ಹೈಕೋರ್ಟ್​ ಆದೇಶವನ್ನು ಎಲ್ಲರೂ ಪಾಲಿಸಬೇಕು; ಆಗ ಸಮಸ್ಯೆ ಬಗೆಹರಿಸಲು ಸಾಧ್ಯ: ಬಸವರಾಜ ಬೊಮ್ಮಾಯಿ | Basavaraj Bommai on Hijab Row in Karnataka Zameer Ahmed Khan Karnataka Governor


ಹೈಕೋರ್ಟ್​ ಆದೇಶವನ್ನು ಎಲ್ಲರೂ ಪಾಲಿಸಬೇಕು; ಆಗ ಸಮಸ್ಯೆ ಬಗೆಹರಿಸಲು ಸಾಧ್ಯ: ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಹೈಕೋರ್ಟ್​ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಹೈಕೋರ್ಟ್​ ಆದೇಶ ಪಾಲಿಸಲು ಮುಕ್ತವಾಗಿ ಬಿಡಬೇಕು. ಆಗ ಸಮಸ್ಯೆ ಬಗೆಹರಿಸಲು ಸಾಧ್ಯ ಎನ್ನುವುದು ನನ್ನ ಅಭಿಪ್ರಾಯ. ಇಂದಿನಿಂದ ತರಗತಿ ಪುನಾರಂಭವಾಗಿದೆ. ಸಂಜೆ ಮತ್ತೊಂದು ಸುತ್ತಿನ ಸಭೆ ಸೇರಿ ಎಸ್​ಒಪಿ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ (ಫೆಬ್ರವರಿ 14) ಹೇಳಿಕೆ ನೀಡಿದ್ದಾರೆ.

ಹಿಜಾಬ್ ವಿವಾದದ ಕುರಿತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಜಮೀರ್​ ಹೇಳಿಕೆ ಎಷ್ಟು ಸಮಂಜಸವೆಂದು ದೇಶ ಗಮನಿಸ್ತಿದೆ. ಶಾಸಕ ಜಮೀರ್ ಮನಸ್ಥಿತಿ ಏನು ಎನ್ನುವುದು ಗೊತ್ತಾಗುತ್ತೆ. ಜಮೀರ್ ಅಹ್ಮದ್​ ಹೇಳಿಕೆಗೆ ಇಡೀ ದೇಶವೇ ಪ್ರತಿಕ್ರಿಯಿಸಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯಪಾಲರ ಭಾಷಣದಲ್ಲಿ ಎಲ್ಲವನ್ನೂ ಸೇರಿಸಲು ಆಗಲ್ಲ. ಉತ್ತರ ಕೊಡುವ ಸಂದರ್ಭದಲ್ಲಿ ಎಲ್ಲವನ್ನೂ ಹೇಳುತ್ತೇವೆ. ಬೇರೆ ಬೇರೆ ಇಲಾಖೆಗಳ ಎಲ್ಲಾ ಸಾಧನೆ ಸೇರಿಸಲು ಆಗಲ್ಲ. ರಾಜ್ಯಪಾಲರ ಭಾಷಣಕ್ಕೆ ಉತ್ತರಿಸುವಾಗ ಉತ್ತರ ನೀಡುತ್ತೇವೆ ಎಂದು ಬೊಮ್ಮಾಯಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಚಂದ್ರಾಲೇಔಟ್​ನ ವಿದ್ಯಾಸಾಗರ ಪಬ್ಲಿಕ್ ಶಾಲೆ ಪ್ರಕರಣ; ಇಸ್ಲಾಂ ಧರ್ಮದ ಬಗ್ಗೆ ಶಿಕ್ಷಕಿ ತಪ್ಪಾಗಿ ಮಾತನಾಡಿದ್ದಾರೆ

ಚಂದ್ರಾಲೇಔಟ್​ನ ವಿದ್ಯಾಸಾಗರ ಪಬ್ಲಿಕ್ ಶಾಲೆ ಪ್ರಕರಣದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಶಿಕ್ಷಕಿ ತಪ್ಪಾಗಿ ಮಾತನಾಡಿದ್ದಾರೆ ಎಂದು ಮುಸ್ಲಿಂ ಸಮುದಾಯದ ಮುಖಂಡ ನ್ಯಾಮತುಲ್ಲಾ ಹೇಳಿದ್ದಾರೆ. ಇದನ್ನು ಕೇಳುವುದಕ್ಕಾಗಿ ನಾವು ಶಾಲೆ ಬಳಿ ಹೋಗಿದ್ದೆವು. ಪೋಷಕರನ್ನು ಹೊರತುಪಡಿಸಿ ಬೇರೆಯವರು ಬಂದಿರಲಿಲ್ಲ. ಶಿಕ್ಷಕಿಯನ್ನು ಕೆಲಸದಿಂದ ತೆಗೆಯುವಂತೆ ಹೇಳಿದ್ದೆವು. ಪುನೀತ್ ಕೆರೆಹಳ್ಳಿ, ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದೇವೆ. ಶಾಲೆ ಬಳಿಗೆ ಹೊರಗಿನ ವ್ಯಕ್ತಿ ಪುನೀತ್​ ಯಾಕೆ ಬರಬೇಕಿತ್ತು. ಸ್ಥಳೀಯ ಪೊಲೀಸರು ಕ್ರಮಕೈಗೊಳ್ಳದಿದ್ದರೆ ದೂರು ನೀಡುತ್ತೇವೆ. ಹಿರಿಯ ಅಧಿಕಾರಿ ಭೇಟಿ ಮಾಡಿ ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದು ಮುಸ್ಲಿಂ ಸಮುದಾಯದ ಮುಖಂಡ ನ್ಯಾಮತುಲ್ಲಾ ಹೇಳಿದ್ದಾರೆ.

ಹಿಜಾಬ್ ತೆಗೆಯಲು ನಿರಾಕರಣೆ; 10 ಜನ ವಿದ್ಯಾರ್ಥಿನಿಯರು ಮನೆಗೆ ವಾಪಸ್

ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹಿನ್ನೆಲೆ, ಕೋರ್ಟ್ ಮದ್ಯಂತರ ಆದೇಶ ಬಳಿಕ ಪ್ರೌಢಶಾಲೆ ಪುನಾರಂಭ ಮಾಡಲಾಗಿದೆ. ಆದರೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿರುವ ಪ್ರೌಢಶಾಲೆಗೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದಾರೆ. ಹಿಜಾಬ್ ತೆಗೆದು ತರಗತಿಗೆ ಬರಲು ಶಾಲಾ ಸಿಬ್ಬಂದಿ ಸೂಚನೆ ಕೊಟ್ಟಿದ್ದಾರೆ. 10ವಿದ್ಯಾರ್ಥಿಗಳಿಂದ ಹಿಜಾಬ್ ತೆಗೆಯಲು ನಿರಾಕರಣೆ ವ್ಯಕ್ತವಾಗಿದೆ. ಹೀಗಾಗಿ 10 ಜನ ವಿದ್ಯಾರ್ಥಿನಿಯರು ಮನೆಗೆ ವಾಪಸ್ಸಾಗಿದ್ದಾರೆ. ಹಿಜಾಬ್ ಇಲ್ಲದೆ ಶಾಲೆಗೆ ಬರಲು ಪೋಷಕರು ಒಪ್ಪಲ್ಲ‌ ಎಂದಿರುವ ವಿದ್ಯಾರ್ಥಿನಿಯರು. ಈ ಹಿನ್ನೆಲೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಶೀಘ್ರ ಪೋಷಕರ ಸಭೆ ನಡೆಸಲಾಗಿದೆ. ಸಭೆ ನಡೆಸಿ ಪೋಷಕರು, ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಲಾಗಿದೆ. ಈ ಬಗ್ಗೆ, ಟಿವಿ9ಗೆ ಚಿತ್ರದುರ್ಗ ಎಸ್​ಪಿ ಕೆ. ಪರಶುರಾಮ್ ಮಾಹಿತಿ ನೀಡಿದ್ದಾರೆ.

TV9 Kannada


Leave a Reply

Your email address will not be published.