ದಾವಣಗೆರೆ: ಕೊರೊನಾ ವಿರುದ್ಧದ ಹೋರಾಟದಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ತಮ್ಮ ಕ್ಷೇತ್ರದಲ್ಲಿ ಮಾಡ್ತಿರುವ ಕೆಲಸಕ್ಕೆ ಜನ ಫಿದಾ ಆಗಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ಕೊರೊನಾ ಸೋಂಕಿತರು ತಮ್ಮನ್ನ ಹೊನ್ನಾಳಿ ಕೋವಿಡ್ ಕೇರ್​ ಸೆಂಟರ್​ಗೇ ಶಿಫ್ಟ್​ ಮಾಡಿ ಅನ್ನುವಷ್ಟು. ಕೊರೊನಾ ಸೋಂಕಿತರ ಜೊತೆ ಡ್ಯಾನ್ಸ್​, ಯೋಗ, ಊಟ, ನಿದ್ರೆ ಮಾಡಿ ಗಮನ ಸೆಳೆಯುತ್ತಿರುವ ರೇಣುಕಾಚಾರ್ಯರ ಸೋಂಕಿತರ ಸೇವೆ ಮುಂದುವರಿದಿದೆ.

ಲೆಟೆಸ್ಟ್ ವಿಷಯ ಏನಂದ್ರೆ ರೇಣುಕಾಚಾರ್ಯ ಹೋಮ-ಹವನದ ಮೊರೆ ಹೋಗಿದ್ದಾರೆ. ಹೇಮಾ ಮಾಲಿನಿ ಅವರ ‘ಹೋಮ ಕೊರೊನಾ ವಿವಾದ’ ದೇಶದಲ್ಲಿ ಹಸಿಯಾಗಿರುವಾಗಲೇ ಶಾಸಕರು ಕೊರೊನಾ ಓಡಿಸಲು ಹೋಮ ಮಾಡಿಸಿ ಸುದ್ದಿಯಾಗಿದ್ದಾರೆ.

ಕೊರೊನಾ ಓಡಿಸಲು ಮೃತ್ಯುಂಜಯ, ಧನ್ವಂತರಿ ಹೋಮವನ್ನ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟಟರ್​​ನಲ್ಲಿ ಮಾಡಿಸಿದ್ದಾರೆ. ಶಾಸಕ ರೇಣುಕಾಚಾರ್ಯ, ಪತ್ನಿ ಸುಮಾ ಅವರಿಂದ ಮೃತ್ಯುಂಜಯ ಹೋಮ ಮಾಡಿಸಿ, ರಾಜ್ಯವನ್ನ ಕೊರೊನಾದಿಂದ ದೂರ ಮಾಡುವಂತೆ ದೇವರಲ್ಲಿ ಪಾರ್ಥಿಸಿದ್ದಾರೆ. ಇನ್ನು ಆ ಕೋವಿಡ್ ಕೇರ್​​ ಸೆಂಟರ್​ 800 ಬೆಡ್​​ಗಳನ್ನ ಹೊಂದಿದೆ.

ಇದನ್ನೂ ಓದಿ: ಹೇಮಾ ‘ಹೋಮ’: ಕೊರೊನಾ ಸಂಕಷ್ಟದಲ್ಲಿ ಯಡವಟ್ಟು ಮಾಡ್ಕೊಂಡ ಡ್ರೀಮ್​ ಗರ್ಲ್​​

The post ಹೇಮಾ ಮಾಲಿನಿ ‘ಹೋಮ’ ವಿವಾದ ಬೆನ್ನಲ್ಲೇ ಕೋವಿಡ್​ ಸೆಂಟರ್​ನಲ್ಲಿ ರೇಣುಕಾಚಾರ್ಯ ಧನ್ವಂತರಿ ಹೋಮ appeared first on News First Kannada.

Source: newsfirstlive.com

Source link

Leave a comment