ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಮೀನು ಹಿಡಿಯಲು ಹೋದ ಯುವಕ ಸಾವು | Fisher died who went fishing due to the negligence of HESCOM officers


ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಮೀನು ಹಿಡಿಯಲು ಹೋದ ಯುವಕ ವಿದ್ಯುತ್​ ಶಾಕ್​​ ಹೊಡೆದು ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ತಾಲೂಕಿನ‌ ಅಂಕಲಿ ಗ್ರಾಮದಲ್ಲಿ ನಡೆದಿದೆ.

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಮೀನು ಹಿಡಿಯಲು ಹೋದ ಯುವಕ ಸಾವು

ಪ್ರಾತಿನಿಧಿಕ ಚಿತ್ರ

ಬೆಳಗಾವಿ: ಹೆಸ್ಕಾಂ (HESCOM) ಅಧಿಕಾರಿಗಳ ನಿರ್ಲಕ್ಷದಿಂದ ಮೀನು ಹಿಡಿಯಲು ಹೋದ ಯುವಕ ವಿದ್ಯುತ್​ ಶಾಕ್​​ ಹೊಡೆದು ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ (Chikkodi) ತಾಲೂಕಿನ‌ ಅಂಕಲಿ ಗ್ರಾಮದಲ್ಲಿ ನಡೆದಿದೆ. ರಾವಸಾಬ್ ಅರ್ಜುನ್ ಕಿಳ್ಳಿಕೇತ(40) ಮೃತ ದುರ್ದೈವಿ. ಅಂಕಲಿ ಗ್ರಾಮದ ಕೃಷ್ಣಾ ನದಿ ಹೆಚ್ಚುವರಿ ನೀರಿನಲ್ಲಿ ರಾವಸಾಬ್ ಅರ್ಜುನ್ ಮೀನು ಹಿಡಯಲು ಹೋಗಿದ್ದನು.

ಆದರೆ ನದಿ ನೀರಿಗೆ ವಿದ್ಯುತ್ ತಂತಿ ತಲುಪಿದ್ದರಿಂದ ಯುವಕನಿಗೆ ಶಾಕ್​​ ಹೊಡೆದು ಸಾವನ್ನಪ್ಪಿದ್ದಾನೆ. ಇದಕ್ಕೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಲಾಗಿದೆ. ಅಂಕಲಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ ಚಾಲಕ ಸ್ಥಳದಲ್ಲೇ ಸಾವು

ಹಾವೇರಿ: ವಿದ್ಯುತ್ ತಂತಿ ಸ್ಪರ್ಶಿಸಿ ಗೂಡ್ಸ್ ವಾಹನದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ ತಾಲೂಕಿನ ಕೂರಗುಂದ ಗ್ರಾಮದಲ್ಲಿ ನಡೆದಿದೆ. ಶೇಬುಲ್ಲಾ 23 ವರ್ಷ ಮೃತ ಚಾಲಕ. ಮೃತ ಶೇಬುಲ್ಲಾ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ.

ರೈತರ ಜಮೀನಿನಲ್ಲಿ ಹೂಕೋಸು ತುಂಬಿಕೊಂಡು ವಾಹನದ ಮೇಲೆ ಹತ್ತಿದ್ದ ವೇಳೆ ವಿದ್ಯುತ್ ಲೈನ್ ಸ್ಪರ್ಶಿಸಿ ದುರ್ಘಟನೆ ಸಂಭವಿಸಿದೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೊಸಳೆ ಎಳೆದೊಯ್ದಿದ್ದ ಮೀನುಗಾರನ ಶವ ಪತ್ತೆ

ಉತ್ತರ ಕನ್ನಡ: ಕಾಳಿ ನದಿಯಲ್ಲಿ ಮೀನು ಹಿಡಿಯುವಾಗ ಮೊಸಳೆ ಎಳೆದೊಯ್ದಿದ್ದ ಮೀನುಗಾರ ಸುರೇಶ್ ವಸಂತ ತೇಲಿ (44) ಮೃತದೇಹ ದಾಂಡೇಲಿ ನಗರದ ಅಲೈಡ್ ಪ್ರದೇಶದ ಕಾಳಿ ನದಿ ತಟದಲ್ಲಿ ಪತ್ತೆಯಾಗಿದೆ. ಸುರೇಶ್ ವಸಂತ ತೇಲಿ ನಿನ್ನೆ (ಆಗಸ್ಟ್ 13) ರಂದು ಕಾಳಿ ನದಿಯಲ್ಲಿ ಮೀನು ಹಿಡಿಯುವಾಗ ಮೊಸಳೆ ಎಳೆದೊಯ್ದಿತ್ತು.

ಈ ಸಂಬಂಧ ನಿನ್ನೆಯಿಂದ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದರು. ಕೊನೆಗೂ ಸಿಬ್ಬಂದಿ ಸುರೇಶ್ ತೇಲಿ ಮೃತದೇಹ ಪತ್ತೆಹಚ್ಚಿದ್ದಾರೆ. ದಾಂಡೇಲಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಸ್ತೆ ಅಪಘಾತ ಇಬ್ಬರು ಸಾವು

ಕೊಪ್ಪಳ: ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಗಂಗಾವತಿ ತಾಲೂಕಿನ ಸಂಗಾಪೂರ ಬಳಿ ನಡೆದಿದೆ. ನಿನ್ನೆ ತಡರಾತ್ರಿ ನಡೆದ ಅಪಘಾತದಲ್ಲಿ ವೃದ್ದನನ್ನು ಬಚಾವ್ ಮಾಡಲು‌ ಹೋಗಿ ವಾಹನ ಸವಾರ ಮಂಜುನಾಥ್ (31)ಸಾವನ್ನಪ್ಪಿದ್ದಾನೆ. ಮಂಜುನಾಥ್ ಗಂಗಾವತಿ ತಾಲೂಕಿನ‌‌ ಮಲ್ಲಾಪೂರ‌ ನಿವಾಸಿಯಾಗಿದ್ದಾನೆ. ವೃದ್ದನನ್ನು ಬಚಾವ್ ಮಾಡೋ ವೇಳೆ ವೃದ್ಧನಿಗೂ ಗಾಯವಾಗಿದೆ.

ವೃದ್ದ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದನು. ಸದ್ಯ ಚಿಕಿತ್ಸೆ ಫಲಿಸದೇ ವೃದ್ದನೂ ಸಾವನ್ನಪ್ಪಿದ್ದಾನೆ. ಮೃತ ವೃದ್ದನ ಗುರುತು ಪತ್ತೆಯಾಗಿಲ್ಲ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *