ಒಂದು ಮೊಟ್ಟೆಯ ಕಥೆ ಸಿನಿಮಾವನ್ನ ಮಾಡಿ ಕನ್ನಡಿಗರ ಮನಸು ಗೆದ್ದವರು ರಾಜ್ ಬಿ ಶೆಟ್ಟಿ. ಹೈಟ್ ವೈಟು ವರ್ಸಾನಾಲಿಟಿ ಖಡಕ್ ವಾಯ್ಸ್ ಇದ್ರೇ ಮಾತ್ರ ಹೀರೋ ಆಗೋದು ಅನ್ನೋ ಫಾರ್ಮುಲವನ್ನ ಕಾಶಿನಾಥ್ರಂಥೆ ಬ್ರೇಕ್ ಮಾಡಿ ಹೀರೋ ಆಗಿರುವ ರಾಜ್ ಬಿ ಶೆಟ್ಟಿ ಈಗ ‘‘ಗರುಡ ಗಮನ ವೃಷಭ ವಾಹನ’’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದು ನಿಂತಿದ್ದಾರೆ. ಹಾಗಾದ್ರೆ ಹೇಗಿದೆ ‘‘ಗರುಡ ಗಮನ ವೃಷಭ ವಾಹನ’’ ಸಿನಿಮಾ..?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆ ನೋವಿನ ದಿನಗಳನ್ನ ಕನ್ನಡ ಸಿನಿಮಾರಂಗ ಕಳೆಯುತ್ತಿದೆ. ಈ ಟೈಮ್ನಲ್ಲಿ ಹೊಸ ಹೊಸ ಕನ್ನಡ ಸಿನಿಮಾಗಳನ್ನ ಬೆಟ್ಟದ ಹೂವು ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲಾಗುತ್ತಿದೆ. ಅಪ್ಪು ಅವರಿಗೆ ಅರ್ಪಿಸಿರುವ ಸಿನಿಮಾಗಳ ಸಾಲಿನಲ್ಲಿ ಈಗ ಗರುಡ ಗಮನ ವೃಷಭ ವಾಹನ ಸಿನಿಮಾ ಕೂಡ ಒಂದು.
ಈ ಶುಭ ಶುಕ್ರವಾರಕ್ಕೆ ತೆರೆಕಂಡಿರುವ ಮೂರು ನಿರೀಕ್ಷಿತ ಸಿನಿಮಾಗಳಲ್ಲೊಂದು ‘‘ಗರುಡ ಗಮನ ವೃಷಭ ವಾಹನ’’. ಟ್ರೈಲರ್ ಮತ್ತು ಮೇಕಿಂಗ್ನಿಂದ ಗಮನ ಸೇಳೆದಿದ್ದ ಈ ಸಿನಿಮಾ ಪ್ರೇಕ್ಷಕರ ಮುಂದೆ ಬಂದು ನಿಂತಿದೆ. ರಾಜ್ಯಾದ್ಯಂತ ತೆರೆಕಂಡಿರುವ ‘‘ಗರುಡ ಗಮನ ವೃಷಭ ವಾಹನ’’ ಸಿನಿಮಾವನ್ನ ಈ ಸಿನಿಮಾ ತಂಡದವರು ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ನೋಡಿ ಸಂತೋಷ ಪಟ್ಟಿದೆ. ಜೊತೆಗೆ ಬಾರದ ಲೋಕಕ್ಕೆ ಪ್ರಯಾಣಿಸಿರುವ ಪುನೀತ್ ರಾಜ್ ಕುಮಾರ್ ಅವರನ್ನ ನೆನೆದಿದೆ.
