ಚಾಲೆಂಜಿಂಗ್ ಸ್ಟಾರ್ ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ಲೋನ್ ಶ್ಯೂರಿಟಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಲೇ ಇದೆ. ಅರುಣಾ ಕುಮಾರಿ ವಸರ್ಸ್​ ದರ್ಶನ್​ ಸ್ನೇಹ ಬಳಗದಿಂದ ಶುರುವಾಗಿದ್ದ ಪ್ರಕರಣ ಇಂದ್ರಜಿತ್ ಲಂಕೇಶ್ ವರೆಗೆ ಬಂದು ನಿಂತಿದೆ.

ದರ್ಶನ್​ ಹಾಗೂ ಅವರ ಸ್ನೇಹ ಬಳಗದ ವಿರುದ್ಧ ಇಂದ್ರಜಿತ್ ಸಾಲು ಸಾಲು ಆರೋಪ ಮಾಡ್ತಿದ್ದಾರೆ. ಆದರೆ ಇದೇ ದರ್ಶನ್​ ಮತ್ತು ಇಂದ್ರಜಿತ್ ಲಂಕೇಶ್​ 18 ವರ್ಷದ ಹಿಂದೆ ಸಿನಿಮಾ ಮಾಡಿದ್ದ ಕಥೆ ನಿಮಗೆ ನೆನಪಿದೆಯಾ..? ಅವತ್ತಿನ ಜನರೇಷನ್​ ಮಾತ್ರ ಈ ಘಟನೆ ನೆನಪಿರಬಹುದು. ಅಂದು ಲಂಕೇಶ್​ ಪತ್ರಿಕೆ ಸಿನಿಮಾ ಹುಟ್ಟಿದ್ದು ಹೇಗೆ..? ಬೆಳೆದು ಬೆಳ್ಳಿ ಪರದೆಯನ್ನು ಬೆಳಗಿದ್ದು ಹೇಗೆ ಅನ್ನೋದನ್ನ ಹೇಳ್ತೀನಿ ಓದಿ..

ಲಂಕೇಶ್​ ಪತ್ರಿಕೆ ಕನ್ನಡದ ಹೆಸರಂತ ಕನ್ನಡ ಪತ್ರಿಕೆಗಳಲ್ಲಿ ಒಂದು. ಒಂದು ಪತ್ರಿಕೆಯ ಹೆಸರಿನಲ್ಲಿ ಕನ್ನಡದಲ್ಲಿ 2013ರಲ್ಲಿ ಲಂಕೇಶ್ ಪತ್ರಿಕೆ ಸಿನಿಮಾ ಮೂಡಿ ಬಂದಿರುತ್ತದೆ. ಆಗ ತಾನೇ ಇಂಡಸ್ಟ್ರಿಗೆ ಕಾಲಿಟ್ಟು ಮೆಜೆಸ್ಟಿಕ್​​ ಅನ್ನೋ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ ಕಟೌಟ್​ ಆಗಿದ್ರು ದರ್ಶನ್​​​. ಆಗ ಇನ್ನೂ ಕೂಡ ಚಾಲೆಂಜಿಂಗ್ ಸ್ಟಾರ್ ಅನ್ನೋ ದರ್ಶನ್​ ಮೂಡಿಗೆ ಬಂದಿರಲಿಲ್ಲ. ಆದರೆ ವರ್ಷಕ್ಕೆ 7-8 ಸಿನಿಮಾಗಳಲ್ಲಿ ದರ್ಶನ್​ ದರುಶನ ಆಗ್ತಿದ್ದ ಕಾಲ ಅದು. 2003ರಲ್ಲಿ ಬರೋಬ್ಬರಿ 9 ಸಿನಿಮಾಗಳು ಮೂಲಕ ಸಿರಿಗನ್ನಡ ಪ್ರೇಕ್ಷಕರನ್ನು ರಂಜಿಸಿದ್ದರು ದಾಸ. ಅದೇ ವರ್ಷ 2003 ಮೇ 16 ರಂದು ಪ್ರೇಕ್ಷಕರ ಮುಂದೇ ಲಂಕೇಶ್ ಪತ್ರಿಕೆ ಮೂಲದ ದರ್ಶನ್ ಎಂಟ್ರಿ ಕೊಟ್ಟಿದ್ದರು.

