ಬೆಂಗಳೂರು: ಐಎಂಎ ಸಂಸ್ಥೆಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ರೋಷನ್ ಬೇಗ್ ಆಸ್ತಿ ಜಪ್ತಿಗೆ ಕ್ರಮ ಕೈಗೊಂಡಿರುವುದಾಗಿ ಮಾಹಿತಿ ನೀಡಿದೆ.

ಬಿಬಿಎಂಪಿ ಆಯುಕ್ತರು, ಜಿಲ್ಲಾಧಿಕಾರಿಗಳಿಗೆ ರೋಷನ್ ಬೇಗ್ ಆಸ್ತಿ ವಿವರ ನೀಡುವಂತೆ ಪತ್ರ ಬರೆದಿದ್ದು ಸಕ್ಷಮ ಪ್ರಾಧಿಕಾರ ಪ್ರಮಾಣಪತ್ರದಲ್ಲಿನ ಆಸ್ತಿ ವಿವರ ನೀಡಿದೆ. ಆಸ್ತಿ ವಿವರ ಪತ್ತೆಯಾದ ಕೂಡಲೇ ಕೆಪಿಐಡಿ ಕಾಯ್ದೆಯಡಿ ರೋಷನ್ ಬೇಗ್ ಆಸ್ತಿ ಜಪ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೈಕೋರ್ಟ್​ಗೆ ರಾಜ್ಯ ಸರ್ಕಾರ ಹೇಳಿಕೆ ನೀಡಿದೆ.

ಆಸ್ತಿ ಪರಭಾರೆಯಾಗುವ ಮುನ್ನ ಕ್ರಮಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಸರ್ಕಾರಿ ಶಾಲೆಗೆ 10 ಕೋಟಿ ಐಎಂಎ ದೇಣಿಗೆ ಬಳಕೆಯಾಗಿದ್ದು ದೇಣಿಗೆ ಹಣ ಹಿಂದಿರುಗಿಸಲು ಸಾಧ್ಯವಿಲ್ಲವೆಂದು ಸರ್ಕಾರ ಮಾಹಿತಿ ನೀಡಿದೆ. ಠೇವಣಿದಾರರಿಗೆ ಸೇರಿದ ಹಣ ದೇಣಿಗೆ ನೀಡಬಹುದೇ.? ಎಂದು ಕೇಳಿರುವ ಹೈಕೋರ್ಟ್ ಈ ಬಗ್ಗೆ ವಾದ‌ ಮಂಡಿಸಲು ಸರ್ಕಾರಿ ವಕೀಲರಿಗೆ ಸೂಚನೆ ನೀಡಿದೆ.

The post ಹೈಕೋರ್ಟ್​ ಛೀಮಾರಿ ಬೆನ್ನಲ್ಲೇ ರೋಷನ್ ಬೇಗ್ ಆಸ್ತಿ ಜಪ್ತಿಗೆ ಎಚ್ಚೆತ್ತ ಸರ್ಕಾರ appeared first on News First Kannada.

Source: newsfirstlive.com

Source link