‘ಹೂ ಅಂತೀಯಾ ಮಾವ..’ ಹಾಡಿಗಾಗಿ ಸಮಂತಾಗೆ 5 ಕೋಟಿ ರೂ. ಸಂಭಾವನೆ? ಅಷ್ಟು ದುಬಾರಿ ಯಾಕೆ? | Samantha reportedly took 5 Cr for Pushpa movie Oo Antava Mava Oo Oo Antava Mava song


‘ಹೂ ಅಂತೀಯಾ ಮಾವ..’ ಹಾಡಿಗಾಗಿ ಸಮಂತಾಗೆ 5 ಕೋಟಿ ರೂ. ಸಂಭಾವನೆ? ಅಷ್ಟು ದುಬಾರಿ ಯಾಕೆ?

ಸಮಂತಾ

ಇತ್ತೀಚೆಗೆ ಭಾರಿ ಸದ್ದು ಮಾಡಿದ ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡಿನ ಹಿಂದೆ ಅನೇಕ ಇಂಟರೆಸ್ಟಿಂಗ್​ ವಿಚಾರಗಳಿವೆ. ನಟಿ ಸಮಂತಾ (Samantha) ಅವರು ಈ ಹಾಡಿನಲ್ಲಿ ಡ್ಯಾನ್ಸ್​ ಮಾಡಿದ ಪರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಹಾಡು ಸಖತ್​ ಧೂಳೆಬ್ಬಿಸುತ್ತಿದೆ. ದೇವಿಶ್ರೀ ಪ್ರಸಾದ್​ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ಮಾವ’ ಹಾಡಿನಲ್ಲಿ ನರ್ತಿಸಿದ್ದಕ್ಕೆ ಸಮಂತಾ ಅವರಿಗೆ ಸಿಕ್ಕ ಸಂಭಾವನೆ (Samantha Remuneration) ಬಗ್ಗೆ ಹಲವು ಬಗೆಯ ಮಾಹಿತಿ ಕೇಳಿಬರುತ್ತಿದೆ. ಈ ಐಟಂ ಸಾಂಗ್​ಗಾಗಿ ಅವರು 1.5 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಈಗ ಬೇರೊಂದು ಮಾಹಿತಿ ಹರಿದಾಡುತ್ತಿದೆ. ‘ಪುಷ್ಪ’ (Pushpa Movie) ಸಿನಿಮಾದ ಗೆಲುವಿಗೆ ಕಾರಣವಾದ ಮುಖ್ಯ ಅಂಶಗಳಲ್ಲಿ ಈ ಗೀತೆ ಕೂಡ ಪ್ರಮುಖವಾದದ್ದು. ಇದರಲ್ಲಿ ಡ್ಯಾನ್ಸ್​ ಮಾಡಲು ಸಮಂತಾ ಪಡೆದುಕೊಂಡಿದ್ದು ಬರೋಬ್ಬರಿ 5 ಕೋಟಿ ರೂ. ಸಂಬಳ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಸಮಂತಾ ಅವರು ಸಿನಿಮಾಗಳ ಆಯ್ಕೆಯಲ್ಲಿ ತಮ್ಮ ನಿಲುವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡರು. ಹೆಚ್ಚು ಹೆಚ್ಚು ಬೋಲ್ಡ್​ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು. ಆದರೂ ಕೂಡ ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡಿನಲ್ಲಿ ನರ್ತಿಸಲು ಅವರು ಆರಂಭದಲ್ಲಿ ಒಪ್ಪಿರಲಿಲ್ಲ. ಕಡೆಗೆ ‘ಪುಷ್ಪ’ ಸಿನಿಮಾ ನಾಯಕ ಅಲ್ಲು ಅರ್ಜುನ್​ ಅವರೇ ಸ್ವತಃ ಮಾತನಾಡಿದ ಬಳಿಕ ಸಮಂತಾ ಒಪ್ಪಿಕೊಂಡರಂತೆ. ಜೊತೆಗೆ ಭಾರಿ ಮೊತ್ತದ ಸಂಭಾವನೆಗಾಗಿ ಬೇಡಿಕೆ ಇಟ್ಟರು ಎನ್ನಲಾಗಿದೆ.

ಸಮಂತಾ ಬರೋಬ್ಬರಿ 5 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಚಿತ್ರತಂಡದ ಯಾರೋಬ್ಬರೂ ಅಧಿಕೃತವಾಗಿ ಮಾಹಿತಿ ಬಿಟ್ಟುಕೊಟ್ಟಿಲ್ಲ. ಒಟ್ಟಿನಲ್ಲಿ ಈ ಹಾಡಿನಿಂದ ಚಿತ್ರಕ್ಕೆ ಭಾರಿ ಅನುಕೂಲ ಆಗಿದ್ದಂತೂ ನಿಜ. ಸಿನಿಮಾದ ರಿಲೀಸ್​ಗೂ ಮುನ್ನವೇ ಜನಮನ ಗೆಲ್ಲುವಲ್ಲಿ ಈ ಸಾಂಗ್​ ಯಶಸ್ವಿ ಆಗಿತ್ತು. ಕೆಲವು ವಿವಾದಗಳನ್ನು ಮಾಡಿಕೊಂಡರೂ ಕೂಡ ಯೂಟ್ಯೂಬ್​ನಲ್ಲಿ ಹೊಸ ದಾಖಲೆ ಬರೆಯಿತು. ಇಡೀ ವಿಶ್ವದಲ್ಲೇ 2021ರಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸಾಂಗ್​ ಎಂಬ ಖ್ಯಾತಿಯನ್ನು ಈ ಹಾಡು ಪಡೆದುಕೊಂಡಿತು. ‘ಪುಷ್ಪ’ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಇದರ ಎರಡನೇ ಪಾರ್ಟ್​ಗೆ ಈಗ ಸಿದ್ಧತೆಗಳು ನಡೆಯುತ್ತಿವೆ. 2ನೇ ಪಾರ್ಟ್​ನಲ್ಲೂ ಸಮಂತಾಗೆ ಐಟಂ ಸಾಂಗ್ ಅವಕಾಶ ಇದೆಯೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ.

TV9 Kannada


Leave a Reply

Your email address will not be published. Required fields are marked *