ಹೃದಯಕ್ಕೆ ನಾಟಿದ RRR ’ನಾಟು’ ಸಾಂಗ್​.. ಹುಚ್ಚೆದ್ದು ಕುಣಿಯುತ್ತಿದ್ದಾರೆ ಫ್ಯಾನ್ಸ್​


ಎಸ್​.ಎಸ್.​ರಾಜಮೌಳಿ ಬತ್ತಳಿಕೆಯಿಂದ ಹೊರ ಬರುತ್ತಿರುವ ಮತ್ತೊಂದು ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ಅಂದ್ರೆ ಅದು ಥ್ರಿಬಲ್​ ಆರ್. ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಾ ಬಿಡುಗಡೆ ಸಿದ್ದವಾಗ್ತಿದೆ.. ಈ ಗ್ಯಾಫ್​ನಲ್ಲಿ ಥ್ರಿಬಲ್ ಆರ್ ಸಿನಿ ಬಳಗ ಚಿತ್ರದ ಪಮೋಷನ್​ ಕೆಲಸಕ್ಕು ಸಹಿ ಹಾಕಿದೆ. ಚಿತ್ರದ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ನೀಡ್ತಿರುವ ರಾಜ್​ಮೌಳಿ ಚಿತ್ರದ ಟಪ್ಪಾಂಗುಚ್ಚಿ ಹಾಡೊಂದನ್ನ ಪ್ರೇಕ್ಷಕರ ಅಡ್ಡದಲ್ಲಿ ಹರಿಬಿಟ್ಟಿದ್ದಾರೆ.

ರಾಜಮೌಳಿ ಅಂದ್ರೇನೆ ಹಾಗೆ, ಅವರ ಸಿನಿಮಾಗಳು ಹಾಗೆ..ಸಾಕಷ್ಟು ವಿಚಾರವಾಗಿ ಸದಾ ಸುದ್ದಿಯಲ್ಲಿ ಇದ್ದೇ ಇರುತ್ತವೆ ರಾಜ್ ಮೌಳಿ ಸಿನಿಮಾಗಳು. ಬಾಹುಬಲಿ -1 ಮತ್ತು ಬಾಹುಬಲಿ -2 ಸಿನಿಮಾ ನಂತ್ರ ರಾಜ್​ ಮೌಳಿ ಮೇಲೆ ಚಿತ್ರ ಪ್ರೇಮಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಆ ಕಾರಣಕ್ಕಾಗಿಯೇ ಥ್ರಿಬಲ್​ ಆರ್​ ಸಿನಿಮಾದ ಮೇಲೆ ಪ್ರೇಕ್ಷಕ ಪ್ರಭುಗಳಲ್ಲ್ಲಿ ಅರಮನೆಯನ್ನೇ ಕಟ್ಟಿದೆ..

ಈಗಾಗಲೇ ಥ್ರಿಬಲ್​ ಆರ್​ ಸಿನಿಮಾದ ಎನ್​. ಟಿ. ಆರ್.​ ಮತ್ತು ರಾಮ್ ಚರಣ್ ಇಂಟ್ರೋ ಟೀಸರ್, ಮತ್ತು ಮೇಕಿಂಗ್​ ಗ್ಲಿಂಪಸ್​ಗಳನ್ನು ಬಿಟ್ಟು, ​ ಪ್ರೇಕ್ಷಕರ ಕುತೂಹಲ ಕೆರಳಿಸಿದ್ದ ರಾಜ್​ಮೌಳಿ, ಈಗ ಮತ್ತೊಂದು ಬ್ರೇಕಿಂಗ್​ ಲಿರಿಕಲ್​ ಡ್ಯಾನ್ಸ್​ ವೀಡಿಯೋವೊಂದನ್ನು ಬಿಟ್ಟು ಮತ್ತೆ ಸಾಮಾಜಿಕ ಜಾಲತಾಣದ ಸಾಗರದಲ್ಲಿ ಸಖತ್​ ಸೌಂಡ್​ ಮಾಡುತ್ತಿದ್ದಾರೆ..ಮೊನ್ನೆಯಷ್ಟೆ ಥ್ರಿಬಲ್​ ಆರ್ ಸಿನಿಮಾದ ನಾಟು ನಾಟು ಸಾಂಗ್​ ರಿಲೀಸ್​ ಮಾಡಿತ್ತು ಚಿತ್ರ ತಂಡ..ಈ ಹಾಡಿನಲ್ಲಿ ರಾಮ್​ಚರಣ್​ ಮತ್ತು ಎನ್​ಟಿಆರ್ ಹಾಕಿರುವ ಸ್ಟೆಪ್ಸ್​ ಗೆ ಚಿತ್ರ ಪ್ರೇಮಿಗಳು ಫಿದಾ ಆಗಿದ್ದಲ್ಲದೆ, ಫೇಸ್​ ಬುಕ್​ ಮತ್ತು ಇನ್ಸ್ಟಾ ಗ್ರಾಂ ರೀಲ್ಸ್​ಗಳಲ್ಲಿ ನಾಟು ನಾಟು ಹಾಡಿನ ಹವಾ ಜೋರಾಗೇ ಇದೆ.

