ಲಕ್ನೋ: ಸೊಸೆಯಾಗಿದ್ದವಳೇ ತಂದೆಯ ಎರಡನೇ ಪತ್ನಿಯಾಗಿ, ಮಲತಾಯಿಯಾಗಿ ಬಂದು ಪುತ್ರನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಕೊಂಡಿರುವ ಒಂದು ಪ್ರಕರಣ ಉತ್ತರ ಪ್ರದೇಶದ ಬದೌನ್‍ನಿಂದ ವರದಿಯಾಗಿದೆ.

ಯುವಕನಿಗೆ 2016ರಲ್ಲಿ ಮದುವೆಯಾಗಿತ್ತು. ಆತ ಮದ್ಯಪಾನ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಕೆ, ಆತನನ್ನು ಬಿಟ್ಟುಹೋಗಿದ್ದಳು. ಆರು ತಿಂಗಳಿಂದ ತಂದೆಯವರು ಖರ್ಚಿಗೆ ಹಣ ನೀಡುವುದನ್ನು ನಿಲ್ಲಿಸಿದ್ದು ಹಾಗೂ ಸಂಭಾಲ್‍ನಲ್ಲಿ ಪ್ರತ್ಯೇಕವಾಗಿ ವಾಸವಾಗಿ ಇರುತ್ತಿದ್ದದ್ದು ಪುತ್ರನ ಗಮನಕ್ಕೆ ಬಂದಿತ್ತು. ಹೀಗಾಗಿ ತಂದೆಯವರ ಜೀವನ ವಿಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿ ಕೊಡುವಂತೆ ಜಿಲ್ಲಾ ಪಂಚಾಯತ್ ಗೆ ಆರ್‍ಟಿಐ ಮೂಲಕ ಅರ್ಜಿ ಸಲ್ಲಿಸಿದ್ದನು. ಇದನ್ನೂ ಓದಿ: ಸೋಮವಾರಕ್ಕೆ ಮಾಡಿ ಸಿಹಿಯಾದ ಪನ್ನೀರ್ ಪಾಯಸ

ಮಗನಿಗೆ ಆಘಾತವಾಗುವಂತಹ ವಿಚಾರ ಗೊತ್ತಾಗಿದೆ. 2016ರಲ್ಲಿ ತಾನು ಮದುವೆಯಾಗಿದ್ದ ಯುವತಿಯನ್ನೇ ತಂದೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದ ಅಂಶ ಬಹಿರಂಗವಾಯಿತು. ಇದರಿಂದ ಕೋಪಗೊಂಡ ಯುವಕ ತಂದೆ ವಿರುದ್ಧ ಬಿಸೌಲಿ ಠಾಣೆಯಲ್ಲಿ ದೂರು ನೀಡಿದ್ದಾನೆ. ಗುಟ್ಟು ಗೊತ್ತಾದ ಬಳಿಕ ಯುವತಿ ಕೂಡ ತಂದೆಯ ಜೊತೆಗೆ ಬರುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಪೊಲೀಸರೂ ಕೂಡ ವಿವಾದವನ್ನು ರಾಜಿ ಮೂಲಕ ಇತ್ಯರ್ಥಕ್ಕೆ ಮುಂದಾಗಿದ್ದಾರೆ.

The post ಹೆಂಡತಿಯಾಗಿದ್ದವಳು ಮಲತಾಯಿಯಾಗಿ ಬಂದಳು..! appeared first on Public TV.

Source: publictv.in

Source link