ಲಾಕ್​​ಡೌನ್​​ನಿಂದ ದೇಶದ ಎಲ್ಲಾ ವಲಯಗಳು ಸ್ತಬ್ಧವಾಗಿದೆ. ಇದ್ರ ನಡುವೆ ದೇಶದಲ್ಲಿ ಸೈಕಲ್​​ಗೆ  ಭಾರೀ ಬೇಡಿಕೆ ಉಂಟಾಗಿದೆ.

ಕೊರೊನಾ ಕಳೆದೆರಡು ವರ್ಷಗಳಲ್ಲಿ ಏನೆಲ್ಲಾ ಆವಾಂತರಗಳನ್ನು ಸೃಷ್ಟಿಸಿದೆ ಎಂಬುವುದು ಇಡೀ ದೇಶವೇ ಕಣ್ಣಾರೆ ಕಂಡಿದೆ. ಇಡೀ ದೇಶವನ್ನೇ ಲಾಕ್ ಆಗುವಂತೆ ಮಾಡಿದ ಈ ವೈರಸ್ ದುಡಿಯುವ ಜನರ ಕೈಗಳನ್ನೇ ಕಟ್ಟಿ ಹಾಕಿದೆ. ದೇಶದ ಆರ್ಥಿಕತೆ ವಲಯಗಳ ಮೇಲೂ ಕೊರೊನಾ ಸವಾರಿ ಮಾಡಿದ್ದು, ದೇಶದ ಆರ್ಥಿಕ ಜಗತ್ತೆ ಕೊರೊನಾದಿಂದ ತಲ್ಲಣಗೊಂಡಿದೆ. ಸಣ್ಣ ಪುಟ್ಟ ಕೈಗಾರಿಕೆಗಳು ಕೂಡ ಬಾಗಿಲು ಹಾಕಿದೆ. ಕೊರೊನಾ ನೂರಾರು ಅವಾಂತರಗಳನ್ನು ಸೃಷ್ಟಿಸಿದ್ದೇನೋ ನಿಜ. ಆದ್ರೆ ಕೊರೊನಾ ಬಂದ್ಮೇಲೆ ಜನರು ಹತ್ತಾರು ಪಾಠಗಳನ್ನು ಕೂಡ ಕಲಿತಿದ್ದಾರೆ.

ಕೊರೊನಾದಿಂದ ಜನರಲ್ಲಿ ಹೆಚ್ಚಾಯ್ತು ಆರೋಗ್ಯದ ಕಾಳಜಿ
ಕುಟುಂಬ ಸಮೇತರಾಗಿ ವ್ಯಾಯಾಮ ಮಾಡುತ್ತಿರುವ ಜನರು

ಈ ಕೊರೊನಾ ಬಂದ್ಮೇಲಂತು ಜನರಿಗೆ ಆರೋಗ್ಯದ ಬಗ್ಗೆ ದೊಡ್ಡ ಚಿಂತೆಯಾಗ್ಬಿಟ್ಟಿದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸಣ್ಣದೊಂದು ತಲೆನೋವು ಶುರುವಾದ್ರು ಸಾಕು ತಕ್ಷಣ ಔಷಧಿ ಸೇವಿಸುವ ಮೂಲಕ ಚಿಕ್ಕ ಪುಟ್ಟ ರೋಗದ ವಿರುದ್ಧ ಹೋರಾಟ ಶುರು ಮಾಡ್ಕೊತ್ತಾರೆ. ಜನರು ಸ್ವಯಂ ಪ್ರೇರಿತವಾಗಿ ಉತ್ತಮ ಆರೋಗ್ಯದ ಕಡೆ ಒತ್ತುಕೊಡ್ತಿದ್ದಾರೆ. ಜನರು ಸ್ವಚ್ಛತೆಯ ಕಡೆಯೂ ಹೆಚ್ಚು ಒತ್ತು ಕೊಡ್ತಿದ್ದು, ಆಗಾಗ ಕೈ, ಮುಖ ತೊಳೆಯು ಮೂಲಕ ಪ್ರತೀ ಕ್ಷಣವು ಸ್ವಚ್ಛತೆಯನ್ನು ಮೈಗೂಡಿಸಿಕೊಂಡಿದ್ದಾರೆ.

ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ
ಕೊರೊನಾದಿಂದ ಜನರು ಏಕಾಂಗಿಯಾಗ ಜೀವನ ನಡೆಸಲು ಶುರು ಮಾಡ್ಕೊಂಡಿದ್ದಾರೆ. ಏಕಾಂತದ ಜೀವನವೇ ಉತ್ತಮ ಎಂದು ಇತರರಿಂದ ಅಂತರ ಕಾಯ್ದುಕೊಂಡು ಬದುಕುತ್ತಿದ್ದಾರೆ. ಲಾಕ್​ಡೌನ್ನಿಂದ ಮನೆಯಲ್ಲಿಯೇ ಹೆಚ್ಚು ವ್ಯಾಯಾಮ ಮಾಡ್ಕೊಳ್ಳುವ ಮೂಲಕ ಆರೋಗ್ಯದ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ. ಕೆಲವರು ಕುಟುಂಬ ಸಮೇತರಾಗಿ ವ್ಯಾಯಾಮ ಮಾಡ್ತಿದ್ರೆ ಇನ್ನೂ ಕೆಲವರು ಏಕಾಂಗಿಯಾಗಿ ದೇಹ ದಂಡಿಸುತ್ತಿದ್ದಾರೆ. ಈ ಮೂಲಕ ಉತ್ತಮ ಆರೋಗ್ಯಕ್ಕಾಗಿ ಎಲ್ಲಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.
ಉತ್ತಮ ದೇಹಕ್ಕಾಗಿ ಇಷ್ಟು ದಿನ ಜನರು ದುಡ್ಡು ಖರ್ಚು ಮಾಡಿ ಜಿಮ್ಗಳಿಗೆ ಹೋಗುತ್ತಿದ್ರು. ಲಾಕ್ಡೌನ್ ನಿಂದ ಈಗಾಗಲೇ ಜಿಮ್​​ಗಳಿಗೆ ಬೀಗ ಹಾಕಲಾಗಿದೆ. ಈ ಕೊರೊನಾ ಮೊದಲನೇ ಅಲೆ ಕಡ್ಮೆಯಾಗುತ್ತಿದ್ದಂತೆಯೇ ಜಿಮ್​ಗಳು ಮುಚ್ಚಿದ್ದ ಬಾಗಿಲನ್ನು ಮತ್ತೆ ತೆರೆದಿದ್ದವು. ಆದ್ರೆ ಜನರು ಮಾತ್ರ ಜಿಮ್​​ಗಳಿಗೆ ಹೋಗಿ ದೇಹ ದಂಡಿಸಲು ಮೊದಲಿನಷ್ಟು ಆಸಕ್ತಿ ತೋರಿಸಿಲ್ಲ. ಜಿಮ್​ಗಳಲ್ಲಿ ಒಬ್ಬರು ಮುಟ್ಟಿದ ವಸ್ತುಗಳನ್ನು ಮತ್ತೊಬ್ಬರು ಮುಟ್ಟುತ್ತಾರೆ. ಇದ್ರಿಂದ ಕೊರೊನಾ ಹರಡುತ್ತೆ ಎಂದು ಭಯಗೊಂಡ ಜನರು ಹಿಂದೇಟು ಹಾಕಿದ್ದಾರೆ.

ಜನರು ಹೊರಗಡೆ ಓಡಾಡೋಕೆ ಕಾರ್, ಬೈಕ್​​ಗಳನ್ನು ಬಳಸುತ್ತಿದ್ರೂ. ಲಾಕ್ಡೌನ್ ವೇಳೆ ಕಾರ್ ಗಳಲ್ಲಿ ಹೊರಗಡೆ ಹೋದ್ರೆ ಗಾಡಿಗಳು ಸೀಜ್ ಆಗುವ ಭಯವೋ ಅಥವಾ ಆರೋಗ್ಯದ ಬಗೆಗಿನ ಕಾಳಜಿಯೋ ಗೊತ್ತಿಲ್ಲ. ಕೊರೊನಾ ಬಂದ ಮೇಲಂತೂ ಜನರು ಕಾರ್ ಬೈಕ್ ಗಳಿಗಿಂತ ಬೈಸೈಕಲ್ ಕಡೆ ಒಲವು ಹರಿಸಿದ್ದಾರೆ. ಪರಿಣಾಮ ಸೈಕಲ್​ಗೆ ಇದೀಗ ದೇಶದಲ್ಲೇ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ.

