ಹೈದರಾಬಾದ್‌ನ ಕಾಲೇಜ್ ಲ್ಯಾಬ್‌ನಲ್ಲಿ ಅನಿಲ ಸೋರಿಕೆ: 25 ವಿದ್ಯಾರ್ಥಿಗಳು ಅಸ್ವಸ್ಥ – students Fall Ill after gas leak from a laboratory at a college in Telangana’s Hyderabad


ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಕಸ್ತೂರ್ ಬಾ ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಫೋರೆನ್ಸಿಕ್ ತಂಡವು ಶಂಕಿತ ಅನಿಲ ಸೋರಿಕೆಯ ಕಾರಣವನ್ನು ಕಂಡುಹಿಡಿಯಲು ಸ್ಥಳಕ್ಕೆ ತಲುಪಿದೆ.

ಹೈದರಾಬಾದ್‌ನ ಕಾಲೇಜ್ ಲ್ಯಾಬ್‌ನಲ್ಲಿ ಅನಿಲ ಸೋರಿಕೆ: 25 ವಿದ್ಯಾರ್ಥಿಗಳು ಅಸ್ವಸ್ಥ

ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದು

Image Credit source: ANI

ಹೈದರಾಬಾದ್:  ಹೈದರಾಬಾದ್‌ನ (Hyderabad) ಕಾಲೇಜಿನ ಪ್ರಯೋಗಾಲಯದಿಂದ ಅನಿಲ ಸೋರಿಕೆಯಾಗಿದ್ದು(Gas leak) 25 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ. ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಕಸ್ತೂರ್ ಬಾ ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಫೋರೆನ್ಸಿಕ್ ತಂಡವು ಶಂಕಿತ ಅನಿಲ ಸೋರಿಕೆಯ ಕಾರಣವನ್ನು ಕಂಡುಹಿಡಿಯಲು ಸ್ಥಳಕ್ಕೆ ತಲುಪಿದೆ.  ಅನಿಲ ಸೋರಿಕೆಯಾದ ನಂತರ ಅಸ್ವಸ್ಥರಾಗಿದ್ದ ಎಲ್ಲಾ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

ಹೆಚ್ಚುವರಿ ಡಿಸಿಪಿ ಪ್ರಕಾರ, 2 ಗಂಟೆಗೆ ಈ ಘಟನೆ ಸಂಭವಿಸಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಉಸಿರಾಟದ ತೊಂದರೆ ಉಂಟಾದ ನಂತರ ಮಧ್ಯಾಹ್ನ  ಕನಿಷ್ಠ 10-15 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಅನಿಲ ಸೋರಿಕೆಯೇ ಅಥವಾ ಇನ್ನಾವುದೇ ಸಮಸ್ಯೆಯೇ ಎಂಬ ಬಗ್ಗೆ ವಿಪತ್ತು ನಿರ್ವಹಣಾ ತಂಡದಿಂದ ತನಿಖೆ ನಡೆಸಲಾಗುತ್ತಿದೆ. ಸದ್ಯ ಕಾಲೇಜಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎನ್ನಲಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.