ಬೆಂಗಳೂರು: ಸಿಎಂ ಬದಲಾವಣೆ ಖಚಿತ ಎಂಬ ಚರ್ಚೆಗಳಾಗುತ್ತಿರುವ ವಿಚಾರವಾಗಿ ನ್ಯೂಸ್​ಫಸ್ಟ್​ ಜೊತೆಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ಸಂಸದ ಬಿ. ವೈ. ರಾಘವೇಂದ್ರ.. ಯಾವತ್ತು ಹೈಕಮಾಂಡ್ ಆದೇಶ ಕೊಡುತ್ತೆ ಅಂದು ಹಿಂದೆ ಸರಿಯಲು ಸಿದ್ಧನಿದ್ದೇನೆ ಅಂತ 2 ತಿಂಗಳ ಹಿಂದೆಯೂ ಸಹ ಹೇಳಿದ್ದರು ಎಂದಿದ್ದಾರೆ.

ಹೈಕಮಾಂಡ್ ಆದೇಶಕ್ಕೆ ತಲೆಬಾಗುವುದು ನಮ್ಮ ಕರ್ತವ್ಯ ಎಂದು ಅವರು ಒಂದೇ ಮಾತಿನಲ್ಲಿ ಹೇಳಿದ್ದಾರೆ..

ಪಕ್ಷ ಎಲ್ಲವನ್ನೂ ಕೊಟ್ಟಿದೆ.. ಪಕ್ಷ ಯಾವಾಗ ಆದೇಶ ಕೊಡುತ್ತೆ ಆಗ ತಲೆಬಾಗುವುದು ನಮ್ಮ ಕರ್ತವ್ಯ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಒಂದೇ ಮಾತಿನಲ್ಲಿ ಹೇಳಿದ್ದಾರೆ. ಯಾವತ್ತು ಹೈಕಮಾಂಡ್ ಆದೇಶ ಕೊಡುತ್ತೆ ಅಂದು ಹಿಂದೆ ಸರಿಯಲು ಸಿದ್ಧನಿದ್ದೇನೆ ಅಂತ 2 ತಿಂಗಳ ಹಿಂದೆಯೂ ಸಹ ಹೇಳಿದ್ದರು. ಮುಂದೆಯೂ ಪಕ್ಷದ ಕಾರ್ಯಕರ್ತರಾಗಿ ಪಕ್ಷಕ್ಕೆ ಗೌರವಕೊಟ್ಟುಕೊಂಡು ಮುನ್ನಡೆಯಲಿದ್ದಾರೆ. ಹೈಕಮಾಂಡ್​ನಿಂದ ಅಧಿಕೃತವಾಗಿ ಸಂದೇಶ ಬಂದಿಲ್ಲ.. ಫೋನ್​ನಲ್ಲಿ ಈ ವಿಚಾರವನ್ನ ಅವರ ಜೊತೆ ಮಾತಾಡುವಷ್ಟು ಸಲಿಗೆ ಇಟ್ಟುಕೊಂಡಿಲ್ಲ ಎಂದರು.

ಸ್ವಾಮೀಜಿಗಳು ಆಶೀರ್ವಾದ ಮಾಡಿ ನೈತಿಕ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ

ಮಠಾಧೀಶರ ಬೆಂಬಲ ಕುರಿತು ಪ್ರತಿಕ್ರಿಯಿಸಿ.. ಮಠಾಧೀಶರ ಬೆಂಬಲ ಹಾಗೂ ಸಂಘಟನೆಯ ಆಶೀರ್ವಾದ ಎಲ್ಲವೂ ಸೇರಿಕೊಂಡೇ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಈ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಸಿಎಂ ಮತ್ತು ಎಲ್ಲ ಮಠಾಧೀಶರ ಮಧ್ಯೆ ಇರುವ ಸಂಬಂಧ ರಾಜಕೀಯ ಪಕ್ಷ ಬೆಳೆಯಲು ಕಾರಣವಾಗಿದೆ. ಈಗ ಅವರೆಲ್ಲರೂ ಬಂದು ಆಶೀರ್ವಾದ ಮಾಡಿ ನೈತಿಕ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಸ್ವಾಮೀಜಿಗಳ ಅನಿಸಿಕೆ, ಭಾವನೆಗಳು ತಪ್ಪಲ್ಲ..

