ಕಲಬುರಗಿ: ಹೆಮ್ಮಾರಿ ಕೊರೊನಾ ಸೋಂಕನ್ನ ಬಗ್ಗು ಬಡಿಯಲು ಗ್ರೌಂಡ್ ಲೆವೆಲ್​​​ನಲ್ಲಿ ಕೋವಿಡ್ ವಾರಿಯರ್ಸ್ ಆಗಿ ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಪಾಯವನ್ನು ಲೆಕ್ಕಿಸದೆ ಹಗಲಿರುಳು ಸೋಂಕಿತರಿಗೆ ಧೈರ್ಯತುಂಬಿ, ಮೆಡಿಸಿನ್ ನೀಡುತ್ತ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕಳೆದ ಮೂರು ತಿಂಗಳಿಂದ ಸಂಬಳ ಇಲ್ಲದೆ ಆಶಾ ಕಾರ್ಯಕರ್ತೆಯರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಸಂಬಳವಿಲ್ಲದ ಕಾರಣ ಜೀವನ ನಡೆಸಲು ಹೆಣಗಾಡುತ್ತಿರುವ ಆಶಾ ಕಾರ್ಯಕರ್ತರು ಸಾಲ ಮಾಡಿ ಕಷ್ಟದಲ್ಲಿಯೇ ಬದುಕಿನ ಬಂಡಿ ಸಾಗಿಸುವ ಸ್ಥಿತಿ ಎದುರಾಗಿದೆ. ಕೊರೊನಾದಂತಹ ಅಪಾಯಕಾರಿ ವಾತಾವರಣದಲ್ಲಿ ಸೇವೆ ಸಲ್ಲಿಸುತ್ತಿದ್ರು, ಆರೋಗ್ಯ ಇಲಾಖೆ ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್ ಕೂಡ ನೀಡದೆ ಅವರ ಪ್ರಾಣದ ಜೊತೆ ಚೆಲ್ಲಾಟ ಆಡ್ತಿದೆ.
ತಳಮಟ್ಟದಿಂದ ಹೆಮ್ಮಾರಿ ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರು ಹತ್ತಾರು ಸಮಸ್ಯೆಗಳನ್ನ ಎದುರಿಸುತ್ತಿದ್ದು, ನೋವು, ಕಷ್ಟ ತೊಡಿಕೊಳ್ಳುತ್ತ ನಮಗೆ ದಯವಿಟ್ಟು ಸಂಬಳ ಕೊಡಿ ಅಂತಾ ಸರ್ಕಾರಕ್ಕೆ ಕೈಮುಗಿ ಮನವಿ ಮಾಡಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಸಂಬಳ ನೀಡುವ ಕುರಿತು ಮೇ 24 ರಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದ ಸಿಎಂ, ಆಶಾ ಕಾರ್ಯಕರ್ತೆಯರಿಗೆ 17 ಜಿಲ್ಲೆಗಳಲ್ಲಿ ವೇತನ ನೀಡಲಾಗಿದ್ದು, ಇನ್ನೆರಡು ದಿನಗಳಲ್ಲಿ ಉಳಿದ ಜಿಲ್ಲೆಯವರಿಗೆ ವೇತನ ಕೈಸೇರಲಿದೆ ಎಂದು ಹೇಳಿದ್ದರು.

The post ಹೆಸರಿಗಷ್ಟೇ ಕೊರೊನಾ ವಾರಿಯರ್ಸ್​​- ಸಿಎಂ ಆಶ್ವಾಸನೆ ಬಳಿಕವೂ ಆಶಾ ಕಾರ್ಯಕರ್ತೆಯರ ಕೈ ಸೇರದ ಸಂಬಳ appeared first on News First Kannada.

Source: newsfirstlive.com

Source link