ಹೆಚ್ಚಿನ ಮಾಸ್ಕ್​ ಫೈನ್ ಸಂಗ್ರಹಕ್ಕೆ ಅಧಿಕಾರಿಗಳ ಒತ್ತಡ, ಇತ್ತ ಜನರ ಬೈಗುಳ .. ಪೊಲೀಸ್ ಸಿಬ್ಬಂದಿ ಅಳಲು

ಹೆಚ್ಚಿನ ಮಾಸ್ಕ್​ ಫೈನ್ ಸಂಗ್ರಹಕ್ಕೆ ಅಧಿಕಾರಿಗಳ ಒತ್ತಡ, ಇತ್ತ ಜನರ ಬೈಗುಳ .. ಪೊಲೀಸ್ ಸಿಬ್ಬಂದಿ ಅಳಲು

ಬೆಂಗಳೂರು: ಹೆಚ್ಚಿನ ಮಾಸ್ಕ್ ಫೈನ್ ಕಲೆಕ್ಟ್ ಮಾಡಬೇಕು. ಇಲ್ಲವಾದ್ರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಅಂತ ಪೊಲೀಸರಿಗೆ ಹಿರಿಯ ಅಧಿಕಾರಿಗಳಿಂದ ಒತ್ತಡ ಹಾಕಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯ ಹಾಗೂ ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆ ಈಗ ತಾನೆ ಕಡಿಮೆಯಾಗಿದೆ. ಆದ್ರೆ ಮಾಸ್ಕ್​ ಧರಿಸದವರಿಂದ ಸರಿಯಾಗಿ ದಂಡ ಸಂಗ್ರಹಿಸಲಾಗ್ತಿಲ್ಲ ಎಂದು ಪೊಲೀಸರಿಗೆ ಹೆಚ್ಚಿನ ಒತ್ತಡ ಹಾಕಲಾಗುತ್ತಿದೆಯಂತೆ. ಪ್ರತಿನಿತ್ಯ ಇಂತಿಷ್ಟು ಮಾಸ್ಕ್ ಕೇಸ್ ಗಳನ್ನು ಹಾಕಲೇಬೇಕು ಎಂದು ಹಿರಿಯ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಮಾಸ್ಕ್ ಹಾಕದ ಜನರಿಂದ ದಂಡ ಕಲೆಕ್ಟ್ ಮಾಡುವಂತೆ, ಅದ್ರಲ್ಲೂ ಹೆಚ್ಚಿನ ಮಾಸ್ಕ್ ಫೈನ್ ಕಲೆಕ್ಟ್ ಮಾಡಬೇಕೆಂದು ಕಿರುಕುಳ ನೀಡಲಾಗುತ್ತಿದೆ. ಬೆಂಗಳೂರಿನ ಎಲ್ಲಾ ಸ್ಟೇಷನ್ ಗಳ ಟ್ರಾಫಿಕ್ ಹಾಗೂ ಲಾ ಅಂಡ್ ಆರ್ಡರ್ ಪೊಲೀಸ್ ಸಿಬ್ಬಂದಿಗೆ ಟಾರ್ಚರ್ ನೀಡಲಾಗುತ್ತಿದೆ ಅಂತ ನೊಂದ ಪೊಲೀಸ್ ಸಿಬ್ಬಂದಿ ಅಳಲು ತೊಡಿಕೊಂಡಿದ್ದಾರೆ.

ಹಿರಿಯ ಅಧಿಕಾರಿಗಳು ಸಿಬ್ಬಂದಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಆ ಸೂಚನೆ ಈ ರೀತಿ ಇದೆ

  • ಎಲ್ಲಾ ಅಧಿಕಾರಿ, ಸಿಬ್ಬಂದಿಯನ್ನ ಮಾಸ್ಕ್ ಫೈನ್ ಹಾಕುವ ಕೆಲಸಕ್ಕೆ ನೇಮಿಸಲಾಗಿದೆ.
  • ನೀವು ತೀವ್ರತರದ ನಿರ್ಲಕ್ಸ್ಯ ತೋರುತ್ತಿರುವುದು ಕಂಡು ಬಂದಿದೆ.
  • ಈ ಬಗ್ಗೆ ಈಗಾಗಲೇ ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
  • ನಿಮ್ಮ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಆದ್ದರಿಂದ ನೀವು ಸಹ ಈ ಶಿಸ್ತು ಕ್ರಮದ ವ್ಯಾಪ್ತಿಯಲ್ಲಿ ಬರುತ್ತಿರೀ.
  • ಇದನ್ನು ಗಮನದಲ್ಲಿ ಇಟ್ಟುಕೊಂಡು ಹೆಚ್ಚಿನ ಮಾಸ್ಕ್ ಫೈನ್ ಪ್ರಕರಣ ದಾಖಲಿಸಬೇಕು.
  • ನಿರ್ಲಕ್ಷ ತೋರಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಕೂಡ ನೀಡಲಾಗಿದೆ.

ಅಂದ್ರೆ ಹೆಚ್ಚಿನ ಮಾಸ್ಕ್ ಫೈನ್ ಕಲೆಕ್ಟ್ ಮಾಡಲಿಲ್ಲ ಅಂದ್ರೆ ಅಮಾನತ್ತಿನ ಶಿಕ್ಷೆ ಅನುಭವಿಸಬೇಕಾಗುತ್ತೆ ಅಂತ ಪರೋಕ್ಷವಾಗಿ ವಾರ್ನಿಂಗ್ ನೀಡಲಾಘಿದೆ. ಪೊಲೀಸ್ ಸಿಬ್ಬಂದಿ ಅಧಿಕಾರಿಗಳ ಮಾತು ಕೇಳಿ, ಸಾರ್ವಜನಿಕರಿಂದ ಫೈನ್ ಸಂಗ್ರಹಣೆಗೆ ಹೋದ್ರೆ ಜನ ಕೊರೊನಾ ಸಂಕಷ್ಟದಲ್ಲಿದ್ದೇವೆ. ನಾವು ಫೈನ್ ಕಟ್ಟೋದಿಲ್ಲ ಅಂತ ಜಗಳಕ್ಕೆ ಬೀಳ್ತಿದ್ದಾರೆ. ಫೈನ್ ಹಾಕಲಿಲ್ಲ ಅಂದ್ರೆ ಶಿಸ್ತು ಕ್ರಮ ಎದರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಮಗೆ ಬಂದಿದೆ ಅಂತಿದ್ದಾರೆ ನೊಂದ ಸಿಬ್ಬಂದಿ. ಈ ಹಿನ್ನೆಲೆ ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬಂತಾಗಿದೆ ಪೊಲೀಸ್​ ಸಿಬ್ಬಂದಿಯ ಸದ್ಯದ ಪರಿಸ್ಥಿತಿ.

The post ಹೆಚ್ಚಿನ ಮಾಸ್ಕ್​ ಫೈನ್ ಸಂಗ್ರಹಕ್ಕೆ ಅಧಿಕಾರಿಗಳ ಒತ್ತಡ, ಇತ್ತ ಜನರ ಬೈಗುಳ .. ಪೊಲೀಸ್ ಸಿಬ್ಬಂದಿ ಅಳಲು appeared first on News First Kannada.

Source: newsfirstlive.com

Source link