ಕೊರೊನಾದಿಂದ ಸೈಕಲ್​ಗಳಿಗೆ ಫುಲ್ ಡಿಮ್ಯಾಂಡ್
ಕೊರೊನಾ ಸಮಯದಲ್ಲೇ ಸೈಕಲ್​ಗಳು ಹೆಚ್ಚು ಸೇಲ್
ಸೈಕಲ್​ಗಳಿಗೆ ಹೆಚ್ಚಿದ ಬೇಡಿಕೆ, ಕಡಿಮೆಯಾದ ಪೂರೈಕೆ

ಈ ಸೈಕಲ್ ಸವಾರಿಯೇ ಹಾಗೆ. ಈ ಸೈಕಲ್ ಸವಾರಿ ಉತ್ತಮ ಆರೋಗ್ಯಕ್ಕೆ ದಾರಿ. ಸೈಕಲ್ ಸವಾರಿ ಮಾಡುವಾಗ ಸಿಗುವ ಖುಷಿ ಪದಗಳಿಗೆ ನಿಲುಕದ್ದು. ಬೆಲೆ ಕಟ್ಟಲು ಸಾಧ್ಯವಾಗದ್ದು. ಸೈಕಲ್ ಸವಾರಿ ಮಾಡ್ಕೊಂಡು ಪ್ರಕೃತಿಯ ನಡುವೆ ಸಾಗುವುದೇ ಆಹ್ಲಾದಕರ. ಮೊದಲ ಬಾರಿಗೆ ಸೈಕಲ್ ಅಭ್ಯಾಸ ಮಾಡುತ್ತಿರುವವರು ತಮ್ಮ ಸವಾರಿಯನ್ನು ಎಂದಿಗೂ ಮರೆಯುವುದಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಸೈಕಲ್ ಸವಾರಿ ಮಾಡ್ಕೊಂದು ಹೋಗ್ತಿದ್ದಾಗ ಸಿಗ್ತಿದ್ದ ಖುಷಿ ಈಗ ಐಷರಾಮಿ ಏ.ಸಿ ಕಾರ್ ಗಳಲ್ಲಿ ಓಡಾಡಿದಾಗ್ಲ ಸಿಗಲ್ಲ. ಬೆಳಗ್ಗೆ ಎದ್ದು ಸೈಕಲ್ ತುಳಿದರೆ ಕೆಲವರು ದಿನವಿಡೀ ಉತ್ಸಾಹದಿಂದಲೇ ಇರ್ತಾರೆ. ಇದೀಗ ಇದೇ ಸೈಕಲ್ ಸವಾರಿಯನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ. ಕಾರ್ ಬೈಕ್​​ಗಳನ್ನ ಪಕ್ಕಕ್ಕಿಟ್ಟು ಸೈಕಲ್ ತುಳಿಯೋಕೆ ಮುಂದಾಗಿದ್ದಾರೆ.

