ಹೆಚ್ ಡಿ ಕುಮಾರಸ್ವಾಮಿ ಕಾಣೆಯಾಗಿದ್ದಾರಂತೆ, ಹುಡುಕಿಕೊಟ್ಟವರಿಗೆ ಬಹುಮಾನದ ಘೋಷಣೆ ಮಾಡಿಲ್ಲ! | Gubbi MLA Srinivas’ supporters now upload HD Kumaraswamy missing post in social media ARBಸೋಮವಾರದಂದು ಮತ್ತೊಮ್ಮೆ ಕುಮರಸ್ವಾಮಿ ಕಾಣೆಯಾಗಿದ್ದಾರೆ ಅಂತ ಒಂದು ಪೋಸ್ಟ್ ಹಾಕಿದ್ದಾರೆ. ಇದು ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ

TV9kannada Web Team


| Edited By: Arun Belly

Jun 13, 2022 | 12:35 PM
Tumakuru: ಇದು ನಿಜಕ್ಕೂ ಅತಿರೇಕಕ್ಕೆ ಹೋಗುತ್ತಿದೆ ಮಾರಾಯ್ರೇ. ಮೊದಲು ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದರೆಂಬ ಕಾರಣಕ್ಕೆ ಕೋಲಾರ ಶಾಸಕ ಕೆ ಎಚ್ ಶ್ರೀನಿವಾಸ ಗೌಡರ (KH Srinivas Gowda) ತಿಥಿ ಕಾರ್ಡನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಯಿತು. ನಂತರದ ಸರದಿ ಗುಬ್ಬಿ ಶಾಸಕ ಎಸ್ ಅರ್ ಶ್ರೀನಿವಾಸ್ (S R Srinivas) ಅವರದ್ದು. ಅದಾದ ಮೇಲೆ ಶ್ರೀನಿವಾಸ ಬೆಂಬಲಿರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ವೈಕುಂಠ ಸಮಾರಾಧನೆಯ ಪೋಸ್ಟ್ ಹರಿಬಿಟ್ಟರು. ಸೋಮವಾರದಂದು ಮತ್ತೊಮ್ಮೆ ಕುಮರಸ್ವಾಮಿ ಕಾಣೆಯಾಗಿದ್ದಾರೆ ಅಂತ ಒಂದು ಪೋಸ್ಟ್ ಹಾಕಿದ್ದಾರೆ. ಇದು ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಸಾಮಾಜಿಕ ಜಾಲತಾಣಗಳ ದುರುಪಯೋಗ ಮಿತಿ ಮೀರಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published.