ಹೆಂಡತಿ ಕಾಟಕ್ಕೆ ಬೇಸತ್ತು ಮಾಲೀಕನ ಹತ್ಯೆಗೆ ಮುಂದಾದ ಆರೋಪಿ; ಜುಗರಾಜ್‌ ಜೈನ್ ಹತ್ಯೆ ಪ್ರಕರಣದಲ್ಲಿ ನಾಲ್ವರ ಬಂಧನ | Chamarajpet Police Arrest 4 Accused In Businessmen Jugraj Murder Case and murder mystery revealed


ಹೆಂಡತಿ ಕಾಟಕ್ಕೆ ಬೇಸತ್ತು ಮಾಲೀಕನ ಹತ್ಯೆಗೆ ಮುಂದಾದ ಆರೋಪಿ; ಜುಗರಾಜ್‌ ಜೈನ್ ಹತ್ಯೆ ಪ್ರಕರಣದಲ್ಲಿ ನಾಲ್ವರ ಬಂಧನ

ಬಂಧಿತರಿಂದ 8.75 ಕೆ.ಜಿ ಚಿನ್ನ, 53 ಲಕ್ಷ ನಗದು, 4 ಕೆ.ಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ

ಕೊಲೆಯಾದ ಜುಗರಾಜ್‌ ಜೈನ್ ಬಳಿ 15 ಸಾವಿರ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಆರೋಪಿ ಬಿಜೋರಾಮ್‌, ಹಣದ ಆಸೆಗೆ ತನ್ನ ಮಾಲೀಕನನ್ನೆ ಕೊಂದಿದ್ದಾನೆ. ಆದ್ರೆ ಕೊಲೆಯ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಹಾನಿ ಇದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದ್ದ ಜುಗರಾಜ್‌ ಜೈನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲ ಹಂತದಲ್ಲಿ ಓರ್ವ ಅರೋಪಿ ಮಾತ್ರ ಕೊಲೆ ಮಾಡಿದ್ದಾನೆ ಎನ್ನಲಾಗಿತ್ತು. ಆದ್ರೆ ತನಿಖಾ ಹಂತದಲ್ಲಿ ನಾಲ್ವರು ಅರೋಪಿಗಳು ಭಾಗಿ ಆಗಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಿಜೋರಾಮ್‌, ಮಹೇಂದ್ರ, ಪೊರಾನ್‌, ಓಂಪ್ರಕಾಶ್‌ ಬಂಧಿತರು.

ಬಂಧಿತರಿಂದ 8.75 ಕೆ.ಜಿ ಚಿನ್ನ, 53 ಲಕ್ಷ ನಗದು, 4 ಕೆ.ಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ ಬಿಜೋರಾಮ್‌ ಸೇರಿ ನಾಲ್ವರು ಆರೋಪಿಗಳ ಅರೆಸ್ಟ್ ಆಗಿದ್ದು ಗುಜರಾತ್‌ನ ಅಮೀರ್‌ಗಢ ಚೆಕ್‌ಪೋಸ್ಟ್‌ನಲ್ಲಿ ಬಿಜೋರಾಮ್‌ ಬಂಧಿಸಲಾಗಿತ್ತು. ಲಾರಿಯಲ್ಲಿ ಅವಿತುಕುಳಿತಿದ್ದ ಉದ್ಯಮಿ ಕೊಲೆ ಆರೋಪಿ ಬಿಜೋರಾಮ್‌, ಮೇ 25ರಂದು ಕೊಲೆಗೈದು ಚಿನ್ನಾಭರಣ ಸಮೇತ ಎಸ್ಕೇಪ್ ಆಗಿದ್ದ. ಮತ್ತೊಬ್ಬ ಆರೋಪಿ ಓಂರಾವ್‌ಗಾಗಿ ಪೊಲೀಸರು ಹುಡುಕಾಟುತ್ತಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV9 Kannada


Leave a Reply

Your email address will not be published.