ಹೆಸರಿನಷ್ಟೇ ‘ವಿಶಾಲ’ ಈ ನಟನ ಹೃದಯ; ಅಪ್ಪು ಭಾವಚಿತ್ರದ ಮುಂದೆ ಕಣ್ಣೀರಿಟ್ಟು ಮಾಡಿದ್ರು ಶಪಥ


ನಿನ್ನೆ ಸ್ಯಾಂಡಲ್​​ವುಡ್​​ ಪವರ್​​ ಸ್ಟಾರ್​​​ ಪುನೀತ್​​ ರಾಜ್​ಕುಮಾರ್​​ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತೆಲಗು ನಟ ವಿಶಾಲ್​ ಇಂದು ಮತ್ತೇ ಪುನೀತ್​ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಜಮೀರ್​ ಖಾನ್​ ಪುತ್ರ ಝೈದ್​ ಖಾನ್​ ಜೊತೆಗೆ ಕಂಠೀರವ ಸ್ಟುಡಿಯೋಗೆ ಆಗಮಿಸಿದ ವಿಶಾಲ್​ ಅಪ್ಪು ಸಮಾಧಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ಡಾ. ರಾಜ್​ಕುಮಾರ್​ ಮತ್ತು ಪಾರ್ವತಮ್ಮ ರಾಜ್​ ಕುಮಾರ್​ ಸಮಾಧಿಗೂ ತೆರಳಿದ ವಿಶಾಲ್​ ಪುಷ್ಪಾರ್ಚನೆ ಸಲ್ಲಿಸಿ ನಮಸ್ಕರಿಸಿದ್ದಾರೆ.
ಇದನ್ನೂ ಓದಿ:‘ಅಪ್ಪು ಹೆಸ್ರು 1,000 ವರ್ಷಗಳು ನೆನಪಿಡಬೇಕು, ಅಂತಹ ಕೆಲಸಗಳು ಮಾಡುತ್ತೇನೆ’- ನಟ ವಿಶಾಲ್​​
ಬಳಿಕ ಪುನೀತ್​ ಮತ್ತು ಶಿವರಾಜ್​ಕುಮಾರ್​ ಮನೆಗೆ ಭೇಟಿ ನೀಡಿದ ಅವರು ಅಪ್ಪು ಮನೆಯಲ್ಲು ಪುನೀತ್​ ಭಾವಚಿತ್ರಕ್ಕೆ ನಮಿಸುವ ವೇಳೆ ಕಣ್ಣೀರಿಟ್ಟಿದ್ದಾರೆ.
ಶಿವರಾಜ್​ಕುಮಾರ್​ ಭೇಟಿ ನಂತರ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪುನೀತ್ ಅಗಲಿಕೆ ಒಳ್ಳೆಯ ಮಿತ್ರ ನನ್ನ ಜೊತೆ ಇಲ್ಲ ಅನ್ನುವಂತಾಗಿದೆ ಅವರು ಸಾಮಾನ್ಯ ವ್ಯಕ್ತಿಯಂತೆ ಇರ್ತಿದ್ರು ಸೂಪರ್ ಸ್ಟಾರ್ ಆಗಿದ್ರೂ ಸ್ಟಾರ್​ಡಂ ತೋರಿಸ್ತಿರಲಿಲ್ಲ. ಸದ್ಯ ಪುನೀತ್ ಇಲ್ಲ ಅನ್ನೋ ವಿಷಯ ಜೀರ್ಣಿಸಿಕೊಳ್ಳಲು ಆಗ್ತಿಲ್ಲ. ಅವರ ಅಗಲಿಕೆ ಸಮಾಜಕ್ಕೂ ಫಿಲ್ಮ್ ಇಂಡಸ್ಟ್ರಿಗೂ ಬಹುದೊಡ್ಡ ಲಾಸ್ ಎಂದಿದ್ದಾರೆ.
ಅಪ್ಪು ಒಳ್ಳೇ ನಟರಷ್ಟೇ ಅಲ್ಲ ಒಳ್ಳೆಯ ವ್ಯಕ್ತಿಯೂ ಹೌದು. ಅಶ್ವಿನಿಯವರಿಗೂ ಮತ್ತು ಮಕ್ಕಳಿಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕೊಡಬೇಕು. ಇನ್ನು ಈಗಷ್ಟೇ ಅಪ್ಪು ಮನೆಗೆ ಭೇಟಿ ಕೊಟ್ಟಿದ್ದೆ 1800 ವಿದ್ಯಾರ್ಥಿಗಳನ್ನು ನೋಡಿಕೊಳ್ಳೋಕೆ ಅನುಮತಿ ನೀಡುವಂತೆ ಅಶ್ವಿನಿ ಮೇಡಮ್ ಹತ್ರ ಪರ್ಮಿಷನ್ ಕೇಳಿದ್ದೇನೆ ಇನ್ನು ಕೆಲವೇ ದಿನದಲ್ಲಿ ಅವರು ಅಭಿಪ್ರಾಯ ತಿಳಿಸುತ್ತಾರೆ ಎಂದಿದ್ದಾರೆ. ಅಲ್ಲದೇ ಒಂದು ವೇಳೆ ಅನುಮತಿ ಸಿಕ್ಕರೆ ಆ 1800 ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳುವ ಶಪಥವನ್ನೂ ವಿಶಾಲ್ ಮಾಡಿದ್ದಾರೆ.

The post ಹೆಸರಿನಷ್ಟೇ ‘ವಿಶಾಲ’ ಈ ನಟನ ಹೃದಯ; ಅಪ್ಪು ಭಾವಚಿತ್ರದ ಮುಂದೆ ಕಣ್ಣೀರಿಟ್ಟು ಮಾಡಿದ್ರು ಶಪಥ appeared first on News First Kannada.

News First Live Kannada


Leave a Reply

Your email address will not be published. Required fields are marked *