ಹೇಗಿದೆ ‘ಆರ್​ಆರ್​ಆರ್​’ ಚಿತ್ರದ ‘ಜನನಿ’ ಹಾಡು? ಪ್ರೇಕ್ಷಕರ ಕಣ್ಣುಗಳನ್ನು ತೇವ ಆಗಿಸುತ್ತೆ ಈ ಸಾಂಗ್​ | RRR movie team released Janani Video Song featuring Jr NTR Ram Charan Alia Bhatt Ajay Devgn


ಹೇಗಿದೆ ‘ಆರ್​ಆರ್​ಆರ್​’ ಚಿತ್ರದ ‘ಜನನಿ’ ಹಾಡು? ಪ್ರೇಕ್ಷಕರ ಕಣ್ಣುಗಳನ್ನು ತೇವ ಆಗಿಸುತ್ತೆ ಈ ಸಾಂಗ್​

ರಾಮ್​ ಚರಣ್​, ಆಲಿಯಾ ಭಟ್​, ಜ್ಯೂ. ಎನ್​ಟಿಆರ್​

ನಿರ್ದೇಶಕ ರಾಜಮೌಳಿ (Rajamouli) ಅವರ ಸಿನಿಮಾಗಳಲ್ಲಿ ಹಾಡುಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಈಗ ಬಿಡುಗಡೆಗೆ ಸಜ್ಜಾಗಿರುವ ‘ಆರ್​ಆರ್​ಆರ್​’ (RRR Movie) ಸಿನಿಮಾದಲ್ಲೂ ಅದು ಮುಂದುವರಿದಿದೆ. ಈ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ‘ದೋಸ್ತಿ’ ಮತ್ತು ‘ಹಳ್ಳಿ ನಾಟು’ ಹಾಡುಗಳನ್ನು ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈಗ ‘ಜನನಿ’ ಗೀತೆಯನ್ನು (Janani Song) ರಿಲೀಸ್​ ಮಾಡಿದೆ ಚಿತ್ರತಂಡ. ಈ ಹಾಡು ಹೆಚ್ಚು ಭಾವುಕವಾಗಿ ಮೂಡಿಬಂದಿದ್ದು, ಕಥೆಯ ಎಳೆಯನ್ನು ಬಿಟ್ಟುಕೊಡುವಂತಿದೆ. ರಾಮ್​ ಚರಣ್​ (Ram Charan), ಆಲಿಯಾ ಭಟ್​, ಅಜಯ್​ ದೇವಗನ್​, ಜ್ಯೂ. ಎನ್​ಟಿಆರ್​ (Jr NTR) ಮುಂತಾದ ಕಲಾವಿದರು ಎಮೋಷನಲ್​ ದೃಶ್ಯಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ಮಲಯಾಳಂ, ಹಿಂದಿ ಮತ್ತು ತಮಿಳು ಭಾಷೆಗಳಲ್ಲೂ ಈ ಸಾಂಗ್​ ಬಿಡುಗಡೆ ಆಗಿದೆ.

ಸಿನಿಮಾದ ಪ್ರಚಾರ ಕಾರ್ಯಗಳು ಆರಂಭ ಆಗಿವೆ. ‘ಜನನಿ’ ಹಾಡು ಬಿಡುಗಡೆ ಮಾಡಲು ನಿರ್ದೇಶಕ ರಾಜಮೌಳಿ ಅವರು ಇಂದು (ನ.26) ಬೆಂಗಳೂರಿಗೆ ಆಗಮಿಸಿದ್ದರು. ಹಾಡಿನ ಬಗ್ಗೆ ಅವರು ಒಂದಷ್ಟು ಮಾಹಿತಿ ಹಂಚಿಕೊಂಡರು. ಶೀಘ್ರದಲ್ಲೇ ಸಿನಿಮಾದ ಟ್ರೇಲರ್​ ರಿಲೀಸ್​ಗಾಗಿ ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಮಾಡುವುದಾಗಿ ಅವರು ಹೇಳಿದ್ದಾರೆ. ಆ ಕಾರ್ಯಕ್ರಮಕ್ಕೆ ಜ್ಯೂ. ಎನ್​ಟಿಆರ್​, ರಾಮ್​ ಚರಣ್​ ಸೇರಿದಂತೆ ಎಲ್ಲ ಕಲಾವಿದರು ಆಗಮಿಸುತ್ತಾರೆ ಎಂದು ರಾಜಮೌಳಿ ತಿಳಿಸಿದ್ದಾರೆ.

‘ನಾನು ಇಂದು ‘ಜನನಿ..’ ಹಾಡಿನ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಇದನ್ನು ಸಾಂಗ್​ ಲಾಂಚ್​ ಎಂದು ಹೇಳಲ್ಲ ಅಥವಾ ಇದು ಪ್ರಮೋಷನ್​ ಕಾರ್ಯಕ್ರಮ ಅಲ್ಲ. ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ಇದೆ ಎಂಬುದನ್ನು ನೋಡಿದ್ದೀರಿ. ಇದರ ಜತೆಗೆ ಭಾವನೆ ಕೂಡ​ ಇದೆ. ಎಮೋಷನ್​ ಇಲ್ಲದೆ ನಾನೇನನ್ನೂ ಮಾಡಲ್ಲ. ಹಳ್ಳಿ ನಾಟುದಲ್ಲೂ ಕೂಡ ಒಂದು ಭಾವನೆ ಇದೆ. ‘ಆರ್​ಆರ್​ಆರ್’​ನ ಜೀವಾಳ ಜನನಿ’ ಎಂದು ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡರು.

‘ಆರ್​ಆರ್​ಆರ್’ ಚಿತ್ರದಲ್ಲಿ ನಾಯಕಿಯಾಗಿ ಆಲಿಯಾ ಭಟ್​ ಅಭಿನಯಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಬಾಲಿವುಡ್​ ನಟ ಅಜಯ್​ ದೇವಗನ್​ ಅವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್, ಪೋಸ್ಟರ್​ ಮತ್ತು ಹಾಡುಗಳು ಧೂಳೆಬ್ಬಿಸಿವೆ.

ಇದನ್ನೂ ಓದಿ:

RRR Press Meet: ಬೆಂಗಳೂರಿನಲ್ಲಿ ‘ಆರ್​ಆರ್​ಆರ್​’ ತಂಡ; ರಾಜಮೌಳಿ ಸಿನಿಮಾದ ಸುದ್ದಿಗೋಷ್ಠಿ ನೋಡಲು ಇಲ್ಲಿ ಕ್ಲಿಕ್​ ಮಾಡಿ

S.S.Rajamouli: ಕನ್ನಡಿಗರಲ್ಲಿ ಎರಡು ವಿಚಾರಕ್ಕೆ ಕ್ಷಮೆ ಕೇಳಿ ಮಾತು ಆರಂಭಿಸಿದ ಎಸ್.​ಎಸ್.​ ರಾಜಮೌಳಿ

TV9 Kannada


Leave a Reply

Your email address will not be published. Required fields are marked *