
ಹೆಸ್ಕಾಂನ ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ
ಈ ಮುಂಚೆ ಶಾಸಕರು, ಸಚಿವರ ವಿರುದ್ಧ ಆರೋಪ ಮಾಡಿದ್ದು, ಈಗ ಅಧಿಕಾರಿಗಳ ವಿರುದ್ಧ ಗುತ್ತಿಗೆದಾರರು ಆಕ್ರೋಶಗೊಂಡಿದ್ದಾರೆ. ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ಕಚೇರಿ ಎದುರು ಗುತ್ತಿಗೆದಾರರು ಪ್ರತಿಭಟನೆ ಮಾಡಲಾಗಿದೆ.
ಬೆಳಗಾವಿ: ಕರ್ನಾಟಕ ರಾಜ್ಯ ಅನುಮತಿ ವಿದ್ಯುತ್ ಗುತ್ತಿಗೆದಾರ ಸಂಘ ಹೆಸ್ಕಾಂನ ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದೆ. ಈ ಮುಂಚೆ ಶಾಸಕರು, ಸಚಿವರ ವಿರುದ್ಧ ಆರೋಪ ಮಾಡಿದ್ದು, ಈಗ ಅಧಿಕಾರಿಗಳ ವಿರುದ್ಧ ಗುತ್ತಿಗೆದಾರರು ಆಕ್ರೋಶಗೊಂಡಿದ್ದಾರೆ. ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ಕಚೇರಿ ಎದುರು ಗುತ್ತಿಗೆದಾರರು ಪ್ರತಿಭಟನೆ ಮಾಡಲಾಗಿದೆ. ಬೆಳಗಾವಿ ಸಿಎಸ್ಡಿ – 1 ಎಇಇ ಅರವಿಂದ ಗದಗಕರ್, ಸೆಕ್ಷನ್ ಆಫೀಸರ್ ಸಿದ್ದಲಿಂಗಪ್ಪ ಅಂಗಡಿ ವಿರುದ್ಧ ಆರೋಪ ಮಾಡಿದ್ದು, ಗ್ರಾಹಕರ ಬಳಿ ನೇರವಾಗಿ ಮೀಟರ್ ಕನೆಕ್ಷನ್ಗೆ 40 ರಿಂದ 50 ಸಾವಿರ ಡಿಮ್ಯಾಂಡ್ ಆರೋಪ ಕೇಳಿಬಂದಿದೆ. ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಿಗೆ ಅವಕಾಶ ನೀಡದೇ ಗ್ರಾಹಕರ ನೇರ ಸಂಪರ್ಕ ಆರೋಪಿಸಲಾಗಿದೆ. ಏನು ಕೆಲಸ ಮಾಡದೇ ಒಂದು ಸಹಿ ಮಾಡಲು ಐವತ್ತರಿಂದ ಒಂದು ಲಕ್ಷ ರೂ. ಪಡೆಯುತ್ತಾರೆ.