ಹುಲ್ಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ 12 ಗುಂಟೆ ಜಾಗ ಅಸಲಿಗೆ ಯಾರಿಗೆ ಸೇರಿದ್ದು? | Hullahalli GP says 12 gunta land in its limits belongs to government, a resident thinks otherwise ARB


ಮೈಸೂರು: ಇಲ್ಲೊಂದು ವಾಗ್ವಾದ ನಡೆಯುತ್ತಿದೆ. ಓಕೆ, ಈ ವಿಡಿಯೋದ ಲೊಕೇಷನ್ ಬಗ್ಗೆ ನಿಮಗೆ ಮೊದಲು ಹೇಳ್ತೀವಿ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಹುರಾ ಮುಖ್ಯರಸ್ತೆ ಸರ್ವೆ ನಂಬರ್ 355/2 ರ 12 ಗುಂಟೆ ಜಾಗವಿದು. ಈ ಜಾಗದ ಬಗ್ಗೆ ವಿವಾದ ಶುರುವಾಗಿದೆ. ಇದು ಸರ್ಕಾರೀ ಜಾಗವೆಂದು ಹುಲ್ಲಹಳ್ಳಿ ಗ್ರಾಮ ಪಂಚಾಯಿತಿಯ (Hullahali GP) ಪಿಡಿಒ ಗೀತಾ (Geeta) ಅನ್ನುವವರು ಅತಿಕ್ರಮಣ ನಡೆಯಬಾರದು ಅನ್ನೋ ಕಾರಣಕ್ಕೆ ಬೇಲಿ ಬಿಗಿಸಲು ಇತರ ತಮ್ಮ ಸ್ಟಾಫ್ನೊಂದಿಗೆ ಬಂದಿದ್ದಾರೆ. ಏತನ್ಮಧ್ಯೆ, ಜಾಗ ನನಗೆ ಸೇರಿದ್ದು ಎನ್ನುತ್ತಾ ಅಲ್ಲಿಗೆ ಬರುವ ಈ ಶ್ವೇತವಸ್ತ್ರಧಾರಿ ಅಲ್ಲಿಗೆ ಬಂದು ನೆಲದ ಮೇಲೆ ಕೂತು ಪ್ರತಿಭಟನೆ ಆರಂಭಿಸುತ್ತಾರೆ. ಅಂದಹಾಗೆ, ಈ ವ್ಯಕ್ತಿಯ ಹೆಸರು ಅಭಿನಂದನ್ ಪಾಟೀಲ್ (Abhinandan Patil). ಇವರ ತಂದೆ ಬಸವರಾಜ ಅವರು ಕೆಪಿಸಿಸಿ ಸದಸ್ಯರಂತೆ.

ಈ ಜಾಗಕ್ಕೆ ನೀವು ಅದು ಹೇಗೆ ಬೇಲಿ ಹಾಕ್ತೀರಿ, ಇದು ನನಗೆ ಸೇರಿದ್ದು. ಸರ್ಕಾರದ್ದು ಅನ್ನೋದಿಕ್ಕೆ ದಾಖಲೆ ಇದೆಯಾ? ಇದ್ದರೆ ನನಗೆ ತೋರಿಸಿ ಅಂತ ಅವರು ಹೇಳುತ್ತಿದ್ದಾರೆ. ಅಧಿಕಾರಿಗಳು ಅವರ ಮನವೊಲಿಸುವ ಪ್ರಯತ್ನಗಳು ಫೇಲ್ ಆಗುತ್ತವೆ. ಗೀತಾ ದೂರದಲ್ಲಿ ನಿಂತು ಅಭಿನಂದನ್ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ.

ಜಾಗ ಕುರಿತಂತೆ ಪ್ರಕರಣ ನ್ಯಾಯದಲ್ಲಿದೆ, ನಾನು ಈಗಾಗಲೇ ನೊಟೀಸ್ ಸರ್ವ್ ಮಾಡಿದ್ದೇನೆ, ಎಂದು ಅಭಿನಂದನ್ ಹೇಳುತ್ತಿರುವರಾದರೂ ಅವರು ಸಹ ಜಾಗ ತನಗೆ ಸೇರಿದ್ದು ಅಂತ ಪ್ರೂವ್ ಮಾಡಲು ಯಾವುದೇ ಕಾಗದ ಪತ್ರ ತೋರಿಸುತ್ತಿಲ್ಲ. ಅವರು ಬಂದು ಗಲಾಟೆ ಮಾಡಬಹುದೆನ್ನುವ ಸುಳಿವು ಗ್ರಾಮ ಪಂಚಾಯಿತಿಗೆ ಮೊದಲೇ ಇದ್ದಿರಬೇಕು.

ಹಾಗಾಗೇ ಅವರನ್ನು ಪೊಲೀಸರನ್ನು ಅಲ್ಲಿಗೆ ಕರೆಸಿಕೊಂಡಿದ್ದಾರೆ. ಆದರೆ ಇಬ್ಬರು ಪೊಲೀಸರು ಮೂಕಪ್ರೇಕ್ಷಕರಾಗಿ ಅಭಿನಂದನ್ ಮತ್ತು ಅಧಿಕಾರಿಗಳ ನಡುವೆ ನಡೆಯುತ್ತಿರುವ ವಾಗ್ವಾದವನದನು ನೋಡುತ್ತಿದ್ದಾರೆ. ಅಧಿಕಾರಿಗಳು ಬೇಲಿ ಹಾಕದೆ ವಾಪಸ್ಸು ಹೋದರೆಂಬ ಮಾಹಿತಿ ನಮಗೆ ಲಭ್ಯವಾಗಿದೆ.

TV9 Kannada


Leave a Reply

Your email address will not be published. Required fields are marked *