ಹೆಚ್ಚಿದ ಹಾವಳಿ; ಕೊರೊನಾ ಡೆಲ್ಟಾ ಪ್ಲಸ್ ವರಸ್​ಗೆ ಮತ್ತೊಂದು ಬಲಿ

ಹೆಚ್ಚಿದ ಹಾವಳಿ; ಕೊರೊನಾ ಡೆಲ್ಟಾ ಪ್ಲಸ್ ವರಸ್​ಗೆ ಮತ್ತೊಂದು ಬಲಿ

ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಡೆಲ್ಟಾ ಪ್ಲಸ್ ಕೊರೊನಾ ವೈರಸ್ ಸೋಂಕಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. 80 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಬಳಿಕ ಅವರಲ್ಲಿ ಡೆಲ್ಪಾ ಪ್ಲಸ್ ರೂಪಾಂತರಿ ಕೊರೊನಾ ವೈರಸ್ ತಳಿ ಇರೋದು ಪತ್ತೆಯಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ 20 ಕ್ಕೂ ಹೆಚ್ಚು ಜನರಲ್ಲಿ ಡೆಲ್ಪಾ ಪ್ಲಸ್ ಕೊರೊನಾ ಸೋಂಕಿತರು ಇದ್ದರೆ, ದೇಶಾದ್ಯಂತ ಈ ಸಂಖ್ಯೆ 40 ದಾಟಿದೆ.

ಇನ್ನು ಮಧ್ಯಪ್ರದೇಶದಲ್ಲಿ ಕೂಡ ಇಬ್ಬರು ಡೆಲ್ಟಾ ಪ್ಲಸ್ ವೈರಸ್ ಸೋಂಕಿಗೆ ಬಲಿಯಾಗಿದ್ದಾರ ಎನ್ನೋ ಮಾಹಿತಿ ಲಭ್ಯವಾಗಿದೆ. ಇದೇ ಕಾರಣದಿಂದಾಗಿ ಕೇಂದ್ರ ಸರ್ಕಾರ ಮಧ್ಯಪ್ರದೇಶ, ಮಹಾರಾಷ್ಟ್ರ, ಕೇರಳಕ್ಕೆ ಎಚ್ಚರದಿಂದ ಇರೋವಂತೆ ಸೂಚನೆ ನೀಡಿದೆ. ಅಲ್ಲದೇ ಟೆಸ್ಟ್, ಟ್ರಾಕ್, ಟ್ರೀಟ್ ಅಂಡ್ ರಿಪೀಟ್ ಮತ್ತು ಕಂಟೈನ್​ಮೆಂಟ್ ಕಂಟೈನ್ ಮೆಂಟ್ ಕಂಟೈನ್​ಮೆಂಟ್ ಅನ್ನೋ ಮಂತ್ರ ನೀಡಿದ್ದು, ಎಲ್ಲ ರಾಜ್ಯಗಳು ಕೊರೊನಾ ನಿರ್ಮೂಲನೆಗಾಗಿ ಇದನ್ನು ಪಾಲಿಸಬೇಕು ಅಂತಾ ತಿಳಿಸಿದೆ.

The post ಹೆಚ್ಚಿದ ಹಾವಳಿ; ಕೊರೊನಾ ಡೆಲ್ಟಾ ಪ್ಲಸ್ ವರಸ್​ಗೆ ಮತ್ತೊಂದು ಬಲಿ appeared first on News First Kannada.

Source: newsfirstlive.com

Source link