ಬೆಂಗಳೂರು: ಕೊರೊನಾ ಬೆಡ್ ಸ್ಕ್ಯಾಮ್ ಮ್ಯಾಟರ್..ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ನೇತೃತ್ವದ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು. ಸಂಸದ/ ವಕೀಲ ತೇಜಸ್ವಿ ಸೂರ್ಯ ಆರೋಪಗಳ ಬಗ್ಗೆ ತನಿಖೆ ನಡೆಸಿ ತನಿಖೆಯ ಸಂಪೂರ್ಣ ವರದಿಯನ್ನ ಮುಚ್ಚಿದ ಲಕೋಟೆಯಲ್ಲಿ‌ ನೀಡಿ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಗಳಿಗೆ ಹೈಕೋರ್ಟ್ ಆದೇಶ ನೀಡಿದೆ.

ಹೈಕೋರ್ಟ್ ಆದೇಶದಲ್ಲಿ ಮೇ 11 ರಂದು ಮುಂದಿನ ವಿಚಾರಣೆ ವೇಳೆ ಸಲ್ಲಿಸಲು ಸೂಚನೆ ನೀಡಲಾಗಿದೆ. ಬಿಬಿಎಂಪಿ & ಆಸ್ಪತ್ರೆ ಅಧಿಕಾರಿಗಳು ಹಣ ಗಳಿಸುವ ಉದ್ದೇಶದಿಂದ ಕೃತ್ಯ ಎಸಗಿದ್ದಾರೆ.. ಕನಿಷ್ಠ 4,065 ಬೆಡ್ ಬ್ಲಾಕ್ ಸ್ಕ್ಯಾಮ್ ಆಗಿದೆ ಎಂದು ಆರೋಪಿಸಲಾಗಿತ್ತು. ಈ ಅಂಶಗಳನ್ನ ಹೈಕೋರ್ಟ್ ಗಮನಕ್ಕೆ ಹಿರಿಯ ವಕೀಲ ಜಿ.ಆರ್ ಮೋಹನ್ ತಂದಿದ್ದರು.

The post ಹೈಕೋರ್ಟ್ ಮೆಟ್ಟಿಲೇರಿದ ಬೆಡ್ ಸ್ಕ್ಯಾಮ್.. ತೇಜಸ್ವಿ ಆರೋಪದ ಬಗ್ಗೆ ಕೋರ್ಟ್ ಹೇಳಿದ್ದಿದು appeared first on News First Kannada.

Source: newsfirstlive.com

Source link