ಕೊರೊನಾ ಬಂದ್ಮೇಲಂತೂ ಜನರು ಹಿಂದಿನ ಜೀವನಾನು ಕ್ರಮಗಳಿಗೆ ಮಾರು ಹೋಗುತ್ತಿದ್ದಾರೆ. ಇದೀಗ ಜನರು ಬೈಕ್ ಕಾರ್ ಗಳಿಂತ ಹೆಚ್ಚಾಗಿ ಸೈಕಲ್ ಖರೀದಿಸುತ್ತಿದ್ದಾರೆ. ಈ ಮೊದಲು ಬಡವರು, ಶಾಲಾ ಮಕ್ಕಳು ಹೆಚ್ಚಾಗಿ ಸೈಕಲ್‌ ಬಳಸುತ್ತಿದ್ದರು. ಕೊರೊನಾ ಬಂದ್ಮೇಲಂತೂ ಬ್ರಾಂಡ್ ಸೈಕಲ್​​ಗಳನ್ನು ಬಳಸುವುದು ಒಂದು ಟ್ರೆಂಡ್ ಆಗ್ಬಿಟ್ಟಿದೆ. ಜನರಿಗೆ ಪ್ರತಿಷ್ಠೆಯಾಗಿಬಿಟ್ಟಿದೆ. ಬಡವರು, ಮಧ್ಯಮ ವರ್ಗದವರು ಮಾತ್ರವಲ್ಲದೇ ಸಿರಿವಂತರು ಕೂಡ ಈಗ ಸೈಕಲ್ ಖರೀದಿ ಮಾಡ್ತಿದ್ದಾರೆ. ನಗರ ಮಾತ್ರವಲ್ಲ ಗ್ರಾಮಾಂತರ ಪ್ರದೇಶಗಳಲ್ಲಿಯೂ ಜನರು ಹೆಚ್ಚೆಚ್ಚು ಬೈ ಸೈಕಲ್​​ಗಳನ್ನು ಖರೀದಿ ಮಾಡ್ತಿದ್ದಾರೆ. ಪರಿಣಾಮ ಕೊರೊನಾ ಸಮಯದಲ್ಲಿ ಅವುಗಳ ಮಾರಾಟ ಕೂಡ ಹೆಚ್ಚಾಗ್ತಿದೆ.

ಇದ್ರಿಂದ ಸದ್ಯ ದೇಶದಲ್ಲಿ ಬೈ ಸೈಕಲ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡ್ಮೆಯಾಗುತ್ತಿದೆ ಎಂದು ಕೆಲ ಕಂಪನಿಗಳೇ ಹೇಳುತ್ತಿದೆ. ಕೊರೊನಾ ಬಂದ್ಮೇಲೆ ಮಾಮೂಲಿ ದಿನಗಳಿಗಿಂತ ಎರಡು ಪಟ್ಟು ಹೆಚ್ಚು ಸೈಕಲ್‌ಗಳು ಮಾರಾಟವಾಗುತ್ತಿವೆ ಎಂದು ಸ್ವತಃ ಸೈಕಲ್ ಕಂಪನಿಯ ನಿರ್ದೇಶಕರೇ ಹೇಳ್ಕೊಂಡಿದ್ದಾರೆ.
ಭಾರತದ ಸೈಕಲ್ ಕೈಗಾರಿಯ ವಲಯವು ಉತ್ತಮ ಪ್ರಗತಿಯನ್ನು ಕಾಣುತ್ತಿದೆ. ದಿನದಿಂದ ದಿನಕ್ಕೆ ಸೈಕಲ್​ಗೆ ಬೇಡಿಕೆ ಹೆಚ್ಚಾಗ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸೈಕಲ್‌ಗಳ ಮಾರಾಟ ಹೆಚ್ಚಾಗಿದೆ. ಅದರಲ್ಲೂ ಲಾಕ್‌ಡೌನ್‌ ಬಳಿಕ ಹೆಚ್ಚಿನ ಪ್ರಮಾಣದ ಸೈಕಲ್‌ಗಳನ್ನು ಜನರು ಖರೀದಿಸುತ್ತಿದ್ದಾರೆ. ಕೊರೊನಾ ಬಂದ್ಮೇಲೆ ಶೇ.100 ರಷ್ಟು ಬೇಡಿಕೆ ಹೆಚ್ಚಾಗಿದೆ. ಜನರು ಆರೋಗ್ಯದ ಕಡೆ ಗಮನ ಹರಿಸುತ್ತಿದ್ದು, ಆರೋಗ್ಯ ಹಿತದೃಷ್ಠಿಯಿಂದ ಹೆಚ್ಚಿನ ಜನರು ಸೈಕಲ್ ಬಳಸುತ್ತಿದ್ದಾರೆ.

ಪಂಕಜ್ ಎಂ ಮಂಜುಳ – ಹೀರೋ ಸೈಕಲ್ ಕಂಪನಿ ನಿರ್ದೇಶಕರ
ಕೊರೊನಾ ಸಮಯದಲ್ಲಿಯೇ ಸೈಕಲ್ ಡಿಮ್ಯಾಂಡ್ ಹೆಚ್ಚಾಗಿದ್ದೇಕೆ?
ಕೊರೊನಾ ಸಮಯದಲ್ಲಿ ಸೈಕಲ್ ನಿಂದಾಗುವ ಉಪಯೋಗವೇನು?

ಕೊರೊನಾ ಸಮಯದಲ್ಲಿಯೇ ಸೈಕಲ್​ಗೆ ಡಿಮ್ಯಾಂಡ್ ಹೆಚ್ಚಾಗಿದ್ದಕ್ಕೆ ಹಲವು ಕಾರಣಗಳಿವೆ. ಕೊರೊನಾ ವ್ಯಕ್ತಿಗೆ ಅಟ್ಯಾಕ್ ಆದ್ರೆ, ಹೆಚ್ಚು ಪೆಟ್ಟು ಕೊಡುವುದೇ ಉಸಿರಾಟಕ್ಕೆ. ಉತ್ತಮ ಗಾಳಿ ಸಿಕ್ಕಿದ್ರೆ ಇವುಗಳಿಂದ ಮುಕ್ತಿ ವೊಂದಬಹುದು. ಸೈಕಲ್ ಸವಾರಿ ಮಾಡುತ್ತಾ ಸಾಗುತ್ತಿದ್ದಂತೆಯೇ ದೇಹಕ್ಕೆ ಉತ್ತಮ ಗಾಳಿ ಸಿಗಲಿದೆ. ಸೈಕಲ್ ಸವಾರಿಯಿಂದ ರೋಗ ರುಜಿನದಿಂದ ಮುಕ್ತವಾಗುವುದು ಮಾತ್ರವಲ್ಲದೇ ನಮ್ಮ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.

ಮಾನಸಿಕವಾಗಿ ಎಷ್ಟು ಸದೃಢವಾಗಿ, ಧೈರ್ಯವಾಗಿ ಇರ್ತಾರೋ ಅಷ್ಟು ಬೇಗ ಸೋಂಕಿನಿಂದ ಮುಕ್ತವಾಗಬಹುದೆಂದು ಈಗಾಗಲೇ ತಜ್ಷರೇ ಹೇಳಿದ್ದಾರೆ. ಸಂತಸದಿಂದ ಸೈಕಲ್ ತುಳಿಯುವುದರಿಂದ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಅಲ್ಲದೇ ದೇಹದಲ್ಲಿ ಕೊಬ್ಬಿನಾಂಶ ಕೂಡ ಕಡ್ಮೆಯಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಜನರು ಬೈಸಿಕಲ್​​ಗನ್ನು ಖರೀದಿಸುತ್ತಿದ್ದಾರೆ.

ಕೊರೊನಾದಿಂದ ಕೆಲ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಮನೆಯಲ್ಲಿಯೇ ಕೂತು ಕೆಲಸ ಮಾಡುವಂತೆ ತಿಳಿಸಿದೆ. ಒಂದು ಕಡೆ ಕೆಲಸದ ಒತ್ತಡ ಮತ್ತೊಂದು ಕಡೆಯಿಂದ ಮನೆಯಲ್ಲಿಯೇ ಕೂತು ಮೈ ಜಡ್ಡುಗಟ್ಟುತ್ತದೆಂಬ ಕಾರಣಕ್ಕೆ ಜನರು ಇದೀಗ ಸೈಕಲ್ ತುಳಿಯಲು ಮುಂದಾಗಿದ್ದಾರೆ. ಕೆಲವರು ಬೆಳಗಿನ ಹೊತ್ತು ಸೈಕಲ್ ತುಳಿಯು ಮೂಲಕ ಮೈಂಡ್ ಫ್ರೀ ಮಾಡ್ಕೊತ್ತಿದ್ದಾರೆ. ಸೈಕಲ್ ಯಾವುದೇ ರೀತಿಯ ವಾಯು ಉಗುಳದ ಕಾರಣ ಮಾಲಿನ್ಯ ಮುಕ್ತ ಪ್ರಯಾಣಕ್ಕೂ ಇವು ಸಹಕಾರಿಯಾಗಲಿದೆ.

