ಶಿರಸಿ: 96 ವರ್ಷದ ವೃದ್ಧಯಾದರೂ ಕೋವಿಡ್ ಸೋಂಕಿನಿಂದ ಗೆದ್ದು ಬಂದ ಗಟ್ಟಿಗಿತ್ತಿ ಅಜ್ಜಿಯನ್ನ ಕಂಡು ಇಡೀ ಜಿಲ್ಲೆಯೇ ಆಶ್ಚರ್ಯ ಪಡುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಎಕ್ಕಂಬಿ ಸಮೀಪದ ಸಾಲೇಕೊಪ್ಪದಲ್ಲಿ ಈ ಘಟನೆ ನಡೆದಿದೆ. ಸಾಲೇಕೊಪ್ಪದ ಕುಳವೆ ಭಟ್ರಮನೆಯ ಹಿರಿಯಾಕೆ ಜಾಹ್ನವಿ ಗಜಾನನ ಭಟ್ಟ ಅವರಿಗೆ ಕಳೆದ‌ ಮೇ31ರಂದು ಕೋವಿಡ್‌ ಸೋಂಕು ತಗುಲಿತ್ತು. ಸೋಂಕು ತಗುಲಿದ್ದು ತಿಳಿದಾಗ ಏನಾಗುತ್ತದೋ ಅಂತ ಮನೆಯವರು ಆತಂಕ ಪಟ್ಟಿದ್ದರು. ಆದರೆ‌ ಅಜ್ಜಿಯೇ ಹೆದರಿರಲಿಲ್ಲ. ಇದಕ್ಕಾಗಿ ಮನೆಯಲ್ಲೇ ಇರಿಸಿಕೊಂಡು ಚಿಕಿತ್ಸೆ‌ ನೀಡಲಾಯಿತು.

ಕಳೆದ ಹತ್ತು ದಿನಗಳ ಹಿಂದೆ ಅಜ್ಜಿಗೆ ಸೋಂಕು ಕಡಿಮೆ ಆಗಿ ಗುಣಮುಖರಾಗಿದ್ದಾರೆ. ವಾಕರ್ ಹಿಡಿದು ಮನೆಯಲ್ಲೇ ಓಡಾಟ ಕೂಡ ಮಾಡುತ್ತಾರೆ. 2014ರಲ್ಲಿ ಜಾರಿ ಬಿದ್ದ ಪರಿಣಾಮ ಕಾಲಿನ ಮೂಳೆ ಶಸ್ತ್ರಚಿಕಿತ್ಸೆ ನಡೆದು ರಾಡ್ ಹಾಕಿಸಿಕೊಂಡಿದ್ದರು. ಇವ್ರು ಐದು ತಲೆಮಾರು ಕಂಡ ಅಜ್ಜಿಯಾಗಿದ್ದಾರೆ. ಜಾಹ್ನವಿ ಅಜ್ಜಿ‌ಯ ಮನೋಸ್ಥೈರ್ಯ ಈ ಎರಡೂ ಘಟನೆಯಿಂದ ಗೆಲ್ಲಿಸಿದೆ. ಯಾವುದಕ್ಕೂ ಹೆದರಬಾರದು ಎನ್ನುವ ಗಟ್ಟಿತನವೇ ನಮಗೆ ಸ್ಫೂರ್ತಿ ಅಂತಾರೆ ಮನೆಯವ್ರು.

The post ಹೆಮ್ಮಾರಿ ಕೊರೊನಾ ಗೆದ್ದ 96ರ ಅಜ್ಜಿ: ಇವರ ಗಟ್ಟಿತನವೇ ಎಲ್ಲರಿಗೂ ಸ್ಫೂರ್ತಿ appeared first on News First Kannada.

Source: newsfirstlive.com

Source link