ಬಾಲಿವುಡ್ ನಟ ಹೃತಿಕ್ ರೋಷನ್ ನಟಿಯೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಿಟೌನ್ ಅಂಗಳದಲ್ಲಿ ಹಬ್ಬಿದೆ. ಹೃತಿಕ್ ರೋಷನ್ 2000ರಲ್ಲಿ ನಟಿ ಸುಸೇನ್ ಖಾನ್ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಕಾರಣಂತರಗಳಿಂದ 2014 ರಲ್ಲಿ ಈ ಜೋಡಿ ವಿಚ್ಛೇದನ ಪಡೆಯುವ ಮೂಲಕ ತಮ್ಮ 14 ವರ್ಷದ ಸಾಂಸಾರಿಕ ಜೀವನಕ್ಕೆ ಅಂತ್ಯ ಹಾಡಿದ್ದರು. ಡಿವೋರ್ಸ್ ಬಳಿಕ ಈ ಜೋಡಿ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಸದ್ಯ ಸಬಾ ಅಜಾದ್ ಎಂಬ ನಟಿಯೊಂದಿಗೆ ಹೃತಿಕ್ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಎಲ್ಲೆಡೆ ಗುಲ್ಲೆದ್ದಿದೆ. ಇದಕ್ಕೆ ಸಾಕ್ಷಿ ಎಂಬತೆ ಈ ಜೋಡಿ ಇತ್ತೀಚಿಗೆ ಸಾರ್ವಜನಿಕವಾಗಿ ಒಟ್ಟಾರೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಸಬಾ ಅಜಾದ್ ಬಗ್ಗೆ ಹೃತಿಕ್ ಮಾಜಿ ಪತ್ನಿ ಸುಸೇನ್ ಖಾನ್ ಮೆಚ್ಚುಗೆಯ ಮಾತುಗಳನ್ನಾಡಿ ಅಚ್ಚರಿ ಮೂಡಿಸಿದ್ದಾರೆ.
ಸಬಾ ಕಾರ್ಯಕ್ರಮವೊಂದರಲ್ಲಿ ಹಾಡಿದ ತುಣಕನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಸುಸೇನ್ ಖಾನ್, ಅವರ ಹಾಡಿನ ಗಮ್ಮತಿಗೆ ಫಿದಾ ಆಗಿದ್ದಾರೆ. ಯೂ ಆರ್ ಸೂಪರ್ ಕೂಲ್, ನಿಮ್ಮ ಜೊತೆಗಿನ ಈ ಸಂಜೆ ಸುಂದರವಾಗಿದೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಸುಸೇನ್ ಖಾನ್ ಪೋಸ್ಟ್ಗೆ ಪ್ರತಿಕ್ರಿಯಿಸಿದ ಸಬಾ ನಿಮ್ಮ ಉಪಸ್ಥಿತಿಯಿಂದ ಈ ಸಂಜೆ ಇನ್ನಷ್ಟು ಮೆರಗಿನಿಂದ ಕೂಡಿತ್ತು ಎಂದಿದ್ದಾರೆ.