ಸೈಕಲ್ ಸವಾರಿ ಉತ್ತಮ ಆರೋಗ್ಯಕ್ಕೆ ರಹದಾರಿ
ಪರಿಸರ-ಶಬ್ದ ಮಾಲಿನ್ಯ ತಡೆಯಲು ಸೈಕಲ್ ಸಹಕಾರಿ
ಮಾಲಿನ್ಯ ಮುಕ್ತ ಪ್ರಯಾಣಕ್ಕೆ ಸೈಕಲ್ ಏಕೈಕ ದಾರಿ

ಕೊರೊನಾ ಬಂದ್ಮೇಲೆ ಜನರು ಬೈಕ್, ಕಾರ್ ಗಳನ್ನು ಸೈಡ್ ಗೆ ಹಾಕಿ ಸೈಕಲ್ ಹತ್ತಿದ್ದಾರೆ. ಹೊಗೆಯುಗಳದ ಈ ಸೈಕಲ್ ಸವಾರಿಯಿಂದ ನಮ್ಮ ದೇಹಕ್ಕೆ ಹಲವು ಲಾಭಗಳಿವೆ. ಇವು ಅಪಘಾತದ ಅಪಾಯವನ್ನು ತಡೆಗಟ್ಟುವುದು ಮಾತ್ರವಲ್ಲ ನಮ್ಮ ದೈಹಿಕ ಸಾಮರ್ಥ್ಯವನ್ನು ಕೂಡ ಹೆಚ್ಚಿಸುತ್ತದೆ. ಸೈಕಲ್ ತುಳಿಯುವುದರಿಂದ ನಿಮಗೆ ದೈಹಿಕ ವ್ಯಾಯಾಮವೂ ದೊರಕಿ ಪರಿಸರಕ್ಕೆ ಉಂಟಾಗುತ್ತಿರುವ ಬಹು ದೊಡ್ಡ ಅಪಾಯವನ್ನು ತಪ್ಪಿಸಿಕೊಳ್ಳಬಹುದಾಗಿದೆ. ಇದ್ರಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯವನ್ನು ಕೂಡ ತಡೆಗಟ್ಟಬಹುದು. ಮಾಲಿನ್ಯದಿಂದ ಕಂಗೆಟ್ಟ ರಾಷ್ಟ್ರಗಳಂತೂ ಕೆಲವೊಂದು ಕಡೆ ಸೈಕಲ್ ಸವಾರಿಯನ್ನು ಕಡ್ಡಾಯಗೊಳಿಸಿವೆ. ಇವು ಪರಿಸರ ಮಾಲಿನ್ಯ ,ಶಬ್ಧ ಮಾಲಿನ್ಯ ತಡೆಯಲು ಸಹಕಾರಿಯಾಗಲಿದೆ.

ಹೆಚ್ಚಿದ ಪೆಟ್ರೋಲ್ ರೇಟ್, ಖರ್ಚಿಗೆ ಬ್ರೇಕ್
ದೇಶದಲ್ಲಿ ಈಗಾಗಲೇ ಪೆಟ್ರೋಲ್ ಶತಕ ಬಾರಿಸಿದೆ. ದಿನದಿಂದ ದಿನಕ್ಕೆ ಪೆಟ್ರೋಲ್ ರೇಟ್ ಹೆಚ್ಚಾಗುತ್ತಿದೆ. ಇದ್ರಿಂದ ಜನರು ನಗರದೊಳದಗೆ ಹೆಚ್ಚು ಓಡಾಡಲು ಬೈಕ್ ಗಿಂತ ಸೈಕಲ್ ನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ. ಇದು ಅಪಾಯ ಮುಕ್ತ ಪ್ರಯಾಣ ಮಾತ್ರವಲ್ಲದೇ ಹಣದ ಉಳಿತಾಯಕ್ಕೆ ಕಾರಣವಾಗಿದೆ. ಇವೆಲ್ಲವು ಸಹಜವಾಗಿಯೇ ಸೈಕಲ್​​ಗೆ ಡಿಮ್ಯಾಂಡ್ ಹೆಚ್ಚಾಗುವಂತೆ ಮಾಡಿದೆ.

The post ಹೆಚ್ಚಿದ ಪೆಟ್ರೋಲ್ ರೇಟ್, ಖರ್ಚಿಗೆ ಬ್ರೇಕ್.. ಸೈಕಲ್​​ಗೆ ಡಿಮ್ಯಾಂಡ್ appeared first on News First Kannada.

Source: newsfirstlive.com

Source link