ಹೃದಯ ಹಿಂಡುವ ಅವಾಂತರ.. ಮಳೆ ನೀರು ಪಾಲಾದ ಲಕ್ಷಾಂತರ ಮೌಲ್ಯದ ಮೆಣಸಿನಕಾಯಿ


ಬಳ್ಳಾರಿ: ನೆನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಒಣಗಲು ಹಾಕಿದ್ದ ಲಕ್ಷಾಂತರ ಮೌಲ್ಯದ ಮೆಣಸಿನಕಾಯಿ ನೀರು ಪಾಲಾದ ಘಟನೆ ಜಿಲ್ಲೆ ಕುರುಗೋಡು ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ನಡೆದಿದೆ.

ಮೆಣಸಿನಕಾಯಿ ಕಟಾವಿನ ಬಳಿಕ ಪಾಂಡುರಂಗ ದೇವಾಲಯ ಆವರಣದಲ್ಲಿ ಒಣಗಿಸಲು ಹಾಕಿದ್ದ ಮೆಣಸಿನಕಾಯಿ ದಿಢೀರ್​ ಮಳೆಗೆ ನೀರುಪಾಲಾಗಿದ್ದು ಮೂವತ್ತಕ್ಕೂ ಹೆಚ್ಚು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 9 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳ ಹಾಲಾಗಿದೆ ಎನ್ನಲಾಗಿದ್ದು ಕೊಚ್ಚಿಹೋದ ಬೆಳಯನ್ನು ಕಂಡ ಅನ್ನದಾತ ಕೈಗೆ ಬಂದ ಬೆಳೆ ಬಾಯಿಗೆ ಬರಲಿಲ್ಲವೆಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.

News First Live Kannada


Leave a Reply

Your email address will not be published. Required fields are marked *