ಹೃದಯಾಘಾತದಿಂದ ನಿಧನರಾದ ವರುಣ್​ ಧವನ್​ ಕಾರು ಚಾಲಕ; ಕುಟುಂಬಕ್ಕೆ ಬೆಂಬಲವಾಗಿ ನಿಂತ ಸ್ಟಾರ್​ ನಟ | Varun Dhawan car driver Manoj passed away due to heart attack


ಹೃದಯಾಘಾತದಿಂದ ನಿಧನರಾದ ವರುಣ್​ ಧವನ್​ ಕಾರು ಚಾಲಕ; ಕುಟುಂಬಕ್ಕೆ ಬೆಂಬಲವಾಗಿ ನಿಂತ ಸ್ಟಾರ್​ ನಟ

ಕಾರು ಚಾಲಕ ಮನೋಜ್​ ಜೊತೆ ವರುಣ್​ ಧವನ್​

ಬಾಲಿವುಡ್​ನ ಸ್ಟಾರ್​ ನಟ ವರುಣ್​ ಧವನ್​ (Varun Dhawan) ಈಗ ನೋವಿನಲ್ಲಿದ್ದಾರೆ. ಅವರ ಕಾರು ಚಾಲಕ ಮನೋಜ್​ ಅವರು ಹೃದಯಾಘಾತದಿಂದ (Heart Attack) ಮೃತರಾಗಿದ್ದಾರೆ. ಈ ವಿಷಯ ತಿಳಿದು ವರುಣ್​ ಧವನ್​ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಮಂಗಳವಾರ (ಜ.18) ಮನೋಜ್​ ನಿಧನರಾಗಿದ್ದು, ಅವರ ಕುಟುಂಬಕ್ಕೆ ವರುಣ್​ ಧವನ್​ ಬೆಂಬಲವಾಗಿ ನಿಂತಿದ್ದಾರೆ. ಬಹುಕಾಲದಿಂದ ವರುಣ್​ಗೆ ಕಾರು ಚಾಲಕನಾಗಿ ಮನೋಜ್​ ಕೆಲಸ ಮಾಡುತ್ತಿದ್ದರು. ಅವರ ಜೊತೆಗೆ ವರುಣ್​ ತುಂಬ ಆಪ್ತವಾಗಿದ್ದರು ಎನ್ನಲಾಗಿದೆ. ಹಾಗಾಗಿ, ಕಾರು ಚಾಲಕನ ನಿಧನದಿಂದ ವರುಣ್​ ಧವನ್​ ತೀವ್ರ ವಿಚಲಿತರಾಗಿದ್ದಾರೆ. ಮಂಗಳವಾರ ಜಾಹೀರಾತು ಚಿತ್ರೀಕರಣವೊಂದರ ಸಲುವಾಗಿ ಅವರನ್ನು ಡ್ರಾಪ್​ ಮಾಡಿದ ಬಳಿಕ ಮನೋಜ್​ಗೆ ಎದೆ ನೋವು ಕಾಣಿಸಿಕೊಂಡಿತು. ಆಗ ಅವರಿಗೆ ಹೃದಯಾಘಾತ ಸಂಭವಿಸಿತು. ಕೂಡಲೇ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅವರ ಜತೆ ವರುಣ್​ ಧವನ್​ ಕೂಡ ಇದ್ದರು. ಆಸ್ಪತ್ರೆ ತಲುಪುವುದಕ್ಕೂ ಮುನ್ನವೇ ಮನೋಜ್​ ಮೃತರಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಈ ಸುದ್ದಿ ತಿಳಿದು ವರುಣ್​ ಧವನ್​ ತಂದೆ ಡೇವಿಡ್​ ಧವನ್​ ಕೂಡ ದೂರವಾಣಿ ಮೂಲಕ ಮಗನನ್ನು ಸಂತೈಸಿದ್ದಾರೆ ಎಂದು ವರದಿ ಆಗಿದೆ.

ಮನೋಜ್​ಗೆ ಎದೆನೋವು ಕಾಣಿಸಿಕೊಂಡ ತಕ್ಷಣ ವರುಣ್​ ಧವನ್​ ಅವರು ಚಿತ್ರೀಕರಣವನ್ನು ನಿಲ್ಲಿಸಿ ಆಸ್ಪತ್ರೆಯತ್ತ ಸಾಗಿದರು. ಆದರೆ ಮನೋಜ್​ ನಿಧನರಾಗಿದ್ದು ತಿಳಿದು ಅವರು ತೀವ್ರವಾಗಿ ದುಃಖಪಟ್ಟರು. ಎಲ್ಲ ಪ್ರಕ್ರಿಯೆಗಳು ಮುಗಿಯುವವರೆಗೂ ಅವರು ಆಸ್ಪತ್ರೆಯಲ್ಲೇ ಇದ್ದರು. ಆ ಮೂಲಕ ಕಾರು ಚಾಲಕನ ಕುಟುಂಬಕ್ಕೆ ಅವರು ಬೆಂಬಲವಾಗಿ ನಿಂತಿದ್ದಾರೆ.

ಕೆಲಸದ ವೇಳೆಯಲ್ಲೇ ಕಾರು ಚಾಲಕ ಮನೋಜ್​ ನಿಧನರಾಗಿದ್ದರಿಂದ ಅವರ ಕುಟುಂಬದ ಜವಾಬ್ದಾರಿಯನ್ನ ಹೊತ್ತುಕೊಳ್ಳಲು ವರುಣ್​ ಧವನ್​ ಮುಂದಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ನಟನೆ ಮಾತ್ರವಲ್ಲದೇ ಈ ರೀತಿಯ ಗುಣದಿಂದಾಗಿಯೂ ವರುಣ್​ ಧವನ್​ ಅವರು ಅನೇಕ ಜನರ ಮನಸ್ಸು ಗೆದ್ದಿದ್ದಾರೆ. ಸಮಾಜಮುಖಿ ಕಾರ್ಯಗಳಿಂದ ಅವರು ಗುರುತಿಸಿಕೊಂಡಿದ್ದಾರೆ.

ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ವರುಣ್​ ಧವನ್​ ಅವರಿಗೆ ಬಾಲಿವುಡ್​ನಲ್ಲಿ ಸಖತ್​ ಬೇಡಿಕೆ ಇದೆ. ‘ಭೇಡಿಯಾ’ ಸಿನಿಮಾದ ಚಿತ್ರೀಕರಣವನ್ನು ಅವರು ಸದ್ಯದಲ್ಲೇ ಆರಂಭಿಸಲಿದ್ದಾರೆ. ಆ ಚಿತ್ರಕ್ಕೆ ಅಮರ್​ ಕೌಶಿಕ್​ ನಿರ್ದೇಶನ ಮಾಡಲಿದ್ದು, ವರುಣ್​ ಧವನ್​ ಜೊತೆ ಕೃತಿ ಸನೋನ್​, ಅಭಿಷೇಕ್​ ಬ್ಯಾನರ್ಜಿ ಮುಂತಾದವರು ನಟಿಸಲಿದ್ದಾರೆ.

ಇದನ್ನು ಓದಿ:

ಬಾಲ್ಯದ ಗೆಳತಿ ನತಾಶಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್​ ಧವನ್

Heart Attack: ಹೃದಯಾಘಾತಕ್ಕೆ ಕಾರಣಗಳೇನು? ಈ ಬಗ್ಗೆ ವೈದ್ಯರು ಹೇಳುವುದೇನು?

TV9 Kannada


Leave a Reply

Your email address will not be published. Required fields are marked *