ಬೆಂಗಳೂರು: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ನಟ ಚೇತನ್ ಕಾನೂನು ಸಮರ ಸಾರಿದ್ದು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ 1 ರೂ. ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ತನ್ನ ವಿರುದ್ಧ ಸೋಷಿಯಲ್ ಮಿಡಿಯಾದಲ್ಲಿ ತೇಜೋವಧೆ ಮಾಡಿದ್ದಾರೆಂದು ಚೇತನ್ ಆರೋಪಿಸಿದ್ದಾರೆ. ಜೂ. 6 ರಂದು ಬ್ರಾಹ್ಮಣ್ಯದ ಕುರಿತಂತೆ ಚೇತನ್ ಟ್ವೀಟ್ ಮಾಡಿದ್ದರು. ಇದಕ್ಕೆ ಶಿವರಾಮ್ ಹೆಬ್ಬಾರ್ ಫೇಸ್ಬುಕ್​ನಲ್ಲಿ‌ ಹರಿಹಾಯ್ದಿದ್ದರು. ಗಂಜಿ ಕಾಸಿನ ಆಸೆಗೆ ಹೇಳಿಕೆ ಕೊಡೋ ಇಂತಹವರು ಸಮಾಜಕ್ಕೆ ಕಂಟಕ..ಇವರನ್ನ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸಿಟಿ ಸಿವಿಲ್ ನ್ಯಾಯಾಲಯ.. ಶಿವರಾಮ್ ಹೆಬ್ಬಾರ್​ಗೆ ನೊಟೀಸ್ ಜಾರಿ ಮಾಡಿದೆ. ಜುಲೈ 14 ರೊಳಗೆ ಆಕ್ಷೇಪಣೆ ಸಲ್ಲಿಸಲು ನೊಟೀಸ್​ನಲ್ಲಿ ತಿಳಿಸಿದೆ.

ಇನ್ನು ತಾವು ಸಲ್ಲಿಸಿರುವ ಅರ್ಜಿಯಲ್ಲಿ ಚೇತನ್ ಅವರು.. ನನಗೆ 1 ರೂಪಾಯಿ ಪರಿಹಾರ ಕೊಡಿಸಬೇಕು.. ಟ್ವಿಟರ್​ನಲ್ಲಿ ಬೇಷರತ್ ಕ್ಷಮೆ ಕೇಳಬೇಕು.. ಇನ್ಮುಂದೆ ಶಿವರಾಮ ಹೆಬ್ಬಾರ್ ಬೆಂಬಲಿಗರಿಗೆ ನನ್ನ ಬಗ್ಗೆ ಮತ್ತು ನನ್ನ ಕುಟುಂಬದ ಬಗ್ಗೆ ಮಾನಹಾನಿ ಪೋಸ್ಟ್ ಮಾಡಬಾರದು.. ಹಾಗೂ ಮಾನಹಾನಿ ಹೇಳಿಕೆ ನೀಡದಂತೆ ನಿರ್ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ. ಅರ್ಜಿ ವಿಚಾರಣೆಯನ್ನ ಜುಲೈ 14 ಕ್ಕೆ ಮುಂದೂಡಿಕೆ ಮಾಡಲಾಗಿದೆ.

The post ಹೆಬ್ಬಾರ್ ವಿರುದ್ಧ ನಟ ಚೇತನ್ ಮಾನನಷ್ಟ ಮೊಕದ್ದಮೆ.. ಸಚಿವರಿಗೆ ನೋಟಿಸ್ appeared first on News First Kannada.

Source: newsfirstlive.com

Source link