ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆ ಅಟ್ಟಹಾಸದ ನಡುವೆ ಎಷ್ಟೋ ಮಂದಿ ಸಕಾಲಕ್ಕೆ ಆಕ್ಸಿಜನ್ ಸಿಗದೇ ಪ್ರಾಣಬಿಟ್ಟರು. ಇಂಥ ಸಂಕಷ್ಟದ ಹೊತ್ತಲ್ಲೂ ಕೆಲ ಧನದಾಹಿಗಳು ಆಕ್ಸಿಜನ್ ಸಿಲಿಂಡರ್​ಗಳನ್ನ ಅಕ್ರಮವಾಗಿ ಸಂಗ್ರಹಿಸಿಟ್ಟು ಮಾರುತ್ತಿರೋದು ಬೆಳಕಿಗೆ ಬಂದಿದೆ.

ಆಮ್ಲಜನಕ ಸಿಲಿಂಡರ್​ಗಳನ್ನ ಅಕ್ರಮವಾಗಿ ದಾಸ್ತಾನು ಮಾಡಿದ್ದ ಇಬ್ಬರು ಆರೋಪಿಗಳನ್ನ ಸಿಸಿಬಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಶಿವಗಣೇಶ್ ಹಾಗೂ ಭರತ್ ಬಂಧಿತ ಆರೋಪಿಗಳು. ಇವರಿಬ್ಬರೂ ಬ್ಯಾಟರಾಯನಪುರ ಹಾಗೂ ಶೇಷಾದ್ರಿಪುರಂನಲ್ಲಿ ಹೆಚ್ಚಿನ ಹಣ ಪಡೆದು ಬ್ಲಾಕ್ ನಲ್ಲಿ ಆಕ್ಸಿಜನ್​​ ಸಿಲಿಂಡರ್ ನೀಡ್ತಿದ್ದರು ಎನ್ನಲಾಗಿದೆ.

ಬಂಧಿತರಿಂದ ಪೊಲೀಸರು 4 ಆಕ್ಸಿಜನ್ ಸಿಲಿಂಡರ್​ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಹೆಚ್ಚಿನ ಹಣಕ್ಕೆ ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್​​ ಮಾರುತ್ತಿದ್ದ ಖದೀಮರು ಅರೆಸ್ಟ್​ appeared first on News First Kannada.

Source: newsfirstlive.com

Source link