ಒಂದು ಮೊಟ್ಟೆಯ ಖ್ಯಾತಿಯ ರಾಜ್ ಬಿ ಶೆಟ್ಟಿ ‘‘ಗರುಡ ಗಮನ ವೃಷಭ ವಾಹನ’’ವನ್ನ ಪುನೀತ್ ರಾಜ್ ಕುಮಾರ್ ಅವರಿಗ ಅರ್ಪಿಸಿದ್ದಾರೆ. ಈ ‘‘ಗರುಡ ಗಮನ ವೃಷಭ ವಾಹನ’’ ಸಿನಿಮಾ ನಾಯಕ ಪಾತ್ರದಾರಿಯಲ್ಲೊಬ್ಬರಾದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅಪ್ಪು ಅವರನ್ನ ನೆನೆದಿದ್ದಾರೆ.
ಅರೇ ‘‘ಗರುಡ ಗಮನ ವೃಷಭ ವಾಹನ’’ ಸಿನಿಮಾ ಹೇಗಿದೆ ಅನ್ನೋದನ್ನ ಹೇಳ್ತಿವಿ ಅಂದು ಅಪ್ಪು ಸರ್ ಬಗ್ಗೆ ಮಾತನಾಡ್ತಿದ್ದೇವೆ ಅನ್ಕೋ ಬೇಡಿ.. ಖಂಡಿತವಾಗಿಯೂ ‘‘ಗರುಡ ಗಮನ ವೃಷಭ ವಾಹನ’’ ಸಿನಿಮಾ ಹೇಗಿದೆ ಅನ್ನೋದನ್ನ ಹೇಳ್ತಿವಿ ಕೇಳಿ ಚಿತ್ರಪ್ರೇಮಿಗಳೇ..
ಹೆಸರೆಷ್ಟು ಭಿನ್ನವೋ, ಸಿನಿಮಾ ಕೂಡ ಅಷ್ಟೇ ವಿಭಿನ್ನವಾಗಿದೆ. ಪ್ರತಿನಿತ್ಯ ನಮ್ಮೆಲ್ಲರ ನಡುವೆ ಎಷ್ಟೋ ಸಂಗತಿಗಳು ಕಾಣದಂತೆ ಆವಿಯಾಗಿ ಹೋಗುತ್ತೆ. ಅಂತಹ ಆವಿಯನ್ನು ಶೇಖರಿಸಿಟ್ಟ ಒಂದು ಭಾಗವೇ ಗರುಡ ಗಮನ ವೃಷಭ ವಾಹನ.
ಮಗನ ವಯಸ್ಸಿನ ಬಾಲಕನೊಬ್ಬ ಭಿಕ್ಷೆ ಬೇಡುವುದನ್ನ ನೋಡಲಾರದ ತಾಯಿಯ ಮಮತೆ. ಮುಗ್ಧ ಮನಸ್ಸಿನ ಬಾಲಕರ ನಿಷ್ಕಲ್ಮಶ ಒಡನಾಟ. ನೀರಿನಂತೆ ತಂಪಾಗಿರೋ ವ್ಯಕ್ತಿ, ಕ್ಷಣಮಾತ್ರದಲ್ಲಿ ಜ್ವಾಲೆಯಾಗುವ ನಿದರ್ಶನ. ಅಸಹಾಯಕ ಸ್ನೇಹಿತನ ಬೆನ್ನಿಗೆ ಸದಾ ನಿಂತ ಶಾಂತ ಮನಸ್ಸಿನ ಪರಾಕ್ರಮಿ. ಮಂಗಳೂರಿನ ವೈವಧ್ಯಮಯ ಬೈಗಳುಗಳ ಸುರಿಮಾಲೆ. ಹುಲಿವೇಷ ಹಾಗೂ ಅದಕ್ಕೆ ಮಂಗಳೂರಿನಲ್ಲಿರೋ ಪ್ರಾಮುಖ್ಯತೆ. ನಡೆಯುವ ಸರಣಿ ಕೊಲೆಗಳು ಹಾಗು ಕೊಲೆಗಡಕನ ಚಪ್ಪಲಿಯ ಕಥೆಗಳು ಮತ್ತಷ್ಟು ವಿಭಿನ್ನವಾಗಿದೆ. ರಾಜ್ ಬಿ ಶೆಟ್ಟಿ ಸಿನಿಮಾದುದ್ದಕ್ಕೂ ಧರಿಸುವ ಪಾದರಕ್ಷೆಗಳಿಗೆ ತನ್ನದೇ ಆದ ಫ್ಯಾನ್ ಫಾಲೋವರ್ಸ್ ಹುಟ್ಟಲಿದ್ದಾರೆ ಅನ್ನೋದ್ರಲ್ಲಿ ಸಂಶಯವಿಲ್ಲ.
