‘ಹೆಡ್ ​ಬುಷ್​’ ಚಿತ್ರದಲ್ಲಿ ವಸಿಷ್ಠ ಸಿಂಹ ಪಾತ್ರ ಏನು? ಗುಟ್ಟು ಬಿಟ್ಟುಕೊಟ್ಟ ಧನಂಜಯ | Dhananjaya Talks about Vasishta Simha Character in Head Bush


ಅಂಡರ್​ವರ್ಲ್ಡ್​ ಡಾನ್​ ಆಗಿದ್ದ ಜಯರಾಜ್​ ಜೀವನ ಕಥೆ ಆಧರಿಸಿ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ‘ಹೆಡ್​ ಬುಷ್​’ (Head Bush) ಎಂದು ನಾಮಕರಣ ಮಾಡಿರುವ ಈ ಚಿತ್ರದಲ್ಲಿ ಜಯರಾಜ್​ ಪಾತ್ರದಲ್ಲಿ ಧನಂಜಯ​ (Dhananjaya) ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮೇಲೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ತಂಡಕ್ಕೆ ವಸಿಷ್ಠ ಸಿಂಹ (Vasishta Simha) ಕೂಡ ಸೇರಿಕೊಂಡಿದ್ದಾರೆ. ಅವರ ಪಾತ್ರದ ಬಗ್ಗೆ ಡಾಲಿ ಧನಂಜಯ ಅವರು ಮಾತನಾಡಿದ್ದಾರೆ. ‘ಬಡವ ರಾಸ್ಕಲ್​’ ಸಕ್ಸಸ್​ ಮೀಟ್​ನಲ್ಲಿ ಧನಂಜಯ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ಧನಂಜಯ ಹಾಗೂ ವಸಿಷ್ಠ ಸಿಂಹ ‘ಟಗರು’ ಸಿನಿಮಾದಲ್ಲಿ ಒಟ್ಟಾಗಿ ತೆರೆ ಹಂಚಿಕೊಂಡಿದ್ದರು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಸಿನಿಮಾದಲ್ಲಿ ಇವರ ಕಾಂಬಿನೇಷನ್​ ವೀಕ್ಷಕರಿಗೆ ಇಷ್ಟವಾಗಿತ್ತು. ಈಗ ಜಯರಾಜ್​ ಪಾತ್ರದಲ್ಲಿ ಧನಂಜಯ ಕಾಣಿಸಿಕೊಂಡರೆ, ಕೊತ್ವಾಲ್​ ಆಗಿ ವಸಿಷ್ಠ ಸಿಂಹ ಕಾಣಿಸಿಕೊಳ್ಳುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *