ಹೇಳಿದಂತೆ ನಡೆದ ದೇವೇಂದ್ರ ಫಡ್ನವೀಸ್​; ಮುಂಬೈ ಸ್ಫೋಟದ ಆರೋಪಿಗಳೊಂದಿಗೆ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರದ ಬಗ್ಗೆ ಮಾಹಿತಿ ಬಹಿರಂಗ | Nawab Malik has underworld links BJP leader Devendra Fadnavis accused


ಹೇಳಿದಂತೆ ನಡೆದ ದೇವೇಂದ್ರ ಫಡ್ನವೀಸ್​; ಮುಂಬೈ ಸ್ಫೋಟದ ಆರೋಪಿಗಳೊಂದಿಗೆ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರದ ಬಗ್ಗೆ ಮಾಹಿತಿ ಬಹಿರಂಗ

ದೇವೆಂದ್ರ ಫಡ್ನವೀಸ್​

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ದೀಪಾವಳಿಗೂ ಮೊದಲು ಒಂದು ಮಾತಾಡಿದ್ದರು. ಮಹಾರಾಷ್ಟ್ರ ಸಚಿವ ನವಾಬ್​ ಮಲ್ಲಿಕ್​ಗೆ ಭೂಗತ ಲೋಕದ ಸಂಪರ್ಕವಿದೆ ಎಂಬುದನ್ನು ನಾನು ದೀಪಾವಳಿಯ ನಂತರ, ಸಾಕ್ಷಿ ಸಮೇತ ಬಹಿರಂಗಪಡಿಸುತ್ತೇನೆ ಎಂದಿದ್ದರು. ಅದರಂತೆ ಇಂದು ಸುದ್ದಿಗೋಷ್ಠಿ ನಡೆಸಿ,  ನವಾಬ್​ ಮಲ್ಲಿಕ್​ಗೆ ಭೂಗತ ಜಗತ್ತಿನ ನಂಟಿದೆ ಎಂಬುದನ್ನು ಪುನರುಚ್ಚರಿಸಿದರು. ಅದಕ್ಕೆ ಸಂಬಂಧಪಟ್ಟ ದಾಖಲೆಯನ್ನೂ ಪ್ರಸ್ತುತಪಡಿಸಿದ್ದಾರೆ.

ನವಾಬ್​ ಮಲ್ಲಿಕ್​ ಭೂಗತ ಜಗತ್ತಿನ ನಂಟಿನ ಕುರಿತು ದೀಪಾವಳಿ ನಂತರ ಹೇಳುತ್ತೇನೆ ಎಂದು ಹೇಳಿದ್ದೆ. ಆದರೆ ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಪಡೆಯಲು ಸ್ವಲ್ಪ ಸಮಯ ಹಿಡಿಯಿತು ಎಂದು ಹೇಳಿದ ದೇವೇಂದ್ರ ಫಡ್ನವೀಸ್​, 1993ರಲ್ಲಿ ನಡೆದಿದ್ದ ಮುಂಬೈ ಸ್ಫೋಟದ ಇಬ್ಬರು ಆರೋಪಿಗಳೊಂದಿಗೆ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರ, ಒಪ್ಪಂದ ಮಾಡಿಕೊಂಡಿದ್ದರು ಎಂದು ಆರೋಪಿಸಿದರು.

TV9 Kannada


Leave a Reply

Your email address will not be published. Required fields are marked *