ಮೊದಲ ಅರ್ಧ ಭಾಗದಲ್ಲಿ ಮುದ ನೀಡುವ ಸಿನಿಮಾ, ಎರಡನೇ ಅರ್ಧದಲ್ಲಿ ಬೋರ್ ಆಗತೊಡಗುತ್ತೆ. ಮುಂದೇನಾಗುತ್ತೆ ಅಂತ ವೀಕ್ಷಕನು ಊಹಿಸಲು ಸಾಧ್ಯವಾಗುವಂತ ರೀತಿಯಲ್ಲಿ ಚಿತ್ರ ಮುಂದುವರೆಯುತ್ತೆ. ಪ್ರಾಣಕ್ಕೆ ಪ್ರಾಣ ಕೊಡಲು ಸಿದ್ದರಿದ್ದ ಸ್ನೇಹಿತರೇ ಕೊನೆಗೆ ಬದ್ಧ ವೈರಗಳಾಗ್ತಾರೆ. ಇಬ್ಬರ ಸಾವುಗಳನ್ನು ಇಬ್ಬರೂ ಹೊಂಚುಹಾಕುತ್ತಾರೆ. ಆದ್ರೆ, ಸಿನಿಪ್ರಿಯರಿಗೆ ಇದೊಂದು ಅದ್ಭುತ ಸಿನಿಮಾ ಅನ್ನೋದ್ರಲ್ಲಿ ಸಂಶಯ ಬೇಡ. ಇಬ್ಬರ ನಟರಲ್ಲಿ ಯಾರು ಹೀರೋ ಎಂಬುದನ್ನು ಅಂತ್ಯದವರೆಗೂ ನಿರ್ಧರಿಸಲಾರದಂತ ಅದ್ಭುತ ಅಭಿನಯ. ನಾವೇ ಏನೇ ಹೇಳಿದ್ರು ಕಥೆ ಏನು ಅಂತ ಹೇಳೋಕೆ ಆಗಲ್ಲ.. ಒಂದ್ ನೋಡಿ ಕಥೆ ಏನು ಅನ್ನೋದನ್ನ ಡಿಸೈಡ್ ಮಾಡಿ.
ಸಿನಿಮಾದ ಮೇಕಿಂಗ್ ಆ್ಯಕ್ಟಿಂಗ್ ಎಲ್ಲವೂ ರಿಯಾಲಿಟಿಯಾಗಿವೆ. ಆದ್ರೆ ಸೆಕೆಂಡ್ ಆಫ್ ಲ್ಯಾಗ್ ಕೊಂಚ ಸ್ಟೋರಿ ಇದ್ರೆ ಚೆನ್ನಾಗಿತ್ತು. ಪ್ಯೂರ್ ಮಂಗಳೂರು ಭಾಷೆ ಅರ್ಥಆಗ್ಲಿಲ್ಲ ಅನ್ನೋ ಅಭಿಮಾನಿ ಅಭಿಪ್ರಾಯವೂ ಅಲ್ ಅಲ್ಲಿ ಕೇಳಿಬಂದಿವೆ. ಆದ್ರೆ ಇವನೆಲ್ಲ ಬದಿಗೊಟ್ಟಿ ಸಿನಿಮಾವನ್ನ ನೋಡೋದಾದ್ರೆ ‘‘ಗರುಡ ಗಮನ ವೃಷಭ ವಾಹನ’’ ಸಿನಿಮಾ ಸೂಪರ್.