ಹೆಚ್‍ಡಿಕೆ-ಸುಮಲತಾ ಟಾಕ್ ಫೈಟ್ – ದೇವೇಗೌಡರ ಮಧ್ಯಸ್ಥಿಕೆ ಅಗತ್ಯ ಅಂದ್ರು ಎ.ಮಂಜು

ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಅಂಬರೀಶ್ ಮಾತಿನ ಸಮರ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಬ್ಬರನ್ನು ಕರೆದು ಮಾತುಕತೆ ನಡೆಸಿದರೆ ಉತ್ತಮ ಎಂದು ಮಾಜಿ ಸಚಿವ ಎ .ಮಂಜು ಅಭಿಪ್ರಾಯಪಟ್ಟರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಜನಪ್ರತಿನಿಧಿಗಳಾಗಿದ್ದು ಪರಸ್ಪರ ಗೌರವದೊಂದಿಗೆ ಮಾತನಾಡುವುದು ಸೂಕ್ತ. ಯಾವುದೇ ಒಂದು ವಿಚಾರದಲ್ಲಿ ಯೋಚನೆ ಮಾಡಿ ಮಾತನಾಡಬೇಕಾಗಿತ್ತು. ಹೀಗಿರುವಾಗ ಗೊಂದಲವನ್ನು ನಿವಾರಿಸಲು ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖ ಮಾತುಕತೆ ನಡೆದರೆ ಉತ್ತಮ ಎಂದು ಹೇಳಿದರು.

ಅಲ್ಲದೆ ಸಮುದಾಯದ ಸ್ವಾಮೀಜಿಗಳು ಕೂಡ ಕರೆದು ಇವರ ನಡುವಿನ ಮಾತಿನ ಸಮರಕ್ಕೆ ತೆರ ಎಳೆಯಬೇಕಿದೆ ಎಂದು ಸಲಹೆ ನೀಡಿದರು. ಆಯಾ ಕ್ಷೇತ್ರದ ಸಂಸದರು ತಮ್ಮ ಕ್ಷೇತ್ರದ ಆಗುಹೋಗುಗಳ ಬಗ್ಗೆ ಮಾತನಾಡುತ್ತಾರೆ. ಜನಪ್ರತಿನಿಧಿಗೆ ನಮ್ಮ ಮಾತಿನ ಮೂಲಕ ಗೌರವ ಕೊಡುವುದು ಒಳ್ಳೆಯದು ಎಂದರು. ಇದನ್ನೂ ಓದಿ: ಸಂಸದೆ ಸುಮಲತಾ ಆರೋಪಕ್ಕೆ ಸರ್ಕಾರದಿಂದ ಉತ್ತರವಿಲ್ಲ – ಸಿದ್ದರಾಮಯ್ಯ ವಾಗ್ದಾಳಿ

ಕಳೆದ ಬಾರಿ ರೇವಣ್ಣ ಅವರು ಮಾತನಾಡಿ ಅಂದಿನ ಸೋಲಿಗೆ ಕಾರಣರಾದರು. ಇಂದು ಕುಮಾರಸ್ವಾಮಿ ಮಾತನಾಡಿ ಅವರ ಮಗನ ಭವಿಷ್ಯ ಅವರೇ ಹಾಳು ಮಾಡುತ್ತಿದ್ದಾರೆ. ಯಾವುದೇ ಹೇಳಿಕೆಗಳನ್ನು ನೀಡುವಾಗ ಸಣ್ಣಪುಟ್ಟ ವ್ಯತ್ಯಾಸಗಳು ಸಾಮಾನ್ಯ. ಕೆಲವರು ತಮ್ಮ ಅನುಕೂಲಕ್ಕಾಗಿ ಸಂಸದೆ ಪರ, ಕುಮಾರಸ್ವಾಮಿ ಪರ ಮಾತನಾಡುತ್ತಾರೆ. ಕೆಆರ್‍ಎಸ್ ಬಿರುಕು ಬಿಟ್ಟಿದ್ದರೆ ಕಾನೂನಿನ ಪ್ರಕಾರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮಂಜು ತಿಳಿಸಿದರು. ಇದನ್ನೂ ಓದಿ: ಆತಂಕ ಹುಟ್ಟಿಸೋ ಚೀಪ್ ಪಾಪ್ಯುಲಾರಿಟಿ ಬಗ್ಗೆ ಮಾತಾಡೋಕೆ ಇಷ್ಟವಿಲ್ಲ- ಸುಮಲತಾಗೆ ಡಿಕೆಶಿ ಟಾಂಗ್

The post ಹೆಚ್‍ಡಿಕೆ-ಸುಮಲತಾ ಟಾಕ್ ಫೈಟ್ – ದೇವೇಗೌಡರ ಮಧ್ಯಸ್ಥಿಕೆ ಅಗತ್ಯ ಅಂದ್ರು ಎ.ಮಂಜು appeared first on Public TV.

Source: publictv.in

Source link