-ಆತ್ಮಹತ್ಯೆಗೆ ಶರಣಾದ ಯೂಟ್ಯೂಬ್ ವರದಿಗಾರ

ಕೋಲಾರ: ಹೆತ್ತ ತಾಯಿಯನ್ನ ಕೊಲೆ ಮಾಡಿದ್ದ ತಂದೆಯನ್ನ ಮಗನೆ ಹೊಡೆದು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ ಪಟ್ಟಣದ ಮಾರಿಕುಪ್ಪಂನ ನಿವಾಸಿ ರಾಜೇಂದ್ರ(52) ಎಂಬ ತಂದೆಯನ್ನ ತನ್ನ ಮಗ ಕಾರ್ತಿಕ್(30) ಎಂಬಾತ ತಲೆಗೆ ಕಲ್ಲಿನಿಂದ ಟೇಬಲ್‍ಗೆ ಹೊಡೆದು ಕೊಲೆ ಮಾಡಿದ್ದಾನೆ.

ಕಳೆದ 15 ವರ್ಷಗಳ ಹಿಂದೆ ತನ್ನ ತಾಯಿಯನ್ನ ಕೊಂದು 14 ವರ್ಷ ಸೆರೆವಾಸ ಅನುಭವಿಸಿ ಬಂದಿದ್ದ ತಂದೆಯನ್ನ ಮಾರಿಕುಪ್ಪಂ ಬಳಿ ಇರುವ ಮನೆ ಎದುರೆ ಮಗ ಹಾಗೂ ಸ್ನೇಹಿತರು ಹೊಡೆದುರುಳಿಸಿದ್ದಾರೆ. ಸದ್ಯ ಆರೋಪಿ ಮಗನನ್ನ ಮಾರಿಕುಪ್ಪಂ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮುನಿರತ್ನ ಸಚಿವರಾಗುವುದು ನಿಶ್ಚಿತ : ಸಚಿವ ಬೈರತಿ ಬಸವರಾಜ್

ಇತ್ತೀಚೆಗೆ ಕೆಜಿಎಫ್ ನಗರದಲ್ಲಿ ಆತ್ಮಹತ್ಯೆಗೆ ಶರಣಾದ ಯೂಟ್ಯೂಬ್ ವರದಿಗಾರ ಶ್ರೀಧರ್ ಬ್ಯಾಂಕ್ ಮ್ಯಾನೇಜರ್ ವೀಣಾದೇವಿ ಕೊಲೆ ಪ್ರಕರಣದಲ್ಲಿ ವಿಚಾರಣೆ ಮಾಡಿದ್ದು ನಿಜ, ಕೊಲೆಯಾದ ಮಹಿಳೆ ಮೊಬೈಲ್ ಕರೆಗಳನ್ನ ಆಧರಿಸಿ ಊರಿಗಾಂ ಪೊಲೀಸರು ವಿಚಾರಣೆ ಮಾಡಿದ್ದಾರೆ. ಯಾವುದೆ ಕಿರುಕುಳ ನೀಡಿರಲಿಲ್ಲ ಎಲ್ಲವನ್ನ ವೀಡಿಯೋ ಮೂಲಕ ಚಿತ್ರೀಕರಣ ಮಾಡಲಾಗಿದೆ, ಡೆತ್ ನೋಟ್ ನಲ್ಲೂ ಅವರು ನಾನು ಯಾವುದೆ ತಪ್ಪು ಮಾಡಿಲ್ಲ ಎಂದು ನಮೂದಿಸಿದ್ದಾರೆ.

ಯಾವುದೇ ಪ್ರಕರಣ ದಾಖಲು ಮಾಡಿಲ್ಲ, ಬದಲಾಗಿ ಕರೆದು ವಿಚಾರಣೆ ಮಾಡಿ ಕಳುಹಿಸಿಕೊಡಲಾಗಿತ್ತು. ಅದಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಚಾರಣೆ ಹಂತದಲ್ಲಿದ್ದು ವಿಚಾರಣೆ ಪೂರ್ಣವಾದ ಬಳಿಕ ಎಲ್ಲ ಮಾಹಿತಿ ಸಿಗಲಿದೆ. ಈಗಾಗಲೆ ಬ್ಯಾಂಕ್ ಮ್ಯಾನೇಜರ್ ವೀಣಾದೇವಿ ಹಾಗೂ ಆತ್ಮಹತ್ಯೆ ಮಾಡಿಕೊಂಡ ಶ್ರೀಧರ್ ಇಬ್ಬರ ಮೊಬೈಲ್ ಫೋನ್‍ನ್ನ ಸಿಐಡಿಗೆ ಕಳುಹಿಸಲಾಗಿದೆ ಎಂದು ಕೆಜಿಎಫ್ ಎಸ್‍ಪಿ ಇಲಕ್ಕಿಯಾ ಕರುಣಾಗರನ್ ಹೇಳಿದ್ದಾರೆ.

The post ಹೆತ್ತತಾಯಿಯನ್ನು ಕೊಂದ ತಂದೆಯನ್ನ ಮಗ ಕೊಲೆಗೈದ! appeared first on Public TV.

Source: publictv.in

Source link