ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ ಮಾಡಿ ತಮ್ಮನ್ನ ವರ್ಗಾವಣೆ ಮಾಡಿದ್ದನ್ನ ಪ್ರಶ್ನಿಸಿ ಐಎಎಸ್​ ಅಧಿಕಾರಿ ಬಿ.ಶರತ್​​ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಇಂದು ಹೈಕೋರ್ಟ್​ನ ವಿಭಾಗೀಯ ಪೀಠದಲ್ಲಿ ನಡೆಯಿತು.

ಸಿಎಟಿ ಆದೇಶ ರದ್ದುಪಡಿಸಿ ಜೊತೆಗೆ ರೋಹಿಣಿ ಸಿಂಧೂರಿ ನೇಮಕ ರದ್ದ ಮಾಡಲು ಬಿ.ಶರತ್ ಮನವಿ ಮಾಡಿಕೊಂಡಿದ್ದರು. ವಿಚಾರಣೆ ವೇಳೆ ವಾದ ಮಂಡಿಸಲು ಸರ್ಕಾರಿ ವಕೀಲರು ಸಮಯ ಕೇಳಿದ ಹಿನ್ನೆಲೆಯಲ್ಲಿ ಕೋರ್ಟ್​, ಅರ್ಜಿ ವಿಚಾರಣೆಯನ್ನ ಜೂನ್ 7ಕ್ಕೆ ಮುಂದೂಡಿದೆ.

ಸಿಎಟಿ ಆದೇಶ ಪ್ರಶ್ನಿಸಿ ಸರ್ಕಾರದಿಂದಲೂ ಅರ್ಜಿ ಹಾಕಲಾಗಿದೆ. ಹೀಗಾಗಿ ವಾದ ಮಂಡಿಸಲು ನಮಗೆ ಹೆಚ್ಚಿನ ಸಮಯವಕಾಶ ಬೇಕಾಗಿದೆ ಎಂದು ವಕೀಲರು ಕೋರ್ಟ್​ಗೆ ತಿಳಿಸಿದರು. ಆದರೆ ಕೋರ್ಟ್​ ಹೆಚ್ಚಿನ ಕಾಲಾವಕಾಶ ನೀಡಲು ನಿರಾಕರಿಸಿದೆ. ಜೂ.7 ಕ್ಕಿಂತ ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದಿ ವಿಚಾರಣೆಯನ್ನ ಮುಂದೂಡಿತು.

The post ಹೈಕೋರ್ಟ್​ ಅಂಗಳದಲ್ಲಿ ಬಿ.ಶರತ್ ವರ್ಗಾವಣೆ ವಿಚಾರ; ಇಂದಿನ ವಿಚಾರಣೆ ಏನಾಯ್ತು? appeared first on News First Kannada.

Source: newsfirstlive.com

Source link