ಸೋಶಿಯಲ್​ ಸಾಗರದಲ್ಲಿ ನಾಟು ಸಾಂಗ್​ ಹವಾ ಜೋರು
ಎನ್​ಟಿಆರ್ ರಾಮ್​ಚರಣ್​ ಡ್ಯಾನ್ಸ್​ಗೆ ಫ್ಯಾನ್ಸ್​ ಫಿದಾ

ನಾಟು ನಾಟು ಹಾಡಿನಲ್ಲಿ ರಾಮ್​ ಚರಣ್ ಮತ್ತು ಜೂ.ಎನ್​ಟಿಆರ್ ಮೈ ಚಳಿ ಬಿಟ್ಟು ಸಖತ್​ ಸ್ಟೆಪ್​ ಹಾಕಿದ್ದಾರೆ..ಎಮ್​.ಎಮ್.ಕೀರವಾಣಿ ನೀಡಿರುವ ಸಂಗೀತಕ್ಕೆ ಪ್ಲಸ್​ ಇಬ್ಬರೂ ನಟರ ಭರ್ಜರಿ ಕುಣಿತಕ್ಕೆ ​ ಸೋಶಿಯಲ್​ ಸಾಗರದಲ್ಲಿ ಸದ್ಯ ಹಲ್​ ಚಲ್​ ಸೃಷ್ಟಿಯಾಗಿದೆ. ನಾಟು ಹಾಡು 5 ಭಾಷೆಗಳಲ್ಲಿ ರಿಲೀಸ್​ ಆಗಿದ್ದು ಚಿತ್ರ ಪ್ರೇಮಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಅಭಿಮಾನಿಗಳು ನಾಟು ಹಾಡಿನಲ್ಲಿ ರಾಮ್​ ಚರಣ್ ಮತ್ತು ಎನ್.​ ಟಿ. ಆರ್. ರೀತಿಯೇ ಸ್ಟೆಪ್​ ಹಾಕಿರುವ ವೀಡಿಯೋಗಳು ಈಗ ಸಖತ್​ ವೈರಲ್​ ಆಗಿದೆ.

ಚಿತ್ರ ಸೆಟ್ಟೇರಿದಾಗಿನಿಂದಲೂ ಸಾಕಷ್ಟು ವಿಚಾರವಾಗಿ ಸದ್ದು ಗದ್ದಲ ಮಾಡುತಿರುವ ಥ್ರಿಬಲ್​ ಆರ್​ ಸಿನಿಮಾ, ಮುಂದಿನ ವರ್ಷ ಜನವರಿ 7 ನೇ ತಾರೀಖು 5 ಭಾಷೆಗಳಲ್ಲಿ ತರೆಗೆ ಅಪ್ಪಳಿಸಲು ಸಖಲ ಸಿದ್ದತೆಗಳನ್ನು ಮಾಡಿಕೊಂಡಿದೆ,ಬಿಡುಗಡೆಗೂ ಮುನ್ನವೇ ಇಷ್ಟು ಹವಾ ಸೃಷ್ಟಿಸಿರೋ ಥ್ರಿಬಲ್​ ಆರ್​ ಸಿನಿಮಾ, ಬಿಡುಗಡೆ ನಂತ್ರ ಯಾವೆಲ್ಲಾ ದಾಖಲೆಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ ಅಂತ ಕಾದು ನೋಡಬೇಕಿದೆ.

The post ಹೃದಯಕ್ಕೆ ನಾಟಿದ RRR ’ನಾಟು’ ಸಾಂಗ್​.. ಹುಚ್ಚೆದ್ದು ಕುಣಿಯುತ್ತಿದ್ದಾರೆ ಫ್ಯಾನ್ಸ್​ appeared first on News First Kannada.

News First Live Kannada


Leave a Reply

Your email address will not be published. Required fields are marked *