ಸಿಎಂ ಆಗಿ ಬಿಎಸ್​ವೈ ಅವರೇ ಮುಂದುವರೆಯಬೇಕು ಎಂದು ಸ್ವಾಮೀಜಿಗಳು ಒತ್ತಡ ಹೇರುತ್ತಿರುವುದಕ್ಕೆ ಪ್ರತಿಕ್ರಿಯಿಸಿ.. ಸ್ವಾಮೀಜಿಗಳ ಅನಿಸಿಕೆ, ಭಾವನೆಗಳು ತಪ್ಪಲ್ಲ.. ಇದೆಲ್ಲದರ ಆಚೆಗೆ ಪಕ್ಷ, ಹೈಕಮಾಂಡ್​ ತೀರ್ಮಾನವೇ ಅಂತಿಮವಾಗುತ್ತದೆ ಎಂದರು.

ಯಾವತ್ತೂ ನೆಮ್ಮದಿಯಿಂದ ಸರ್ಕಾರ ನಡೆಸಲಾಗಲಿಲ್ಲ..

ಅವರಿಗೆ ಯಾವತ್ತೂ ನೆಮ್ಮದಿಯಿಂದ ಸರ್ಕಾರ ನಡೆಸಲಾಗಲಿಲ್ಲ ಎನ್ನುವ ನೋವಂತೂ ಇದ್ದೇ ಇದೆ. ಅವರು ಮುಖ್ಯಮಂತ್ರಿಗಳಾಗ್ತಾ ಇದ್ದಂತೆ ಫ್ಲಡ್ ಎಫೆಕ್ಟ್ ಆಯ್ತು.. ಕೋವಿಡ್ ಬಂತು, ಆರ್ಥಿಕ ಸಂಕಷ್ಟದ ಸವಾಲುಗಳು ಬಂತು.. ರಾಜಕೀಯದ ಸವಾಲು ಮತ್ತು ಇಂಥ ಸಮಸ್ಯೆ ಎರಡನ್ನೂ ಸ್ವೀಕಾರ ಮಾಡಿಕೊಂಡು ನಡೆಸಿಕೊಂಡು ಹೋಗುವ ಅನಿವಾರ್ಯತೆ ಬಂತು. ಹಿಂದೆಯೂ ಈಗಲೂ ಈ ಸಮಸ್ಯೆಗಳನ್ನು ಎದುರಿಸಬೇಕಾಯ್ತು. ಅವರ ನಕ್ಷತ್ರದಲ್ಲೇ ಇದೆಯೋ ಏನೋ ಗೊತ್ತಿಲ್ಲ.. ವಿರೋಧ ಮತ್ತು ಆಡಳಿತ ಪಕ್ಷದಲ್ಲಿದ್ದಾಗಲೂ ಕೂಡ ಎಲ್ಲವನ್ನೂ ಹೋರಾಟ ಮಾಡಿಕೊಂಡೇ ಮುಂದಕ್ಕೆ ತೆಗೆದುಕೊಂಡಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಯ್ತು..

ರಾಜಕೀಯವಾಗಿ ಎಂದಿಗೂ ಕೂಡ ಕುಟುಂಬದ ಸಲಹೆಯನ್ನ ಅವರು ನಿರೀಕ್ಷೆ ಮಾಡುವುದಿಲ್ಲ.. ಅವರಿಗೆ ಸರಿ ಅನ್ನಿಸಿದ್ದನ್ನು ಮಾಡಿಕೊಂಡು ಹೋಗ್ತಿರ್ತಾರೆ ಎಂದು ಇದೇ ವೇಳೆ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದರು.

The post ಹೈಕಮಾಂಡ್ ಆದೇಶಕ್ಕೆ ತಲೆಬಾಗುವುದು ಕರ್ತವ್ಯ ಅಂತಾ ಒಂದೇ ಮಾತಿನಲ್ಲಿ ಸಿಎಂ ಹೇಳಿದ್ದಾರೆ-ಬಿ.ವೈ. ರಾಘವೇಂದ್ರ appeared first on News First Kannada.

Source: newsfirstlive.com

Source link