ ವಿಲಿಯಮ್​ಸನ್​ ಮೇಲಿನ ಜವಾಬ್ದಾರಿ ಹೆಚ್ಚಿದೆ. ಇದು ಸ್ಪೆಷಲಿಸ್ಟ್​ ಬ್ಯಾಟ್ಸ್​ಮನ್​ಗಳ ಮೇಲಿನ ಒತ್ತಡವನ್ನ ಹೆಚ್ಚಿಸಿದೆ.

ತಂಡದಲ್ಲಿ ಬೆಸ್ಟ್​​-4 ಬೌಲಿಂಗ್​ ಅಟ್ಯಾಕ್​..!
ಬ್ಯಾಟಿಂಗ್​​ ವಿಭಾಗದಲ್ಲಿ ಅನುಭವಿ, ಅನಾನುಭವಿಗಳ ಮಿಶ್ರಣ ಹೊಂದಿರುವ ಕಿವೀಸ್​​ ಪಡೆ 4 ಬೆಸ್ಟ್​​ ಬೌಲರ್​ಗಳನ್ನ ಒಳಗೊಂಡಿದೆ. ಟ್ರೆಂಟ್​​ ಬೋಲ್ಟ್​, ಟಿಮ್​ ಸೌಥಿ, ನೇಲ್​ ವ್ಯಾಗ್ನರ್​ ಹಾಗೂ ಮ್ಯಾಟ್​ ಹೆನ್ರಿ ತಂಡದ ಬಲ ಹೆಚ್ಚಿಸಿದ್ದಾರೆ. ಆದ್ರೆ, ಆಲ್​ರೌಂಡರ್​ಗಳಾದ ಕೈಲ್​ ಜೆಮಿಸನ್​, ಗ್ರಾಂಡ್​ ಹೋಮ್​ ಕೂಡ ದಾಳಿ ಸಂಘಟಿಸಬಲ್ಲರು. ಹೀಗಾಗಿ ತಂಡ 4 ವೇಗಿಗಳ ಬಲದೊಂದಿಗೆ ಕಣಕ್ಕಿಳಿಯುತ್ತಾ ಅಥವಾ ನಾಲ್ವರಲ್ಲಿ ಒಬ್ಬರು ಬೆಂಚ್​ಗೆ ಸೀಮಿತವಾಗ್ತಾರಾ ಅನ್ನೋದು ಕುತೂಹಲ ಮೂಡಿಸಿದೆ. ಇದು ಮ್ಯಾನೇಜ್​ಮೆಂಟ್​ಗೆ ಪ್ಲೇಯಿಂಗ್​ ಇಲೆವೆನ್​ ಆಯ್ಕೆಯ ಗೊಂದಲವನ್ನೂ ಮೂಡಿಸಿದೆ.

ಒಟ್ಟಿನಲ್ಲಿ ಈಗಾಗಲೇ 15 ಆಟಗಾರರ ತಂಡವನ್ನ ಪ್ರಕಟಿಸಿರೋ ಕಿವೀಸ್​ ಮ್ಯಾನೇಜ್​ಮೆಂಟ್,​ ಇನ್ನೆರಡು ದಿನಗಳಲ್ಲಿ ಪ್ಲೇಯಿಂಗ್​ ಇಲೆವೆನ್​ ಅನ್ನ ನಿರ್ಧರಿಸಲಿದೆ. ತಂಡದಿಂದ ಹೊರಗುಳಿಯೋ ನಾಲ್ವರು ಯಾರು ಅನ್ನೋದನ್ನ ಕಾದು ನೋಡಬೇಕಿದೆ.

The post ಹುಲಿಗಳ ಬೇಟೆಗೆ ನ್ಯೂಜಿಲೆಂಡ್ ಪ್ಲೇಯರ್ಸ್​ ರೆಡಿ..! ಹೇಗಿದೆ ಗೊತ್ತಾ ಕಿವೀಸ್ ಟೀಮ್..? appeared first on News First Kannada.

Source: newsfirstlive.com

Source link