ಹೇ.. ಇದು ಬೆಂಗಳೂರು ಅಲ್ಲ ಮೊಹಮ್ಮದ್ ನಲಪಾಡ್​ಗೆ ಮಂಡ್ಯ ಕೈ ಕಾರ್ಯಕರ್ತರ ಆವಾಜ್ | Mandya congress activists slams on Mohammed Nalapadಮಂಡ್ಯದಲ್ಲಿ ‘ಕೈ’​ ಕಾರ್ಯಕರ್ತರು ಯೂತ್​ ಕಾಂಗ್ರೆಸ್​ ಅಧ್ಯಕ್ಷ ಮೊಹಮ್ಮದ್ ನಲಪಾಡ್​ಗೆ ತರಾಟೆ ತೆಗೆದುಕೊಂಡಿದ್ದಾರೆ.

TV9kannada Web Team


| Edited By: Vivek Biradar

Oct 03, 2022 | 5:37 PM
ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೋ ಯಾತ್ರೆ ನಡೆಯುತ್ತಿದ್ದು, ಯಾತ್ರೆ ಇಂದು ಮಂಡ್ಯ ಜಿಲ್ಲೆಗೆ ಕಾಲಿಟ್ಟಿದೆ. ಮಂಡ್ಯದಲ್ಲಿ ‘ಕೈ’​ ಕಾರ್ಯಕರ್ತರು ಯೂತ್​ ಕಾಂಗ್ರೆಸ್​ ಅಧ್ಯಕ್ಷ ಮೊಹಮ್ಮದ್ ನಲಪಾಡ್​ಗೆ ತರಾಟೆ ತೆಗೆದುಕೊಂಡಿದ್ದಾರೆ. ಯಾತ್ರೆಯಲ್ಲಿ ಜನರನ್ನು ನಿಯಂತ್ರಣ ಮಾಡುವ ವೇಳೆ ಪೊಲೀಸರು-ಜನರ ವಾಗ್ವಾದ ನಡೆದಿದೆ. ಈ ವೇಳೆ ನಲಪಾಡ್ ಓಡಿ ಬಂದು ಕೈಮುಗಿದು ಜನರನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಆಗ ಮಂಡ್ಯ ‘ಕೈ’ ಕಾರ್ಯಕರ್ತರು ಹೇ.. ಇದು ಬೆಂಗಳೂರು ಅಲ್ಲ ಎಂದು ನಲಪಾಡ್​ಗೆ ಆವಾಜ್ ಹಾಕಿದ್ದಾರೆ. ಬಳಿಕ ಮೊಹಮ್ಮದ್ ನಲಪಾಡ್ ಕೈ ಮುಗಿದು ವಾಪಸ್ ಹೋಗಿದ್ದಾರೆ.

TV9 Kannada


Leave a Reply

Your email address will not be published.