ಹೆಚ್ಚುತ್ತಿಲ್ಲ ಬ್ಯಾಂಕ್ ಠೇವಣಿ; ನಾಳೆ ಬ್ಯಾಂಕ್​ ಸಿಇಒಗಳ ಜತೆ ಆರ್​ಬಿಐ ಗವರ್ನರ್ ಸಭೆ – RBI Governor Shaktikanta Das to meet CEOs of banks to discuss slow deposit growth latest business news in Kannada


ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಠೇವಣಿ ಬೆಳವಣಿಗೆ ಕುಂಠಿತಗೊಂಡಿರುವ ಬಗ್ಗೆ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಬ್ಯಾಂಕ್​ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (ಸಿಇಒ) ಜತೆ ಸಭೆ ನಡೆಸಲಿದ್ದಾರೆ. ಡಿಜಿಟಲ್ ಬ್ಯಾಂಕಿಂಗ್ ಘಟಕಗಳ ಕಾರ್ಯನಿರ್ಬಹಣೆ ಬಗ್ಗೆಯೂ ಮಾತುಕತೆ ನಡೆಯಲಿದೆ.

ಹೆಚ್ಚುತ್ತಿಲ್ಲ ಬ್ಯಾಂಕ್ ಠೇವಣಿ; ನಾಳೆ ಬ್ಯಾಂಕ್​ ಸಿಇಒಗಳ ಜತೆ ಆರ್​ಬಿಐ ಗವರ್ನರ್ ಸಭೆ

ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ (ಸಂಗ್ರಹ ಚಿತ್ರ)

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಠೇವಣಿ ಬೆಳವಣಿಗೆ ಕುಂಠಿತಗೊಂಡಿರುವ ಬಗ್ಗೆ ಆರ್​ಬಿಐ (RBI) ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಬುಧವಾರ ಬ್ಯಾಂಕ್​ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (ಸಿಇಒ) ಜತೆ ಸಭೆ ನಡೆಸಲಿದ್ದಾರೆ. ಸಾಲದ ಬೇಡಿಕೆ ಹೆಚ್ಚುತ್ತಿರುವುದು ಮತ್ತು ಠೇವಣಿ ಬೆಳವಣಿಗೆ ಗಣನೀಯವಾಗಿ ಕುಂಠಿತಗೊಂಡಿರುವ ಬಗ್ಗೆ ಅವರು ಸಿಇಒಗಳ ಜತೆ ಮಾತುಕತೆ ನಡೆಸಲಿದ್ದಾರೆ. ಆರ್​ಬಿಐ ದತ್ತಾಂಶಗಳ ಪ್ರಕಾರ, ಠೇವಣಿ ಬೆಳವಣಿಗೆ ಪ್ರಮಾಣ ಈ ವರ್ಷ ಶೇಕಡಾ 9.6ರಷ್ಟಿದೆ. ಕಳೆದ ವರ್ಷ ಇದು ಶೇಕಡಾ 10.2ರಷ್ಟಿತ್ತು. ಆದರೆ ಸಾಲ ಪಡೆಯುವಿಕೆ ಪ್ರಮಾಣ ಶೇಕಡಾ 17.9ಕ್ಕೆ ಜಿಗಿದಿದೆ. ಕಳೆದ ವರ್ಷ ಇದು ಶೇಕಡಾ 6.5ರಷ್ಟಿತ್ತು.

ಸುಸ್ಥಿರತೆ, ದರ ನಿಗದಿ ಹಾಗೂ ಠೇವಣಿ ಬೆಳವಣಿಗೆ ಪ್ರಮಾಣದಲ್ಲಿ ಇಳಿಕೆ ಸಭೆಯಲ್ಲಿ ಚರ್ಚೆಗೆ ಬರಲಿರುವ ಮುಖ್ಯ ಅಂಶಗಳು ಎಂದು ಆರ್​ಬಿಐ ಪ್ರಕಟಣೆ ತಿಳಿಸಿದೆ. ಚಿಲ್ಲರೆ ಮತ್ತು ಎಂಎಸ್ಎಂಇಗಳ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು) ಸ್ವತ್ತು ಗುಣಮಟ್ಟಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

TV9 Kannada


Leave a Reply

Your email address will not be published.