ಹಾವೇರಿ: ಇತ್ತೀಚೆಗೆ ರಾಮನಗರದ ಸಿಂಗ್ರಾಬೋವಿಯಲ್ಲಿ ಆಸ್ತಿಗಾಗಿ ಮಗ ಹೆತ್ತ ಅಪ್ಪನನ್ನೇ ಥಳಿಸಿ ಮನೆಯಿಂದ ಹೊರಗೆ ಹಾಕಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಹೌದು.. ಆಸ್ತಿ ಭಾಗ ಮಾಡಿಲ್ಲ ಅಂತ ಮಕ್ಕಳು ಹೆತ್ತ ತಾಯಿಯನ್ನ ನಡು ದಾರಿಯಲ್ಲೇ ಬಿಟ್ಟು ಹೋದ ಹೃದಯ ವಿದ್ರಾವಕ ಘಟನೆ ಹಾವೇರಿಯಲ್ಲಿ ನಡೆದಿದೆ.

ತಾಯಿ ತನ್ನ ಮಕ್ಕಳು ಬೆಳೆದಂತೆಲ್ಲ ಎದೆಯಾಳದಿಂದ ಅಕ್ಕರೆ ತೋರಿ ಆರ್ಶೀರ್ವದಿಸಿ ಇನ್ನೇನು ಆಳೆತ್ತರಕ್ಕೆ ಬಂದ್ಮೇಲೆ ತಮ್ಮನ್ನ ರಾಣಿ ಹಾಗೆ ನೋಡ್ಕೊಳ್ತಾರೆ ಅಂತ ತಾಯಿ ತನ್ನ ಮೇಲೆ ಎಲ್ಲಿಲ್ಲದ ಆಸೆ ಆಕಾಂಕ್ಷೆಗಳನ್ನು ಹೊಂದಿರ್ತಾಳೆ. ಆದರೆ ನಾಗರಿಕ ಸಮಾಜ ನಾಚಿಕೆ ಪಡುವಂತಹ ಕೆಲವೊಂದು ಕೃತ್ಯಗಳು ಮಕ್ಕಳಿಂದ ನಡೀತಾನೇ ಇರ್ತವೆ. ಅದ್ರಂತೆ ಇದೀಗ ಹಾವೇರಿಯಲ್ಲಿ ಪಾಪಿ ಮಕ್ಕಳು ತಮ್ಮ ಕರಾಳಮುಖವನ್ನ ತೋರಿಸಿದ್ದಾರೆ.

 

ಕೋಟಿ ಕೋಟಿ ಆಸ್ತಿಯ ಒಡತಿಯಾಗಿರುವ ಈರಮ್ಮ ಎಂಬ ವೃದ್ಧೆ ತನ್ನ ಮಕ್ಕಳಿಗೆ ಇದುವರೆಗೂ ಆಸ್ತಿ ಭಾಗ ಮಾಡಿ ಹಂಚಿಲ್ಲ. ಇದರಿಂದ ಕೋಪಗೊಂಡ ಪಾಪಿ ಮಕ್ಕಳು ತಾಯಿಯನ್ನು ಪಾಳು ಬಿದ್ದ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಇಳಿ ವಯಸ್ಸಿನಲ್ಲಿ ಮಕ್ಕಳ ಜೊತೆ ಆರಾಮಾಗಿ ಇರಬೇಕಾದ ವೃದ್ಧೆ ಈರಮ್ಮ ಈಗ ಕೋಟಿ ಕೋಟಿ ಆಸ್ತಿ ಇದ್ದರೂ ಕೂಡ ಒಂದು ಹೊತ್ತಿನ ಅನ್ನ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಯಾರೋ ಕೊಟ್ಟ ಊಟ, ಬಟ್ಟೆಯಿಂದ ಬದುಕು ತಳ್ಳುತ್ತಿದ್ದಾಳೆ.

ವೃದ್ಧೆಯ ನರಕಯಾತನೆಯನ್ನ ಕಂಡ ಪಕ್ಕದ ಪ್ಲಾಸ್ಟಿಕ್​ ಅಂಗಡಿಯ ಮಾಲೀಕ ವೃದ್ಧೆಯನ್ನ ಉಪಚಾರ ಮಾಡುತ್ತಿದ್ದಾನೆ. ಇನ್ನು ಮಕ್ಕಳ ಈ ಹೇಯ ಕೃತ್ಯಕ್ಕೆ ಆಕ್ರೋಶಗೊಂಡ ಸ್ಥಳೀಯರು ಪಾಪಿ ಮಕ್ಕಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ: ಆಸ್ತಿಗಾಗಿ ಹೆತ್ತ ತಂದೆಯನ್ನೇ ಥಳಿಸಿ ಮನೆಯಿಂದ ಹೊರಗೆಸೆದ ಮಗ

The post ಹೃದಯ ವಿದ್ರಾವಕ ಘಟನೆ; ಆಸ್ತಿ ಪಾಲು ಮಾಡಿಲ್ಲವೆಂದು ಅಮ್ಮನನ್ನೇ ಹೊರ ಹಾಕಿದ ಪಾಪಿ ಮಕ್ಕಳು..! appeared first on News First Kannada.

Source: newsfirstlive.com

Source link