ಇಂದ್ರಜಿತ್ ಲಂಕೇಶ್​ ತನ್ನ ತಂದೆ ಕಟ್ಟಿ ಬೆಳೆಸಿದ ಲಂಕೇಶ್​ ಪತ್ರಿಕೆ ಅನ್ನೋ ಹೆಸರಿನಲ್ಲೇ ಸಿನಿಮಾ ಮಾಡಲು ಹೊರಟ್ಟಿದ್ದರು. ತುಂಟಾಟ ಅನ್ನೋ ಸಿನಿಮಾವನ್ನು ಕನ್ನಡಿಗರಿಗೆ ಕೊಟ್ಟು ಸ್ಯಾಂಡಲ್​​ವುಡ್​ ಲೋಕಕ್ಕೆ ಪರಿಚಯವಾಗಿದ್ರು ಇಂದ್ರಜಿತ್. ಲಂಕೇಶ್​ ಸಿನಿಮಾ ಮಾಡಲು ಹೊರಟಾಗ ಇಂದ್ರಜಿತ್ ಕಣ್ಣಿಗೆ ಕಂಡಿದ್ದು 6 ಅಡಿ ಮೂರು ಹಿಂಚಿನ ಪ್ರತಿಭಾವಂತ ನಟ ದರ್ಶನ್. ಹೀರೋಯಿನ್  ಯಾರು ಎಂದು ನೋಡಿದಾಗ ಕಂಡಿದ್ದೆ ವಸುಂದರಾ ದಾಸ್​. ಆಗಿನ ಕಾಲಕ್ಕೆ ಆಲ್ಬಂ ಸಾಂಗ್​​ಗಳಲ್ಲಿ ಮೀನುಗುತ್ತಿದ್ದ ಸ್ಟಾರ್ ಗಾಯಕಿ ಫಸ್ಟ್​ ಟೈಂ ಲಂಕೇಶ್​ ಪತ್ರಿಕೆ ಸಿನಿಮಾದಲ್ಲಿ ಹೀರೋಯಿನ್​ ಆಗಿ ಮಿಂಚಿದ್ದರು.

ಲಂಕೇಶ್​ ಪತ್ರಿಕೆ ಅನ್ನೋ ಸಿನಿಮಾ ಅಷ್ಟಾಗಿ ಗೆಲುವಿನ ನಗೆಯನ್ನು ಬೀರಲಿಲ್ಲ. ಕಾರಣ ಸಿನಿಮಾದ ಅಂಕು-ಡೊಂಕು ಮತ್ತೊಂದು ದರ್ಶನ್​ ಅವರ ಹೆಚ್ಚು ಹೆಚ್ಚು ಸಿನಿಮಾಗಳ ಎಫೆಕ್ಟ್​​. ಆದರೆ ಸಿನಿಮಾದ ಹಾಡುಗಳು ಇಂದಿಗೂ ಕನ್ನಡದ ಪ್ರೇಕ್ಷಕರ ಕಿವಿಗಳಲ್ಲಿ ಗ್ಯುಂಯ್ ಗುಡುಗುತ್ತಿತ್ತು. ಆದರೆ 18 ವರ್ಷದ ಹಿಂದೆ ಲಂಕೇಶ್​ ಪತ್ರಿಕೆ ಸಿನಿಮಾ ಬಗ್ಗೆ ಒಂದು ನೆಗೆಟಿವ್​ ಸುದ್ದಿ ಜೋರಾಗಿ ಹರಿದಾಡಿತ್ತು. ಹೀರೋ ಹಾಗೂ ಹೀರೋಯಿನ್​ ಪೇರ್ ಬಗ್ಗೆ ನೆಗೆಟಿವ್​ ಕಾಮೆಂರ್ಟ್​ ಕೇಳಿ ಬಂದಿತ್ತು. ಹೀರೋಗಿಂತ ಹೀರೋಯಿನ್​ ವಯಸ್ಸಿನಲ್ಲಿ ದೊಡ್ಡವರ ತರ ಕಾಣ್ತಾರೆ.. ಲಂಕೇಶ್​ ಪತ್ರಿಕೆಯ ಹೀರೋ, ಹೀರೋಯಿನ್​ ಪೇರ್ ಅಷ್ಟಾಗಿ ಚೆನ್ನಾಗಿ ಕಾಣಲಿಲ್ಲ ಅನ್ನೋ ಸುದ್ದಿಗಳು ಗಾಂಧಿ ನಗರದ ತುಂಬಾ ಹರಿದಾಡಿತ್ತು.

ಅಂದು ಲಂಕೇಶ್ ಪತ್ರಿಕೆ ಸಿನಿಮಾ ಸೋತಿದ್ರು, ಇಂದ್ರಜಿತ್​ ಹಾಗೂ ದರ್ಶನ್ ಸಂಬಂಧ ಚೆನ್ನಾಗಿತ್ತು. ಆದರೆ ಈಗ ಇಬ್ಬರ ನಡುವೆ ಗಟ್ಟಿ ಕಾಂಕ್ರೀಟ್​ ಗೋಡೆ ನಿರ್ಮಾಣವಾಗಿದೆ.

The post ಹೇಗಿತ್ತು ಗೊತ್ತಾ ಇಂದ್ರಜಿತ್, ದರ್ಶನ್ ಫ್ರೆಂಡ್​ಶಿಫ್​​..? appeared first on News First Kannada.

Source: newsfirstlive.com

Source link