ಕಲಬುರಗಿ: ವಿದ್ಯುತ್ ತಂತಿ ತಗುಲಿ ಸಹೋದರರಿಬ್ಬರು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದಲ್ಲಿ ನಡೆದಿದೆ.

ಆಕಾಶ ಬಸವರಾಜ ಸುಂಬಡ (18) ಪ್ರಕಾಶ ಬಸವರಾಜ ಸುಂಬಡ (21) ಮೃತ ಸಹೋದರರು. ಮೃತರು ಯಡ್ರಾಮಿ ತಾಲ್ಲೂಕಿನ ಹರನಾಳ ಗ್ರಾಮದ ನಿವಾಸಿಗಳಾಗಿದ್ದರು. ಜಮೀನೊಂದರಲ್ಲಿ ಚೆಕ್ ಡ್ಯಾಮ್ ಕಾಮಗಾರಿಗಾಗಿ ವಿದ್ಯುತ್ ತಂತಿ ಅಳವಡಿಸಲಾಗಿತ್ತು.

ಚೆಕ್ ಡ್ಯಾಮ್ ನಿರ್ಮಾಣಕ್ಕೆ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಹೊಲದಲ್ಲಿ ಹಾಕಿದ್ದ ವಿದ್ಯುತ್ ತಂತಿ ದಾಟಿ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ ಎನ್ನಲಾಗಿದೆ.

The post ಹೃದಯ ವಿದ್ರಾವಕ ಘಟನೆ; ವಿದ್ಯುತ್ ತಂತಿ ತಗುಲಿ ಅಣ್ಣ-ತಮ್ಮ ದುರ್ಮರಣ appeared first on News First Kannada.

Source: newsfirstlive.com

Source link