ಹುಲಿಯೊಂದಿಗೆ ಮೈಂಡ್​ ಗೇಮ್ ಆಡಿ ಪ್ರಾಣ ಉಳಿಸಿಕೊಂಡ ಜಾಣಕೋತಿ! | Monkey Plays Hilarious Mind Game With Tiger Makes Him Fall Off Tree


Viral Video : ತನ್ನನ್ನು ಬೇಟೆಯಾಡಲು ಬಂದಿರುವ ಹುಲಿಯನ್ನು ಹೇಗೆ ಮರದಿಂದ ಉಪಾಯವಾಗಿ ನೆಲಕ್ಕೆ ಬೀಳಿಸುತ್ತದೆ ನೋಡಿ ಈ ಬುದ್ಧಿವಂತ ಕೋತಿ.

ಹುಲಿಯೊಂದಿಗೆ ಮೈಂಡ್​ ಗೇಮ್ ಆಡಿ ಪ್ರಾಣ ಉಳಿಸಿಕೊಂಡ ಜಾಣಕೋತಿ!

ಮರದಿಂದ ಹುಲಿಯನ್ನು ಕೆಡವಿದ ಕೋತಿ

Viral Video : ಹುಲಿ! ಈ ಹುಲಿ ಕೋತಿಯಿಂದ ಸೋಲನ್ನಪ್ಪುವುದೆ? ಸಾಧ್ಯವೇ ಇಲ್ಲ ಎಂದು ಸಲೀಸಾಲಿ ಹೇಳಿಬಿಡುತ್ತೀರಿ. ಆದರೆ ಇದು ಸಾಧ್ಯ ಎಂದಿದೆ ಇದೀಗ ವೈರಲ್ ಆಗಿರುವ ಹಳೆಯ ವಿಡಿಯೋ. ಹುಲಿಯೊಂದು ಕೋತಿಯನ್ನು ಬೇಟೆಯಾಡಲು ಬೆನ್ನಟ್ಟಿಕೊಂಡು ಬರುತ್ತದೆ. ಕೋತಿಯು ಸರಸರನೆ ಅಲ್ಲಿದ್ದ ಸಾಧಾರಣ ಎತ್ತರದ ಮರವೊಂದನ್ನು ಏರಿ ಕುಳಿತುಕೊಳ್ಳುತ್ತದೆ. ಹುಲಿಯೂ ಮರವನ್ನೇರುತ್ತದೆ. ಹೇಗೆ ತಪ್ಪಿಸಿಕೊಳ್ಳುವುದು ಎಂದು ಉಪಾಯ ಮಾಡುತ್ತಲೇ ಕೋತಿ ಎದುರಿನ ಟೊಂಗೆಗೆ ಹಾರುತ್ತದೆ. ಮುಂದೇನಾಗುತ್ತದೆ ಎಂದು ತಿಳಿದುಕೊಳ್ಳಲು ಈ ವಿಡಿಯೋ ನೋಡಿ.

ಹುಲಿ ಎಷ್ಟೇ ಬಲಶಾಲಿಯಾದರೂ ಕೋತಿ ಧೈರ್ಯಗೆಡದೆ, ತನ್ನ ಬುದ್ಧಿಶಕ್ತಿಯಿಂದ ತನ್ನನ್ನು ತಾ ಪಾರುಮಾಡಿಕೊಳ್ಳುವುದರ ಬಗ್ಗೆ ಯೋಚಿಸುತ್ತದೆ. ತಕ್ಷಣವೇ ಕೋತಿ ಎದುರಿನ ಕೊಂಬೆಗೆ ಹಾರಿ ಜೋತುಬೀಳುತ್ತದೆ. ಇನ್ನೇನು ತಾನು ಕೆಳಗೆ ಬಿದ್ದೇ ಹೋಗುತ್ತೇನೆ ಎಂಬಂತೆ ನಟಿಸುತ್ತದೆ. ಇದೇ ಸರಿಯಾದ ಸಮಯ ಎಂದು ಹುಲಿ ಕೋತಿಯ ಮೇಲೆ ಆಕ್ರಮಣ ಮಾಡಬೇಕೆನ್ನುವ ಹೊತ್ತಿಗೆ ಕೋತಿ ಪಕ್ಕದ ಕೊಂಬೆಗೆ ಹಾರಿಬಿಡುತ್ತದೆ. ಬೇಟೆ ತಪ್ಪಿಸಿಕೊಂಡ ಹುಲಿ ಮರದಿಂದ ಧೊಪ್ಪನೆ ನೆಲಕ್ಕೆ ಬೀಳುತ್ತದೆ.

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಲತ್ ಕಾ ‘ಶಿಕಾರ್’ ಎಂಬ ಶೀರ್ಷಿಕೆ ಇದಕ್ಕಿದೆ. ಸುಮಾರು ಒಂದೂ ಮುಕ್ಕಾಲು ಲಕ್ಷದಷ್ಟು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. 8,300 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

TV9 Kannada


Leave a Reply

Your email address will not be published.